ಹೊಸದಿಲ್ಲಿ, ಮೇ 24: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಕ್ರಮ ನಡೆದಿರುವುದು ತನಿಖೆ ವೇಳೆ ಕಂಡು ಬಂದಲ್ಲಿ ಅಗತ್ಯದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.
‘‘ ಪಾರ್ಲಿಮೆಂಟ್‌ನಲ್ಲಿ ಇದರ ಬಗ್ಗೆ ಚರ್ಚೆ ನಡೆದಿದೆ. ಹಣಕಾಸು ಸಚಿವರು ಈ ಕುರಿತು ವಿವರಣೆ ನೀಡಿದ್ದಾರೆ.ಹಣಕಾಸು ಸಚಿವಾಲಯವು ಈ ಬಗ್ಗೆ ತನಿಖೆ ನಡೆಸುತ್ತಿದೆ.ಏನಾದರೂ ಅಕ್ರಮ ನಡೆದಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ’’ ಎಂದು ಸಿಂಗ್ ವಿವರಿಸಿದರು.
ಮಾಜಿ ಸಚಿವ ಶಶಿ ತರೂರ್ ಮತ್ತು ಅಮಾನತುಗೊಂಡಿರುವ ಐಪಿಎಲ್ ಆಯುಕ್ತ ಲಲಿತ್ ಮೋದಿ ಪ್ರಕರಣವು ಪಾರ್ಲಿಮೆಂಟ್‌ನಲ್ಲಿ ಬಜೆಟ್ ಅಧಿವೇಶನದ ದ್ವಿತೀಯ ಅವಧಿಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಐಪಿಎಲ್‌ನಲ್ಲಿ ಕಪ್ಪು ಹಣದ ಹೂಡಿಕೆಯಾಗಿದೆ ಎಂಬ ಆರೋಪವು ಈ ಸಂದರ್ಭದಲ್ಲಿ ಕೇಳಿ ಬಂತು.
Subscribe to:
Post Comments (Atom)
No comments:
Post a Comment