ಸುಳ್ಯ, ಮೇ 19: ಬಿಜೆಪಿ ಅಕಾರದಲ್ಲಿದ್ದ ಗ್ರಾ.ಪಂ.ಗಳ ಮತ್ತು ರಾಜ್ಯ ಸರಕಾರದ ದುರಾಡಳಿತ ವಿರುದ್ಧ ಮತದಾರರು ನೀಡಿದ ತೀರ್ಪಿನ ಸಂಕೇತ ಗ್ರಾ.ಪಂ. ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ.
ಸುಳ್ಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾ.ಪಂ. ಚುನಾ ವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಆಡಳಿತಕ್ಕೆ ಬಂದ ಜನಪ್ರತಿನಿಗಳು ಸ್ವೇಚ್ಛಾಚಾರದಿಂದ ವರ್ತಿಸಿದರೆ ಜನ ಗಮನಿಸುತ್ತಾರೆ ಮತ್ತು ಮತದಾನ ಸಂದರ್ಭದಲ್ಲಿ ಅವರನ್ನು ತಿರಸ್ಕರಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಈ ಫಲಿತಾಂಶ ಎಂದರು.
ಕಳೆದ ಚುನಾವಣೆಯಲ್ಲಿ ಗೆದ್ದು ಬಂದು ಸುಳ್ಯ ತಾಲೂಕಿನ 19 ಗ್ರಾ.ಪಂ.ಗಳಲ್ಲಿ ಅಧಿಕಾರ ಹಿಡಿದ ಬಿಜೆಪಿಗರು ತಮ್ಮ ಕುಟುಂಬದ, ಸ್ವಪಕ್ಷದ ಕಾರ್ಯ್ಕರ್ತರ ಅಭಿವೃದ್ಧಿಯೇ ಗ್ರಾಮದ ಅಭಿವೃದ್ಧಿ ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ಅನುದಾನಗಳನ್ನು ತಮ್ಮ್ಮಿಳಗೆ ಹಂಚಿಕೊಂಡರು. ಇದೆಲ್ಲಾ ಜನರಿಗೆ ಭ್ರಮ ನಿರಸನ ಮೂಡಿಸಿತು. ಪರಿಣಾಮವಾಗಿ ಬಿಜೆಪಿ ಬಲ ಅರ್ಧಕ್ಕರ್ಧ ಕುಸಿದಿದೆ ಎಂದು ಭರತ್ ಮುಂಡೋಡಿ ವ್ಯಾಖ್ಯಾನಿಸಿದರು.
ಈ ಬಾರಿ ಆರಿಸಿ ಬಂದ ಕಾಂಗ್ರೆಸ್ ಬೆಂಬಲಿತ ಎಲ್ಲಾ ಸದಸ್ಯರಿಗೆ ಬ್ಲಾಕ್ ಘಟಕದಿಂದ ಆಡಳಿತ ವ್ಯವಸ್ಥೆ ಬಗ್ಗೆ ತರಬೇತಿ ನೀಡಲಿದ್ದೇವೆ ಎಂದು ಮುಂಡೋಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿತ್ಯಾನಂದ ಮುಂಡೋಡಿ, ಎಂ.ವೆಂಕಪ್ಪ ಗೌಡ, ಪಿ.ಎಸ್. ಗಂಗಾಧರ, ಹರೀಶ್ ರೈ ಉಬರಡ್ಕ, ಕೆ.ಗೋಕುಲ್ ದಾಸ್, ದಿನೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment