VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಮಂಗಳೂರು ವಿಮಾನ ದುರಂತ

ಊರಲ್ಲಿ ನೆಲೆಸಲು ಬಂದವರು.. ನೆಲವನ್ನೇ ಮುಟ್ಟಲಿಲ್ಲ...

ಬಸ್ರೂರು, ಮೇ 22: ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಂದಿನ ವಿದ್ಯಾಭ್ಯಾಸವನ್ನು ತಾಯ್ನೆಲದಲ್ಲೇ ಮುಂದುವರಿಸುವ ಹೆಬ್ಬಯಕೆಯೊಂದಿಗೆ ದುಬೈ ವಾಸವನ್ನು ಕೊನೆಗೊಳಿಸಿ ಗಂಡ, ಇಬ್ಬರು ಮಕ್ಕಳು ಹಾಗೂ ಅಕ್ಕನ ಮಗಳೊಂದಿಗೆ ಊರಿನತ್ತ ಪಯಣ ಬೆಳೆಸಿದ ಸಮೀನಾರಿಗೆ (35) ತಾನು ಹತ್ತಿದ ವಿಮಾನ ತಮ್ಮನ್ನು ಇನ್ನೆಂದೂ ಬಾರದ ಕಡೆಗೆ ಕರೆದೊಯ್ಯುತ್ತದೆ ಎಂಬ ಅರಿವೇ ಇರಲಿಲ್ಲ.
ಬಸ್ರೂರಿನ ಶಾರದಾ ಕಾಲೇಜು ಸಮೀಪದ ಪಾನಕದ ಕಟ್ಟೆ ನಿವಾಸಿಯಾದ ತಾಜೂಮ್ ಎಂಬವರ ಮಗಳಾದ ಸಮೀನಾ, ಪತಿ ಕಿರಿಮಂಜೇಶ್ವರದ ಇಬ್ರಾಹೀಂ ಖಾಜಿ (48), ಮಕ್ಕಳಾದ ಇಸ್ಸಾಂ ಇಬ್ರಾಹೀಂ (18) ಹಾಗೂ ರಿದಾ ಇಬ್ರಾಹೀಂ (12)ರೊಂದಿಗೆ ಸಮೀನಾರ ಅಕ್ಕ ಪರ್ವೀನಾ ಇಮ್ತಿಯಾಜ್‌ರ ಪುತ್ರಿ ಾತಿಮಾ ನೀಹಾ ಇಮ್ತಿಯಾಜ್ (17) ಸಹ ಮೃತ ಪಟ್ಟವರಲ್ಲಿ ಸೇರಿದ್ದಾರೆ.

ರಿದಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಮಂಗಳೂರಿನಲ್ಲಿ ಶಾಲೆಗೆ ಸೇರಿಸುವ ಉದ್ದೇಶದಿಂದ ಸಮೀನಾ ವಿದೇಶಿ ವಾಸವನ್ನು ಶಾಶ್ವತವಾಗಿ ತೊರೆದು ಇಲ್ಲೇ ನೆಲೆಸುವ ಉದ್ದೇಶದಿಂದ ಊರಿಗೆ ಮರಳುತ್ತಿದ್ದರು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದರು.

ಸಮೀನಾರ ಅಕ್ಕ ಪರ್ವೀನ್ ಅವರ ಮಗಳಾದ ನೀಹಾ ಅವರು ಈಗಾಗಲೇ ಮಂಗಳೂರಿನಲ್ಲಿ ಪಿಯುಸಿ ಕಲಿಯುತ್ತಿದ್ದಾರೆ. ಅವರೊಂದಿಗೆ ತನ್ನ ಮಕ್ಕಳನ್ನು ಇಲ್ಲೇ ಶಾಲೆಗೆ ಸೇರಿಸುವ ಉದ್ದೇಶದಿಂದ ಅವರು ಬರುತ್ತಿದ್ದರು. ನೀಹಾ ರಜೆಯನ್ನು ಹೆತ್ತವರೊಂದಿಗೆ ದುಬೈಯಲ್ಲಿ ಕಳೆದು ಚಿಕ್ಕಮ್ಮನೊಂದಿಗೆ ಮಂಗಳೂರಿಗೆ ಮರಳಿ ಬರುತ್ತಿದ್ದರು ಎಂದು ಅವರು ಹೇಳಿದರು.
ಕಿರಿಮಂಜೇಶ್ವರದವರಾದ ಇಬ್ರಾಹೀಂ ಖಾಜಿ ದುಬೈ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದರು. ಮುಂದೆ ಅವರು ಮಾತ್ರ ದುಬೈಗೆ ತೆರಳುವ ಯೋಜನೆ ರೂಪಿಸಲಾಗಿತ್ತು ಎಂದು ಸಂಬಂಧಿ ವಿವರಿಸಿದರು.

ಸಂಜೆಯವರೆಗೆ ಇಬ್ರಾಹೀಂ, ಸಮೀನಾ ಹಾಗೂ ನೀಹಾ ಇಮ್ತಿಯಾಜ್‌ರ ದೇಹದ ಗುರುತು ಮಾತ್ರ ಪತ್ತೆಯಾಗಿದ್ದು, ಮತ್ತಿಬ್ಬರ ದೇಹದ ಗುರುತು ಇನ್ನೂ ಸಿಕ್ಕಿಲ್ಲ ಎಂದು ಘಟನಾ ಸ್ಥಳದಲ್ಲಿದ್ದ ಅವರ ಸಂಬಂಧಿ ತಿಳಿಸಿದರು.


ಮಗುವಿನ ನಾಮಕರಣಕ್ಕೆಂದು ಬಂದರೆ...

ಉಡುಪಿ, ಮೇ 22: ವಿಮಾನ ದುರಂತದಲ್ಲಿ ಮೃತಪಟ್ಟ ದುರದೃಷ್ಟ ಪ್ರಯಾಣಿಕರಲ್ಲಿ ಪಡುಕೋಣೆ ನಾಡಾದ ಶಾಂತಿ ಒಲಿವೆರ್(28) ಸಹ ಒಬ್ಬರು. ಗಂಗೊಳ್ಳಿ ಸಮೀಪದ 30ಮುಡಿಯ ಮಾರ್ಟಿನ್ ಒಲಿವೆರ್ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾದ ಶಾಂತಿ, ಎರಡು ವರ್ಷಗಳ ಹಿಂದೆ ಗಂಡನೊಂದಿಗೆ ದುಬೈಗೆ ತೆರಳಿದ್ದರು.
ಇಂದು ಗಂಗೊಳ್ಳಿಯಲ್ಲಿ ಗಂಡನ ತಮ್ಮನ ಮಗುವಿನ ನಾಮಕರಣಕ್ಕೆ ಅವರು ಊರಿಗೆ ಮರಳುತ್ತಿದ್ದರು. ದುಬೈನಲ್ಲಿ ಬೆಳಗಿನ ಜಾವ ಗಂಡನಿಗೆ ಕೊನೆಯ ಬಾರಿ ಟಾಟಾ ಮಾಡಿದ ಶಾಂತಿ ಮತ್ತೆಂದೂ ತಿರುಗಿ ಬಾರದ ಕಡೆಗೆ ಪಯಣ ಬೆಳೆಸಿದ್ದಾರೆ.


ಮದುವೆ ಕನಸಿನೊಂದಿಗೆ ಬಂದ...

ಕುಂದಾಪುರ, ಮೇ 22: ಜೂ.2ರಂದು ಕುಂದಾಪುರದಲ್ಲಿ ನಡೆಯುವ ತನ್ನ ಮದುವೆಯ ಬಗ್ಗೆ ಸುಂದರ ಕನಸುಗಳನ್ನು ಹೆಣೆಯುತ್ತಾ ಬಂದ ನಾಡಾ ಗುಡ್ಡೆಯಂಗಡಿಯ ಅರುಣ ಕುಮಾರ್ ಶೆಟ್ಟಿ (25)ಗೆ ವಿ ಬೇರೆಯೇ ಸಂಚು ಹೆಣೆದಿತ್ತು.
ಎಂಟು ವರ್ಷಗಳ ಹಿಂದೆ ಹೊಟೇಲ್ ಕೆಲಸಕ್ಕೆಂದು ದುಬೈಗೆ ತೆರಳಿದ ಅರುಣ ಶೆಟ್ಟಿ, ಅಲ್ಲಿ ಕುಂದಾಪುರದ ವರದರಾಜ ಶೆಟ್ಟಿಯವರ ಹೊಟೇಲ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರ ಮದುವೆಯನ್ನು ಜೂ.2ಕ್ಕೆ ನಿಗದಿಗೊಳಿಸಿದ್ದು, ಇದಕ್ಕಾಗಿ ರಜೆಯ ಮೇಲೆ ಅವರು ಊರಿಗೆ ಹೊರಟಿದ್ದು, ತಲುಪಿದ್ದು ಮಾತ್ರ ಜವರಾಯನ ಮನೆ.

No comments: