VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 25, 2010

ದುರಂತದಲ್ಲಿ ಸುಟ್ಟು ಕರಕಲಾದ ಹಸುಳೆ ರಶಾದ್

ಮಂಗಳೂರು, ಮೇ 24: ವಿಮಾನದಲ್ಲಿ ಒಟ್ಟು ಮೃತಪಟ್ಟ 158 ಮಂದಿಯಲ್ಲಿ ಅತ್ಯಂತ ಎಳೆಯ ಮಗು 8 ತಿಂಗಳ ಹಸುಳೆ ರಶಾದ್ ಶಫಾಕತ್ ಮೆಹಮೂದ್. ಇದು ಫಾತಿಮಾ ಮೆಹಝಾನ್ (24) ಹಾಗೂ ಶಫಾಕತ್ ಮೆಹಮೂದ್ ದಂಪತಿಯ ಮಗು. ಕಣ್ಣೂರಿನ ಭಾರತ್ ಟಿಂಬರ್ಸ್‌ನ ಪ್ರತಿಷ್ಠಿತ ಮುಸ್ಲಿಂ ಕುಟುಂಬದ ಮೆಹಮೂದ್‌ರ ಮಗಳು ಫಾತಿಮಾ ಮೆಹಝಾನ್ ತನ್ನ ಮಗು ರಶಾದ್ ಶಫಾಕತ್ ಮೆಹಮೂದ್ ಜೊತೆ ದುಬೈನಿಂದ ಹೊರಟಿದ್ದರು.

ಮೇ 25ರಂದು ನಡೆಯುವ ವಿವಾಹ ಕಾರ್ಯಕ್ರಮಕ್ಕೆ ಹಾಜರಾಗಲು ಆಗಮಿಸಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಳೆದ ಜುಲೈ 6, 2008ರಲ್ಲಿ ದುಬೈನಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ಮೂಲತಃ ಮಂಗಳೂರಿನವರಾದ ಶಫಾಕತ್ ಮೆಹಮೂದ್‌ರೊಂದಿಗೆ ಫಾತಿಮಾ ಮೆಹಝಾನ್‌ರ ವಿವಾಹ ನಡೆದಿತ್ತು.ಮಗಳ ಬರುವಿಕೆಗಾಗಿ ಕಾದ ತಂದೆಗೆ ಉರುಳಿ ಬಿದ್ದ ವಿಮಾನ ಕಂಡಿತು

ಮಗಳು ಫಾತಿಮಾ ಮೆಹಝಾನ್ ಊರಿಗೆ ಬರುತ್ತಾಳೆ. ಆಕೆಯನ್ನು ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ಹೊರಟ ತಂದೆ ಮೆಹಮೂದ್ 6:20ಕ್ಕೆ ಬಜಪೆ ವಿಮಾನ ನಿಲ್ದಾಣದ ಬಳಿ ಸಾಗುತ್ತಿದ್ದಾಗ ವಿಮಾನ ಬಿದ್ದು ಹೊಗೆ ಏಳುತ್ತಿದ್ದ ದೃಶ್ಯ ಕಂಡು ಬಂತು. ಆದರೂ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿ ಸ್ಪಷ್ಟ ಮಾಹಿತಿ ದೊರೆತಿರಲಿಲ್ಲ. ಬಳಿಕ ವಿಮಾನ ದುರಂತದ ವಿಷಯ ತಿಳಿಯಿತು. ಅಲ್ಲಿಂದ ಎಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಮಗಳ ಹೆಸರು ದುರಂತಕ್ಕೀಡಾದವರ ಪಟ್ಟಿಯಲ್ಲಿತ್ತು.

ಆನಂತರ ಎಲ್ಲಾ ಆಸ್ಪತ್ರೆಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಲೆದಾಟ ನಡೆಸಬೇಕಾಯಿತು. ಬಳಿಕ ವೆನ್‌ಲಾಕ್‌ನಲ್ಲಿ ಮೃತದೇಹದ ಮೇಲಿದ್ದ ಆಭರಣ, ಕೆಲವು ಬಟ್ಟೆಯ ಅಸ್ಪಷ್ಟ ಗುರುತಿನಿಂದ ಮೃತದೇಹವನ್ನು ಪತ್ತೆ ಹಚ್ಚಲಾಯಿತು ಎಂದು ಮೆಹಮೂದ್ ಗದ್ಗದಿತರಾಗಿ ತಿಳಿಸುತ್ತಾರೆ.

No comments: