ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ 'ಟ್ವಿಟರ್'ಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸ್ವಾಗತ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮಿತಾಬ್ ಧನ್ಯವಾದ ಸಮರ್ಪಿಸಿದ್ದಾರೆ.
ಇಬ್ಬರು ಕೂಡಾ ಸಾಮಾಜಿಕ ತಾಣ ಟ್ವಿಟರ್‌ಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದರು. ಆ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ.
ಈ ಜಾಲತಾಣಕ್ಕೆ ಸ್ವಾಗತಿಸಿರುವುದಕ್ಕೆ ತಮಗೆ ಧನ್ಯವಾದ. ತಾವು ಹಾಗೂ ತಮ್ಮ ಕುಟುಂಬ ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದು ಬಿಗ್ ಬಿ ಬರೆದಿದ್ದಾರೆ.
ಇದಕ್ಕೂ ಮೊದಲು ಸಚಿನ್ ಬರೆದ ಸ್ವಾಗತ ಸಂದೇಶದಲ್ಲಿ, 'ಟ್ವಿಟರ್‌ನಲ್ಲಿ ಬಿಗ್ ಬಿರನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ತಮಗೆ ಈ ಮಾಯಾ ಪ್ರಪಂಚಕ್ಕೆ ಸ್ವಾಗತ ಎಂದು ಬರೆದಿದ್ದರು.
ಇಂತಿಕಾಬ್, ಜಾವೇದ್ ಕ್ಷಮೆಯಾಚಿಸಬೇಕು: ಅಕ್ಮಲ್
ತನ್ನ ಮೇಲೆ ಸುಳ್ಳು ಆರೋಪವನ್ನು ಹೇರಿರುವ ಪಾಕಿಸ್ತಾನ ಮಾಜಿ ಕೋಚ್‌ಗಳಾದ ಇಂತಿಕಾಬ್ ಆಲಂ ಮತ್ತು ಅಖೀಬ್ ಜಾವೇದ್ ಸಾರ್ವಜನಿಕವಾಗಿ ಕ್ಷಮಾಪಣೆ ನಡೆಸಬೇಕು ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಬೇಡಿಕೆಯಿರಿಸಿಕೊಂಡಿದ್ದಾರೆ.
ಇತ್ತೀಚೆಗಿನ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಸಿಡ್ನಿ ಟೆಸ್ಟ್‌ನಲ್ಲಿ ಕಮ್ರಾನ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರು ಎಂದು ಪಿಸಿಬಿ ವಿಚಾರಣಾ ಸಮಿತಿಗೆ ಕೋಚ್ ಇಂತಿಕಾಬ್ ವರದಿ ನೀಡಿದ್ದರು.
ನನ್ನ ಪ್ರದರ್ಶನ ಬಗ್ಗೆ ಶಂಕೆ ತೋರಿರುವ ಇಂತಿಕಾಂಬ್ ಮತ್ತು ಅಖೀಬ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಮ್ರಾನ್ ಬೇಡಿಕೆಯಿರಿಸಿದರು.
ಕೋಚ್ ಆಲಂ ಮತ್ತು ಅಖೀಬ್ ತಪ್ಪೊಪ್ಪಿಕೊಳ್ಳಬೇಕು ಅಥವಾ ನನ್ನ ವಿರುದ್ಧ ಹೋರಿಸಲಾಗಿರುವ ಆರೋಪದ ಪುರಾವೆಯನ್ನು ಒದಗಿಸಲಿ ಎಂದು ಕಮ್ರಾನ್ ಹೇಳಿಕೊಂಡರು.
ಮೋಸದಾಟ ಆರೋಪದಿಂದ ನಾನು ಬೆಸತ್ತು ಹೋಗಿದ್ದು, ಪದೇ ಪದೇ ಸ್ಪಷ್ಟನೆ ನೀಡಿ ಸಾಕಾಗಿ ಹೋಗಿದೆ ಎಂದವರು ಹೇಳಿದರು. ಪ್ರತಿ ದಿನವೂ ಜನರು ನನ್ನ ವಿರುದ್ಧ ಹೇಳಿಕೆ ನೀಡುವಂತಾಗಿದೆ. ಅಲ್ಲದೆ ಈ ಆರೋಪದಿಂದ ಕುಟುಂಬ ಕೂಡಾ ತೊಂದರೆಗೊಳಗಾಗಿದೆ ಎಂದವರು ಹೇಳಿದರು.
Subscribe to:
Post Comments (Atom)
No comments:
Post a Comment