VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 31, 2010

ಗುಡುಗಿದ ರೋಹಿತ್ ಶರ್ಮಾ: ಅಡಗಿದ ಲಂಕಾ

*ರೈನಾ ಪಡೆಗೆ 7 ವಿಕೆಟ್ ಜಯ
*ರೋಹಿತ್ ಎರಡನೆ ಶತಕ
*ಕೊಹ್ಲಿ ಅರ್ಧಶತಕ

*ದಿಲ್ಶಾನ್-ಮ್ಯಾಥ್ಯೂಸ್ ಹೋರಾಟ ಫಲ ನೀಡಲಿಲ್ಲ

ಬುಲಿವಿಯಾ, ಮೇ 30: ರೋಹಿತ್ ಶರ್ಮಾರ ಎರಡನೇ ಶತಕದ ಮತ್ತು ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ, ಇಂದು ನಡೆದ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಎರಡನೆ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.ಶ್ರೀಲಂಕಾ ವಿಧಿಸಿದ 243ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತ 3 ವಿಕೆಟ್‌ಗಳನ್ನು ಕಳೆದುಕೊಂಡು ನಿಗದಿತ ಗುರಿ ತಲುಪುವುದರ ಮೂಲಕ ವಿಜಯ ಪತಾಕೆ ಹಾರಿಸಿತು.

ಬೊಲವಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಶ್ರೀಲಂಕ ವಿರುದ್ಧ ವಿಜಯದ ರನ್ ಬಾರಿಸಿ ಪೆವಿಲಿಯನ್‌ಗೆ ಹಿಂದಿರುಗುತ್ತಿರುವ ಶತಕ ರ ರೋಹಿತ್ ಶರ್ಮಾ ಮತ್ತು ತಂಡದ ನಾಯಕ ಸುರೇಶ್ ರೈನಾ.

ರೋಹಿತ್ ಶರ್ಮಾ 100 ಎಸೆತ ಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಇರುವ ಅಜೇಯ 101 ರನ್ ಮತ್ತು ಇವರಿಗೆ ಸಾಥ್ ನೀಡಿದ ನಾಯಕ ಸುರೇಶ್ ರೈನಾ ಅಜೇಯ 24 ರನ್ ಮಾಡಿ ವಿಜಯದ ದಾಖಲೆ ಬರೆದರು.ಳೆದ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡಿದ್ದ ಭಾರತ ತಂಡದ ನಾಯಕ ಸುರೇಶ ರೈನಾ ಈ ಬಾರಿ ಅಂತಹ ತಪ್ಪು ಮಾಡಲಿಲ್ಲ. ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು.

ಶ್ರೀಲಂಕಾ ವಿಧಿಸಿದ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್(18) ಮತ್ತು ಮುರಳಿ ವಿಜಯ್ (14) ನಿಧಾನವಾಗಿ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಡುವ ನಿಟ್ಟಿನಲ್ಲಿ ಶ್ರಮಿಸಿದರು. 6.4 ಓವರ್‌ಗಳಲ್ಲಿ ತಂಡದ ಮೊತ್ತ 28 ತಲುಪುವಷ್ಟರಲ್ಲಿ ನುವಾನ್ ಕುಲ ಶೇಖರ್ ಮುರಳಿ ವಿಜಯರನ್ನು ಎಲ್‌ಬಿಗೆ ಕೆಡವುದರ ಮೂಲಕ ಭಾರತಕ್ಕೆ ಮೊದಲ ಆಘಾತ ನೀಡಿದರು.

ಮುರಳಿ ವಿಜಯ್ ಪೆವಿಲಿಯನ್‌ಗೆ ವಾಪಸಾಗುತ್ತಿದ್ದಂತೆ ಉಪ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದರು. 9.4ನೆ ಓವರ್‌ನಲ್ಲಿ ಭಾರತಕ್ಕೆ ಇನ್ನೊಮ್ಮೆ ಆಘಾತ ದಿನೇಶ್ ಕಾರ್ತಿಕ್ ಔಟ್. ಬಳಿಕ ಬಂದ ರೋಹಿತ್ ಶರ್ಮಾರು ವಿರಾಟ್ ಕೊಹ್ಲಿಗೆ ಸಾಥ್ ನೀಡಿದರು. ಇವರಿಬ್ಬರು ತಂಡಕ್ಕೆ ಆಸರೆಯಾಗಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಆಡುತ್ತಾ ,ಆಟವನ್ನು ಮುಗಿಸಲು ಆತುರ ತೋರಿದರು. 37.4ನೆ ಓವರ್‌ನಲ್ಲಿ , ಸೂರಜ್ ರಣದೀವ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ಯತ್ನಿಸಿದರು. ಆದರೆ ಅವರು ಬಾರಿಸಿದ ಚೆಂಡು ಲಾಂಗ್ ಆನ್‌ನಲ್ಲಿ ಕ್ಷೇತ್ರರಕ್ಷಣೆಯಲ್ಲಿದ್ದ ದಿಲ್‌ಹಾರ್ ಫೆರ್ನಾಂಡೊ ಕೈ ಸೇರಿತು. ಇದರೊಂದಿಗೆ ಶತಕ ವಂಚಿತರಾಗಿ ಪೆವಿಲಿಯನ್‌ಗೆ ಹಿಂದಿರುಗಿದರು.


