ಮಿಡ್ನಾಪುರ, ಮೇ 19: ‘ಐದು ರಾಜ್ಯ ಬಂದ್’ನ ಎರಡನೆಯ ದಿನವಾದ ಇಂದು ನಕ್ಸಲೀಯರು ಪಶ್ಚಿಮ ಬಂಗಾಳದ ಲಾಲ್‌ಗಢದಲ್ಲಿ ನಡೆಸಿದ ಸುಧಾರಿತ ಬಾಂಬ್ ಸ್ಫೋಟದಲ್ಲಿ ನಾಲ್ವರು ಸಿಆರ್‌ಪಿಎಫ್ ಜವಾನರು ಬಲಿಯಾಗಿದ್ದಾರೆ.
ಹಿಂಸೆಯನ್ನು ತ್ಯಜಿಸಿ ಮಾತುಕತೆಗೆ ಬರುವಂತೆ ಗೃಹ ಸಚಿವ ಪಿ. ಚಿದಂಬರಂ ಮಾವೊವಾದಿ ಉಗ್ರರಿಗೆ ಆಹ್ವಾನ ನೀಡಿದ ಮರುದಿನವೇ ಈ ರಕ್ತಪಾತ ನಡೆದಿದೆ.
ಸಿಆರ್‌ಪಿಎಫ್ ಜವಾನರು ಗೋವಲ್ತೋರ್ ಮಾರುಕಟ್ಟೆ ಪ್ರದೇಶದ ತಮ್ಮ ಶಿಬಿರದಿಂದ ಹತ್ತಿರದ ಗ್ರಾಮಗಳಿಗೆ ಗಸ್ತಿಗಾಗಿ ಹೋಗುತ್ತಿದ್ದಾಗ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗಡ ಪೊಲೀಸ್ ವ್ಯಾಪ್ತಿಯ ರಾಮಗಡ ಎಂಬಲ್ಲಿ ಪೂರ್ವಾಹ್ಣ 11.30ರ ವೇಳೆ ಈ ಸ್ಫೋಟ ನಡೆದಿದೆ.
ನಕ್ಸಲೀಯರು ನಡೆಸಿದ ಬಾಂಬ್ ದಾಳಿಯಲ್ಲಿ ನಾಲ್ವರು ಸಿಆರ್‌ಪಿಎಫ್ ಜವಾನರು ಅಸು ನೀಗಿದ್ದು, ಇತರ ಇಬ್ಬರಿಗೆ ಗಾಯಗಳಾಗಿವೆಯೆಂದು ಪೂರ್ವ ವಲಯದ ಸಿಆರ್‌ಪಿಎಫ್ ಪೊಲೀಸ್‌ನ ಮಹಾನಿರೀಕ್ಷಕ ಎಂ. ನಾಗೇಶ್ವರ ರಾವ್ ತಿಳಿಸಿದ್ದಾರೆ. ಮೃತದಲ್ಲಿ ಮೂವರು ಕಾನ್‌ಸ್ಟೆಬಲ್ ಗಳು ಹಾಗೂ ಸ್ಫೋಟ ನಿರೋಧಕ ವಾಹನದ ಚಾಲಕ ಸೇರಿದ್ದಾರೆಂದು ಅವರು ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ವಾಹನ ಜಖಂಗೊಂಡಿದೆ.
Subscribe to:
Post Comments (Atom)
No comments:
Post a Comment