VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಮಂಗಳೂರು ವಿಮಾನ ನಿಲ್ದಾಣ ಇತಿಹಾಸದ ಪುಟಗಳಲ್ಲಿ

ನಿಜವಾಯಿತೇ ರಾಜೀವ್ ಎಚ್ಚರಿಕೆ !

‘ವಂಡರ್‌ಫುಲ್ ಏರ್‌ಪೋರ್ಟ್..,ಬಟ್ ಡೇಂಜರಸ್’..!

ಅನುಭವಿ ಪೈಲಟ್ ಕೂಡಾ ಆಗಿದ್ದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಬಜಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣ ಕಂಡು ಒಮ್ಮೆ ಹೀಗೆ ಉದ್ಗರಿಸಿದ್ದರು.

ಮಂಗಳೂರು: ‘ವಂಡರ್‌ಫುಲ್ ಏರ್‌ಪೋರ್ಟ್.., ಬಟ್ ಡೇಂಜರಸ್’..!
ಅನುಭವಿ ಪೈಲಟ್ ಕೂಡಾ ಆಗಿದ್ದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಬಜಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣ ಕಂಡು ಒಮ್ಮೆ ಹೀಗೆ ಉದ್ಗರಿಸಿದ್ದರು.

ಪುಟ್ಟ ಕಾಡು ಎನ್ನುವಂತಿರುವ ಪ್ರದೇಶದಲ್ಲಿ 300 ಅಡಿ ಎತ್ತರದಲ್ಲಿ ನಿರ್ಮಿಸಲಾದ, ತೆಂಗು, ಅಡಿಕೆ ಮರಗಳಿಂದ ಆವೃತವಾದ, ಈ ವಿಮಾನ ನಿಲ್ದಾಣ (ಟೇಬಲ್ ಟಾಪ್ ಶೈಲಿಯದು) ಮೊದಲ ನೋಟಕ್ಕೆ ರಾಜೀವ್ ಗಾಂಧಿ ಅವರಿಗೆ ‘ಅಪಾಯಕಾರಿ’ ಎಂಬಂತೇ ಕಂಡಿತ್ತು ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗಿತ್ತು. ‘ದಿಸ್ ಈಸ್ ದ ಡೇಂಜರಸ್ ಟೇಬಲ್ ಟಾಪ್ ಏರ್‌ಪೋರ್ಟ್’ ಎಂದು ರಾಜೀವ್ ಗಾಂಧಿ ತಮ್ಮೊಂದಿಗೆ ಇದ್ದ, ಆಗ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ವಿವರಿಸಿದ್ದರು. ರಾಜೀವ್ ಅವರ ಅನುಭವಿ ಪೈಲಟ್ ಕಣ್ಣುಗಳಿಗೆ ಸಂಭವನೀಯ ದುರಂತ ಅದಾಗಲೇ ಕಂಡಿತ್ತೇನೋ ಎಂಬುದು ಅಂದಿನ ಅವರ ಮಾತುಗಳಲ್ಲಿ ಪರೋಕ್ಷವಾಗಿ ವ್ಯಕ್ತವಾಗಿತ್ತು.

ಬಜಪೆಯಿಂದ ಕೆಂಜಾರುವಿನ ಗುಡ್ಡದ ಮೇಲಕ್ಕೆ ಸ್ಥಳಾಂತರಗೊಂಡ ಮಂಗಳೂರು ವಿಮಾನ ನಿಲ್ದಾಣದಲ್ಲಿನ ಸುಧಾರಿತ ಟರ್ಮಿನಲ್ ಉದ್ಘಾಟನೆ ಸಮಾರಂಭದಲ್ಲಿ (ಮೇ 15) ರಾಜೀವ್ ಅವರ ಈ ಎಚ್ಚರಿಕೆಯ ಮಾತುಗಳು ಪ್ರಸ್ತಾಪವಾಗಿದ್ದವು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ದಿ. ಪ್ರಧಾನಿಯ ಈ ಮಾತುಗಳನ್ನು ಮೆಲಕು ಹಾಕಿದ್ದರು. ಆ ಮೂಲಕ, ವಿಮಾನ ನಿಲ್ದಾಣದ ‘ಅಪಾಯಕಾರಿ’ ಸ್ಥಿತಿ ಬಗ್ಗೆ ಸಮಾರಂಭದಲ್ಲಿದ್ದ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರ ಗಮನವನ್ನೂ ಸೆಳೆದಿದ್ದರು. ಆಸ್ಕರ್ ಈ ಮಾತು ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದವರ ಮುಖದಲ್ಲಿ ಕ್ಷಣ ಆತಂಕ ಮನೆಮಾಡಿತು. ನಗುಮೊಗದಿಂದ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿ ತೆರಳಿದ್ದ ಪ್ರಫುಲ್, ವಾರ ಕಳೆಯುವಷ್ಟರಲ್ಲೇ ವಿಷಾದದ ಮುಖ ಹೊತ್ತು ಮತ್ತೆ ಮಂಗಳೂರಿಗೆ ಧಾವಿಸಿದ್ದಾರೆ.


ಗಮನ ಸೆಳೆದಿದ್ದ ನಿಲ್ದಾಣ

ನಿಲ್ದಾಣದ ರನ್‌ವೇಯ ಈ ‘ಅಪಾಯಕಾರಿ ಪ್ರಕೃತಿ’ಯೇ 1992ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ವಿಮಾನವನ್ನು ಇಳಿಸುವ ಮುನ್ನ ಅಧಿಕಾರಿಗಳು ‘ವಿಮಾನ ಇಳಿಕೆ ತಾಲೀಮು’ ನಡೆಸಲು ಕಾರಣವಾಗಿತ್ತು.

ಚೆನ್ನೈ (ಐಎಎನ್‌ಎಸ್): ಕಡಿದಾದ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಮಂಗಳೂರು ನಿಲ್ದಾಣದಲ್ಲಿ ವಿಮಾನದ ಮೂಲಕ ಇಳಿಯುವುದು ಒಂದು ರೋಮಾಂಚಕಾರಿ ಅನುಭವವೇ ಸರಿ. ಆದರೆ ನಿಲ್ದಾಣದ ರನ್‌ವೇಯ ಈ ‘ಅಪಾಯಕಾರಿ ಪ್ರಕೃತಿ’ಯೇ 1992ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ವಿಮಾನವನ್ನು ಇಳಿಸುವ ಮುನ್ನ ಅಧಿಕಾರಿಗಳು ‘ವಿಮಾನ ಇಳಿಕೆ ತಾಲೀಮು’ ನಡೆಸಲು ಕಾರಣವಾಗಿತ್ತು.

‘ನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ ಕಾರ್ಪೊರೇಷನ್ ಬ್ಯಾಂಕಿನ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಇಲ್ಲಿಗೆ ಬರುವವರಿದ್ದರು. ಅವರನ್ನು ಸುರಕ್ಷಿತವಾಗಿ ಇಳಿಸುವ ಹೊಣೆ ಹೊತ್ತ ಅಧಿಕಾರಿಗಳು ಎರಡು ಬಾರಿ ವಿಮಾನ ಇಳಿಕೆ ತಾಲೀಮು ನಡೆಸಿದ್ದರು’ ಎಂದು ಸ್ಮರಿಸುತ್ತಾರೆ ಬ್ಯಾಂಕಿನ ಸಂಪರ್ಕಾಧಿಕಾರಿ ಆಗಿದ್ದ ಕೆ.ಶ್ರೀನಿವಾಸನ್.

‘ಅದು ರಾಷ್ಟ್ರಪತಿಯೊಬ್ಬರ ಮೊದಲ ಮಂಗಳೂರು ಭೇಟಿಯಾಗಿತ್ತು. ಆಗ ಅಧಿಕಾರಿಗಳು ನಡೆಸಿದ ತಾಲೀಮು ಕಾರ್ಯದಿಂದ ನಿಲ್ದಾಣದ ಇತರ ವಿಮಾನಗಳಿಗೆ ತೊಂದರೆಯಾಗಿದ್ದು ಮಾಧ್ಯಮಗಳ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಿದ್ದಾರೆ.

No comments: