ರವಿವಾರ ರಾತ್ರಿ ಅಫ್ರಿನ್ ದಾಮೂದಿ ಹಾಗೂ ನಬಿಹಾ ದಾಮೂದಿಯ ಶವಗಳು ತಲುಪಿದವು. ಮೃತ ದೇಹಗಳನ್ನು ಕಾಣಲು ಜನರು ತಂಡೋಪ ತಂಡವಾಗಿ ಧಾವಿಸುತ್ತಿದ್ದರು. ಇಡಿ ಭಟ್ಕಳ ತಾಲೂಕಿನಲ್ಲಿ ಸೂತಕದ ಛಾಯೆ ಆವರಿಸಿದ್ದು ಪ್ರತಿಯೊಬ್ಬರು ಇದೇ ವಿಷಯದ ಕುರಿತು ಚರ್ಚಿಸುತ್ತಿದ್ದಾರೆ.
ರಜೆ ಕಳೆಯಲು ದುಬೈಗೆ ಹೋದ ನತದೃಷ್ಟ ಬಾಲಕ ಅಬ್ದುಲ್ ಬರ್ ದಾಮೂದಿ ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೆ ತರಗತಿಯಲ್ಲಿ ಓದುತ್ತಿದ್ದ, ಕಳೆದ ವರ್ಷದ ಉತ್ತಮ ಸಾಧನೆಗಾಗಿ ಶಾಲೆಯ ಚಿನ್ನದ ಪದಕ ಪಡೆದುಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಯ ಬದುಕು ವಿಮಾನ ದುರಂತದೊಂದಿಗೆ ಅಂತ್ಯಗೊಂಡಿದೆ.
ದುರಂತ ಅಂತ್ಯ ಕಂಡವರಲ್ಲಿ ಓರ್ವರಾದ ಸಾಗರ ರಸ್ತೆಯ ಉಸ್ಮಾನ್ ಮುಹಿದ್ದೀನ್ ಕಳೆದ ಮೂವತ್ತು ವರ್ಷಗಳಿಂದ ದುಬೈಯಲ್ಲಿ ಚಾಲಕ ವೃತ್ತಿಯಲ್ಲಿ ದುಡಿಯುತ್ತಿದ್ದರು. ಇತ್ತೀಚೆಗಷ್ಟೇ ಇವರಿಗೆ ದುಬೈ ಎರ್ಪೋರ್ಟ್ನಲ್ಲಿ ಕೆಲಸ ದೊರೆತಿತ್ತು ಎನ್ನಲಾಗಿದ್ದು, ಇದೇ ಸಂತೋಷದಲ್ಲಿ ತಂದೆ ತಾಯಿ ಕುಟುಂಬದವರನ್ನು ಕಾಣಲು ಬರುತ್ತಿದ್ದರು. ಅಂತ್ಯ ಅಂಸ್ಕಾರ:
ಶನಿವಾರ ರಾತ್ರಿ ಸುಮಾರು 11 ಗಂಟೆ ಭಟ್ಕಳಕ್ಕೆ ತರಲಾದ 4 ಮೃತ ದೇಹಗಳನ್ನು ಕೂಡಲೆ ಅಂತ್ಯ ಸಂಸ್ಕಾರ ಮಾಡಲಾಯಿತು. ಇಲ್ಲಿನ ಮಿಲ್ಲಿಯ ಮಸೀದಿಯ ಆವರಣದಲ್ಲಿ ಜನಾಝ ನಮಾಝ್ ನಿರ್ವಹಿ ಸಿದ ನಂತರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಜನಾಝ ನಮಾಝನ್ನು ಜಾಮಿಯ ಮಸೀದಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಬಾರಿ ನದ್ವಿ ನೆರವೇರಿಸಿದರು.



ಮಡಿದ ನತದೃಷ್ಟರು: ಬಂದರ್ ರಸ್ತೆಯ ನಿವಾಸಿ ಮುಹಮ್ಮದ್ ನಾಸಿರ್ ದಾಮೂದಿ, ಮಕ್ಕಳಾದ ಬೀಬಿ ಸಾರ, ಮುಹಮ್ಮದ್ ಶುಐಬ್, ನಬಿಹಾ, (ಇವರೆಲ್ಲರು ಒಂದೇ ಕುಟುಂಬದವರು) ಆಫ್ರಿನ್ ದಾಮೂದಿ ಇವರ ಪುತ್ರ ಆಬಾನ್ ರುಕ್ನುದ್ದೀನ್, ಚಿಕ್ಕಪ್ಪನ ಮಗ ಅಬ್ದುಲ್ ಬರ್ ದಾಮೂದಿ, (ಈ ಮೂವರು ಕೂಡ ಒಂದೇ ಕುಟುಂಬ ದವರು) ಸಾಗರ ರಸ್ತೆಯ ಉಸ್ಮಾನ್ ಮುಹಿದ್ದೀನ್.
ಆಘಾತದ ಮೇಲೊಂದು ಆಘಾತ
ಭಟ್ಕಳ, ಮೇ 23: ವಿಮಾನ ದುರಂತದಲ್ಲಿ ಮೃತರಾದ ಭಟ್ಕಳದ 8 ಜನರಲ್ಲಿ ನಾಲ್ವರು ಒಂದೆ ಕುಟುಂಬಕ್ಕೆ ಸೇರಿದ್ದಾರೆ. ಇನ್ನು ದುರದೃಷ್ಟಕರ ವಿಷಯವೆಂದರೆ ಆರು ತಿಂಗಳುಗಳ ಹಿಂದೆ ಸಂಭವಿಸಿದ್ದ ಕಾರು ಅಪಘಾತದಲ್ಲಿ ಇದೇ ಕುಟುಂಬದ ಮೂವರು ದಾರುಣ ಸಾವನ್ನಪ್ಪಿದ್ದರು. ಈ ಕಹಿ ನೆನಪು ಮಾಸುವ ಮುಂಚೆಯೆ ಇನ್ನೊಂದು ಆಘಾತ ಬರಸಿಡಿಲಿನಂತೆ ಬಡಿದಿದೆ.
ಮುಹಮ್ಮದ್ ನಾಸಿರ್ ದಾಮುದಿಯೊಂದಿಗೆ ಮಕ್ಕಳುಮೃತ 8 ಜನರಲ್ಲಿ ಇಲ್ಲಿನ ಬಂದರ್ ರಸ್ತೆಯ ನಿವಾಸಿ ಮುಹಮ್ಮದ್ ನಾಸಿರ್ ದಾಮುದಿ ಬಹಳ ವರ್ಷದಿಂದ ದುಬೈಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದರು. ಆರು ತಿಂಗಳ ಹಿಂದೆ ಮಂಗಳೂರಿನಿಂದ ಭಟ್ಕಳಕ್ಕೆ ಬರುತ್ತಿದ್ದ ಇವರ ಪತ್ನಿ ಶಾರಿಕಾ ಕಾರು ಅಪಘಾತದಲ್ಲಿ ಮೃತರಾಗಿದ್ದರು. ಆಗ ಭಟ್ಕಳಕ್ಕೆ ಬಂದಿದ್ದ ನಾಸಿರ್ ತಮ್ಮ ಮಕ್ಕಳನ್ನು ದುಬೈಗೆ ಕರೆದುಕೊಂಡು ಹೋಗಿದ್ದರು.
ಅಜ್ಜನ ಆಸರೆಯಲ್ಲಿರುವ ಅನಾಥ ಮುಹಮ್ಮದ್ ನೂಹ್ಈಗ ಶಾಲೆಗಳು ಆರಂಭವಾಗುತ್ತಿದ್ದು ಅದಕ್ಕೆ 8ದಿನ ಮುಂಚೆ ಭಟ್ಕಳಕ್ಕೆ ಕರೆತರುತ್ತಿದ್ದರು. ಮಕ್ಕಳಾದ ಬೀಬಿ ಸಾರಾ(11) ಮುಹಮ್ಮದ್ ಶುಐಬ್(8), ಹಾಗೂ ನಬೀಹಾ (6)ರೊಂದಿಗೆ ಅವರು ದುರಂತದಲ್ಲಿ ಬಲಿಯಾದರು. ಅನಾಥನಾದ ನೂಹ್: ಮುಹಮ್ಮದ್ ನಾಸಿರ್ ತಮ್ಮ ನಾಲ್ವರು ಮಕ್ಕಳಲ್ಲಿ ಅತ್ಯಂತ ಕಿರಿಯ ಪುತ್ರ ಮುಹಮ್ಮದ್ ನೂಹ್(3)ನಿಗೆ ಪಾಸ್ಪೋರ್ಟ್ ಆಗದ ಕಾರಣ ಭಟ್ಕಳದಲ್ಲಿಯೆ ಬಿಟ್ಟು ಹೋಗಿದ್ದರು. ಈಗ ಆ ಬಾಲಕ ತಂದೆ ತಾಯಿ, ಅಣ್ಣ ಅಕ್ಕ- ತಂಗಿಯರನ್ನು ಕಳೆದುಕೊಂಡು ಅನಾಥನಾಗಿದ್ದಾನೆ.
No comments:
Post a Comment