VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಗ್ರಾ.ಪಂ. ಚುನಾವಣೆ; ಬಂಟ್ವಾಳ: ವಿಜೇತರ ಪಟ್ಟಿ ಇನ್ನೂ ಸಿದ್ಧಗೊಂಡಿಲ್ಲ!

ಬಿ.ಸಿ.ರೋಡ್, ಮೇ 19: ಗ್ರಾ.ಪಂ. ಚುನಾವಣಾ ಲಿತಾಂಶ ಪ್ರಕಟಗೊಂಡು ಎರಡು ದಿನಗಳು ಕಳೆದರೂ ಬಂಟ್ವಾಳ ತಾಲೂಕಿನ 46 ಗ್ರಾ.ಪಂ.ನ ವಿಜೇತ ಅಭ್ಯರ್ಥಿಗಳ ಪಟ್ಟಿ ತಯಾರಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
25 ಗ್ರಾ.ಪಂ.ಗಳ ವಿವರ ಮಾತ್ರ ಈಗಾಗಲೇ ಸಿದ್ಧಪಡಿಸಲಾ ಗಿದ್ದು, ಉಳಿದ ಪಂಚಾಯತ್‌ಗಳ ಪಟ್ಟಿ ಇನ್ನಷ್ಟೇ ಆಗಬೇಕಾಗಿದೆ ಎಂದು ಸರಕಾರಕ್ಕೆ ಮಾಹಿತಿ ರವಾನಿಸಬೇಕಾದ ಎಸ್.ಬಿ. ಪೊಲೀಸರಿಗೆ ತಾಲೂಕು ಕಚೇರಿಯ ಚುನಾವಣಾ ವಿಭಾಗದ ಅಕಾರಿ ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಗೆ ಸಂಬಂಸಿದ ಅಗತ್ಯ ಕೆಲಸವನ್ನು ನಿಗದಿತ ವೇಳೆಯಲ್ಲಿ ಮಾಡದ ತಾಲೂಕು ಕಚೇರಿ ಸಿಬ್ಬಂದಿ ಕಾರ್ಯವೈಖರಿಗೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಗತ್ಯದ ಕೆಲಸಕ್ಕಾಗಿ ಕಚೇರಿಗಾಗಮಿಸುವ ಜನಸಾಮಾನ್ಯರನ್ನು ಎಷ್ಟು ಅಲೆದಾಡಿಸುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎನ್ನುತ್ತಾರೆ ಸಾರ್ವಜನಿಕರು.

No comments: