VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಸಂವಿಧಾನದ ಚೌಕಟ್ಟಿನಲ್ಲಿ ಸರಕಾರ ನಡೆಸಿ: ಮುಖ್ಯಮಂತ್ರಿಗೆ ಸಿದ್ದು ಸಲಹೆ

ಬೆಂಗಳೂರು, ಮೇ 19: ಸಂವಿಧಾನದ ಚೌಕಟ್ಟಿನಲ್ಲಿ ಸರಕಾರವನ್ನು ನಡೆಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಸಲಹೆ ನೀಡಿದ್ದಾರೆ.

ರಾಜ್ಯಪಾಲರನ್ನು ಬುಧವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಸಿ.ಕೊಂಡಯ್ಯ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಚಿವರಾದ ರೆಡ್ಡಿ ಸಹೋದರರ ವಿರುದ್ಧ ರಾಜ್ಯಪಾಲ ರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಖದ್ದು ವಿವರಣೆ ನೀಡುವಂತೆ ರಾಜ್ಯಪಾಲರು ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿ ಮಾಡುವ ಅಧಿಕಾರ ಅವರಿಗೆ ಇದೆ ಎಂದರು. ಸಂವಿಧಾನದ 191, 192, 102, 9ಎ ಪರಿಚ್ಛೇದದ ಪ್ರಕಾರ ವಿವರಣೆ ಪಡೆಯುವ ಅಧಿಕಾರ ಇರುವ ರಾಜ್ಯಪಾಲರ ವಿರುದ್ಧ ಜನಾರ್ದನ ರೆಡ್ಡಿ ದುರಹಂಕಾರ, ಉದ್ದಟತನದಿಂದ ಮಾತನಾಡಿರುವುದು ಸಂವಿಧಾನ ಬಾಹಿರವಾದುದು ಎಂದವರು ಅಭಿಪ್ರಾಯಪಟ್ಟರು.

ಜನಾದರ್ನ ರೆಡ್ಡಿ ರಾಜ್ಯಪಾಲರ ವಿರುದ್ಧ ಮನ ಬಂದಂತೆ ಮಾತನಾಡುತ್ತಿದ್ದರೂ, ಅವರನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಯಂತ್ರಿಸದೆ ಇರುವುದು ಖಂಡನೀಯ. ಮೊದಲು ಸಂವಿಧಾನದ ಚೌಕಟ್ಟಿನಲ್ಲಿ ಸರಕಾರ ನಡೆಸುವುದನ್ನು ಯಡಿಯೂರಪ್ಪ ಕಲಿಯಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ರಾಜ್ಯಪಾಲರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ, ರೆಡ್ಡಿಗಳಿಗೆ ಸಂವಿಧಾನ ಎಂದರೇನು ಎಂದು ಗೊತ್ತಿಲ್ಲ. ಸಂವಿಧಾ ನದ ಬಗ್ಗೆ ಕಾನೂನು ತಜ್ಞರಿಂದ ತಿಳಿದುಕೊಳ್ಳುವ ಪ್ರಯತ್ನವೂ ಮಾಡಿಲ್ಲ. ಇಂತಹವರು ಸಂವಿಧಾನ ತಜ್ಞರಾಗಿರುವ ರಾಜ್ಯಪಾಲರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ರಾಜೀನಾಮೆ ನೀಡಲಿ: ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವ ಸಚಿವರಾದ ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈಶ್ವರಪ್ಪರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ
ಹಿಂದುಳಿದ ವರ್ಗಗಳ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಸಚಿವರಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಯಾವುದೇ ಸೌಲಭ್ಯ ಒದಗಿಸಲಿಲ್ಲ.ಈ ವರ್ಗಗಳಿಗೆ ಅನ್ಯಾಯ ವಾಗುವ ರಂಗನಾಥ ಮಿಶ್ರ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದರೂ, ಈ ಬಗ್ಗೆ ವೌನ ವಹಿಸಿರುವ ಸಿದ್ದರಾಮಯ್ಯ ಕೇವಲ ಬೂಟಾಟಿಕೆ ಮಾಡುತ್ತಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಯ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ನಾನು ರಾಜಕಾರಣ ಪ್ರವೇಶ ಮಾಡಿದಾಗಿನಿಂದ ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ.

ನನಗೆ ಆರೆಸೆಸ್ಸ್‌ನಿಂದ ತರಬೇತಿ ಪಡೆದು ಬಂದ ಯಡಿಯೂರಪ್ಪ, ಈಶ್ವರಪ್ಪ ಮುಂತಾದ ಬಿಜೆಪಿ ಮುಖಂಡರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ನುಡಿದರು.
ಹಿಂದುಳಿದ ವರ್ಗಗಳ ಪರವಾದ ಮಂಡಲ್ ಆಯೋಗದ ವರದಿಯನ್ನು ಇದುವರೆಗೂ ಸಂಪೂರ್ಣ ಅನುಷ್ಠಾನವಾಗಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದಿಲ್ಲ.

ಉನ್ನತ ಶಿಕ್ಷಣದಲ್ಲಿ ಈ ವರ್ಗಗಳಿಗೆ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡಿದಾಗ, ಅದಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದರು. ಇಂತಹವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

No comments: