.jpg)
ಮಯ್ಯತ್ ನಮಾಜ್ ಹಾಗೂ ವಿಶೇಷ ಪ್ರಾರ್ಥನೆಯ ನೇತ್ರತ್ವವನ್ನು ಡಿ.ಕೆ.ಯಸ್.ಸಿ. ಯು.ಎ.ಇ ಕಮಿಟಿ ಉಪಾದ್ಯಕ್ಷರಾದ ಜನಾಬ್ ಹಾಜಿ ಮಹಮ್ಮದ್ ಇಬ್ರಾಹಿ ಮೂಳೂರ್ ರವರ ಅಧ್ಯಕ್ಷತೆಯಲ್ಲಿ ಮಸೀದಿಯ ಇಮಾಂ ಜನಾಬ್ ಹಾಜಿ ಗುಲ್ ಅಮ್ ಮುಸ್ತಫಾ ರವರು ನೇತ್ರತ್ವವಹಿಸಿ ಪ್ರಾರ್ಥಿಸುತ್ತಾ ದುರಂತದಲ್ಲಿ ಮಡಿದವರಿಗೆ ಅಲ್ಲಾಹು ಹುತಾತ್ಮ ಪದವಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ತಮ್ಮವರ ಅಗಲಿಕೆಯನ್ನು ಸಹಿಸುವ ಸಹನೆ ಮತ್ತು ಒಳಿತನ್ನು ಅಲ್ಲಾಹು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
.jpg)
.jpg)
ಕಾರ್ಯಕ್ರಮದ ನೇತ್ರತ್ವವನ್ನು ಜನಾಬ್ ಇಬ್ರಾಹಿಂ ಸಖಾಫಿ ಕೆದಂಬಾಡಿ, ಜನಾಬ್ ಇಬ್ರಾಹಿಂ ಹಾಜಿ ಕಿನ್ಯ, ಜನಾಬ್ ಹಾಜಿ ಇಕ್ಬಾಲ್ ಕಣ್ಣಂಗಾರ್, ಜನಾಬ್ ಇ.ಕೆ ಇಬ್ರಾಹಿಂ, ಜನಾಬ್ ಯಸ್ ಯೂಸುಫ್ ಅರ್ಲಪದವು, ಜನಾಬ್ ಮೂಸ ಹಾಜಿ ಕಿನ್ಯ, ಜನಾಬ್ ಸಜಿಪ ಅಬ್ದುಲ್ ರಹ್ಮಾನ್, ಜನಾಬ್ ರಿಯಾಜ್ ಕುಲಾಯಿ, ಜನಾಬ್ ನವಾಜ್ ಕೋಟೆಕಾರ್ ವಹಿಸಿದ್ದರು. ಅಲ್ಲದೆ ವಿವಿಧ ಸಂಘಟನೆಗಳ ಮುಖಂಡರಾದ ಡಾಕ್ಟರ್ ಮಹಮ್ಮದ್ ಕಾಪು, ಜನಾಬ್ ಶುಕೂರ್ ಮನಿಲ, ಜನಾಬ್ ಖಾದರ್ ಸಾಲೆತ್ತೂರ್, ಜನಾಬ್ ಇಕ್ಬಾಲ್ ಕಾಜೂರ್, ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಡಿ.ಕೆ.ಯಸ್.ಸಿ. ಯಾ ರಾಷ್ಟ್ರೀಯ ಹಾಗೂ ಇತರ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ತಿತರಿದ್ದರು.
No comments:
Post a Comment