ಔಟಾಗುವ ಮುನ್ನ ಕೊಹ್ಲಿ 92 ಎಸೆತಗಳನ್ನು ಉತ್ತರಿಸಿ 4 ಬೌಂಡರಿ ಗಳಿರುವ 82 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು. ಇವರಿಬ್ಬರು 3ನೆ ವಿಕೆಟ್‌ಗೆ 168 ಎಸೆತಗಳನ್ನು ಎದುರಿಸಿ 154 ರನ್‌ಗಳನ್ನು ಸೇರಿಸಿದ್ದರು.ಅಂತಿಮವಾಗಿ ರೋಹಿತ್ ಶರ್ಮಾ 101(100 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ನಾಯಕ ಸುರೇಶ್ ರೈನಾ 24 (23 ಎಸೆತ, 3 ಬೌಂಡರಿ)ರನ್ ಬಾರಿಸಿ ಇನ್ನೂ 39 ಎಸೆತಗಳು ಬಾಕಿ ಉಳಿದಿರುವಂತೆ ವಿಜಯದ ರನ್ ಬಾರಿಸಿದರು. ಸತತ ಎರಡನೆ ಬಾರಿಗೆ ಶತಕ ಬಾರಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಶ್ರೀಲಂಕಾ ಪರ ನುವಾನ್ ಕುಲಶೇಖರ 34ಕ್ಕೆ 1,ಅಜಂತ ಮೆಂಡಿಸ್ 64ಕ್ಕೆ 1 ಮತ್ತು ಸೂರಜ್ ರಣದೇವ್ 51ಕ್ಕೆ 1 ವಿಕೆಟ್ ಹಂಚಿಕೊಂಡರು.ದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ 49.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 242 ರನ್ ಮಾಡಿತ್ತು.ಏಂಜೆಲೊ, ಮಾಥ್ಯೂಸ್ (75), ತಿಲಕರತ್ನ ದಿಲ್ಶಾನ್ (61) ಇವರ ನೆರವಿನಲ್ಲಿ ಶ್ರೀಲಂಕಾ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು.

ಆರಂಭದಲ್ಲಿ ಶ್ರೀಲಂಕಾ ಎರಡನೆ ಓವರ್‌ನಲ್ಲಿ ತಂಡದ ಮೊತ್ತ 8 ತಲುಪುವಾಗ ಯು. ತರಂಗ(1)ರನ್ನು ಕಳೆದುಕೊಂಡಿತು. 10.4ನೆ ಓವರ್ ನಲ್ಲಿ ಥಿಲನ್ ಸಮರವೀರ (19)ಅವರನ್ನು ಕಳೆದುಕೊಂಡಿತು. ಚಾಮರ ಕಪುಗೆಡರ (20), ಪಿ.ಸಿ.ಸಿಲ್ವ (5), ತಿಸ್ಸರ ಪೆರೆರ (32), ನುವಾನ್ ಕುಲಶೇಖರ (19),ರಣದೇವ್ (1) ರನ್ ಸೇರಿಸಿದರು. ಭಾರತದ ಬೌಲರ್‌ಗಳು ನಿಯಂತ್ರಣ ಸಾಧಿಸಿ, ಶ್ರೀಲಂಕಾವನ್ನು ಭಾರಿ ರನ್ ಹಾಕದಂತೆ ತಡೆದರು.

ಭಾರತ ತಂಡದ ಫೀಲ್ಡಿಂಗ್ ಉತ್ತಮವಾಗಿತ್ತು. ಮೂವರು ರನೌಟ್ ಆಗಿರುವುದೆ ಇದಕ್ಕೆ ಸಾಕ್ಷಿ.ಉಮೇಶ್ ಯಾದವ್ (61/1) ಹೊರತುಪಡಿಸಿದರೆ 3 ಬೌಲರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. ಅಶೋಕ್ ದಿಂಡಾ (44/2), ಪ್ರಗ್ಯಾನ್ ಓಝಾ (44/2) ಮತ್ತು ರವಿಂದ್ರ ಜಡೇಜಾ (49/2) ವಿಕೆಟ್ ಪಡೆದರು.

No comments: