ಟಿಕೆಟ್‌ನಲ್ಲಿ ವಿಮಾನ ಹೊರಡುವ ಸಮಯದ ಮುಂದೆ ಬೆಳಗಿನ ಜಾವ (ಎ.ಎಂ) ಎಂದು ನಮೂದಿಸುವ ಬದಲು ರಾತ್ರಿ (ಪಿ.ಎಂ) ಎಂದು ತಪ್ಪಾಗಿ ನಮೂದಿಸಲಾಗಿತ್ತು. ಅದರಂತೆ ಅವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ನವದೆಹಲಿ (ಐಎಎನ್‌ಎಸ್): ಕೆಲವರು ಮಾಡುವ ತಪ್ಪು ಇನ್ನೊಬ್ಬರ ಜೀವವನ್ನೇ ಉಳಿಸಬಹುದು! ಅದೃಷ್ಟ ಎಂದರೆ ಇದೇ ಇರಬೇಕು ಅಲ್ಲವೇ?
ಮುಂದಿದೆ ಓದಿ ಅದೃಷ್ಟದ ಕಥೆ.
ಈಕೆ ತೆರೇಸಿಯಮ್ಮ ಫಿಲಿಪ್. ದುಬೈನಿಂದ ಮಂಗಳೂರಿಗೆ ಶನಿವಾರ ಬಂದು ಅಪಘಾತಕ್ಕೀಡಾದ ನತದೃಷ್ಟ ವಿಮಾನದಲ್ಲಿ ಈಕೆಯೂ ಬರಬೇಕಿತ್ತು. ಆದರೆ ವಿಮಾನ ತಪ್ಪಿದ ಕಾರಣ ಜೀವ ಉಳಿಯಿತು.
‘ನಾನೆಷ್ಟು ಅದೃಷ್ಟವಂತೆ ಎಂದು ನನಗೆ ನಂಬಲಾಗುತ್ತಿಲ್ಲ’ ಎಂದು ಫಿಲಿಪ್ ಎನ್‌ಡಿಟಿ.ವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತೂ ಒಂದು ಅಚ್ಚರಿ ಎಂದರೆ, ಫಿಲಿಪ್ ವಿಮಾನ ಹೊರಡುವ ವೇಳೆಗೆ ಸರಿಯಾಗಿಯೇ ದುಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಷ್ಟರಲ್ಲಿ ವಿಮಾನ ಹೊರಟು ಬಹಳ ಹೊತ್ತು ಕಳೆದಿತ್ತು.
ಆಗಿದ್ದು ಇಷ್ಟೆ: ಫಿಲಿಪ್ ಮಂಗಳೂರಿಗೆ ಟಿಕೆಟ್ ಕಾದಿರಿಸಿದ್ದರು. ಆದರೆ ಟಿಕೆಟ್‌ನಲ್ಲಿ ವಿಮಾನ ಹೊರಡುವ ಸಮಯದ ಮುಂದೆ ಬೆಳಗಿನ ಜಾವ (ಎ.ಎಂ) ಎಂದು ನಮೂದಿಸುವ ಬದಲು ರಾತ್ರಿ (ಪಿ.ಎಂ) ಎಂದು ತಪ್ಪಾಗಿ ನಮೂದಿಸಲಾಗಿತ್ತು. ಅದರಂತೆ ಅವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ವಿಮಾನ ತಪ್ಪಿದ್ದಕ್ಕೆ ತುಂಬಾ ವ್ಯಥೆಯಾಗಿತ್ತು. ಆದರೆ ಶನಿವಾರ ಮಂಗಳೂರಿನಿಂದ ತಮ್ಮ ಮಗಳು ವಿಮಾನ ಅಪಘಾಕ್ಕೀಡಾದ ಸುದ್ದಿಯನ್ನು ದೂರವಾಣಿ ಮೂಲಕ ಹೇಳಿದಾಗ ಮೊದಲಿಗೆ ತಮಗೆ ಏನೂ ಗೊತ್ತಾಗಲೇ ಇಲ್ಲ. ಆದರೆ ಕೆಲ ನಿಮಿಷಗಳ ಬಳಿಕ ತಾವು ಪ್ರಯಾಣ ಮಾಡಬೇಕಿದ್ದ ವಿಮಾನ ಅದೇ ಆಗಿತ್ತು ಎಂದು ತಿಳಿದಾಗ ದಿಗ್ಭ್ರಮೆಯಾಯಿತು ಎಂದು ಅವರು ಹೇಳಿದ್ದಾರೆ.
May 23, 2010
Subscribe to:
Post Comments (Atom)
No comments:
Post a Comment