VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ವಿಮಾನ ದುರಂತ: ಬ್ಲ್ಯಾಕ್ ಬಾಕ್ಸ್ ಹುಡುಕಾಟ ಯಶಸ್ವಿ

ವಿಮಾನ ದುರಂತದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡಿರುವ ಬ್ಲ್ಯಾಕ್ ಬಾಕ್ಸ್‌ಗಾಗಿ ನಿನ್ನೆಯಿಂದ ಹರಸಾಹಸ ಪಡುತ್ತಿರುವ ತಜ್ಞರಿಗೆ ಇದೀಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದು ನಿರಾಳತೆಯನ್ನು ತಂದಿದೆ.

ಅಪಘಾತವಾಗುವ ಕೆಲ ನಿಮಿಷಗಳ ಮುಂಚೆ ಸಹ ಪೈಲೆಟ್‌ನೊಂದಿಗೆ ನಡೆಸಿದ ಸಂವಾದಗಳು ಹಾಗೂ ವಾಯ್ಸ್ ರೆಕಾರ್ಡರ್‌ಗಳು ಬ್ಲ್ಯಾಕ್ ಬಾಕ್ಸ್‌ನಲ್ಲಿ ದಾಖಲಾಗಿರುತ್ತವೆ.ವಿಮಾನ ಅಪಘಾತ ಸಂಭವಿಸಿದರೂ ಬ್ಲ್ಯಾಕ್‌ ಬಾಕ್ಸ್‌ಗೆ ಯಾವುದೇ ಹಾನಿಯಾಗುವುದಿಲ್ಲ.

ದುರಂತದಲ್ಲಿ ಮೃತರಾದವರ ಎಲ್ಲಾ ಶವಗಳನ್ನು ಸಾಗಿಸಿದ ನಂತರ ಬ್ಲ್ಯಾಕ್‌ಬಾಕ್ಸ್‌ಗಾಗಿ ಹುಡುಕಾಟ ಆರಂಭಿಸಲಾಯಿತು ಎಂದು ಅದಿಕಾರಿಗಳು ತಿಳಿಸಿದ್ದಾರೆ.

ನಿನ್ನ ಸಾಯಂಕಾಲದಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು,ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದಾಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.


ವಿಮಾನ ದುರಂತ:ಪಾಕ್‌ನಿಂದ ಸಂತಾಪ ಸಂದೇಶ ರವಾನೆ

ಮಂಗಳೂರಿನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ, 159 ಪ್ರಯಾಣಿಕರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶೋಕ ಸಂದೇಶವನ್ನು ರವಾನಿಸಿದೆ.

ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಿಂದಾಗಿ, ಹಲವಾರು ಪ್ರಯಾಣಿಕರು ಸಾವನ್ನಪ್ಪಿರುವ ಬಗ್ಗೆ ಭಾರಿ ಆಘಾತಗೊಂಡಿದ್ದೇನೆ ಎಂದು ಪ್ರಧಾನಿ ಗಿಲಾನಿ ಕಳುಹಿಸಿದ ಶೋಕ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಸರಕಾರದ ಪರವಾಗಿ ಹಾಗೂ ಪಾಕಿಸ್ತಾನದ ಜನತೆಯ ಪರವಾಗಿ, ವಿಮಾನ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ಸಂತಾಪ ಹಾಗೂ ಅನುಂಕಪವಿದೆ ಎಂದು ಗಿಲಾನಿ ಹೇಳಿದ್ದಾರೆ.

ಏರ್‌ ಇಂಡಿಯಾ ಬೊಯಿಂಗ್ 737-800 ವಿಮಾನ, ನಿನ್ನ ಬೆಳಿಗ್ಗೆ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿ 159 ಮಂದಿ ಸಾವನ್ನಪ್ಪಿದ್ದರು.

No comments: