ಮೇ 11ರಂದು ಆಕೆ ಬರೆದ ಸಾಲುಗಳು ಆರಂಭವಾಗುವುದು ಹೀಗೆ. "We are all an end product of time.It takes a toll on all of us." ಈ ಸಾಲುಗಳು ಕೊನೆಯಾಗುವುದು ಆಗುವುದೆಲ್ಲಾ ತಿಳಿದಿರುವುದು ದೇವರಿಗೆ ಮಾತ್ರ.
ಬೆಂಗಳೂರು: ಏರ್ ಪೋರ್ಟ್‌ನಲ್ಲಿದ್ದೇನೆ. ಇನ್ನು ನೋಡಲುಳಿದಿರುವುದು ಮಳೆಯನ್ನು...ಇದು ಹರ್ಷಿಣಿ ಪೂಂಜಾ ದುಬೈನಲ್ಲಿ ವಿಮಾನ ಹತ್ತುವ ಮೊದಲು ಕಳುಹಿಸಿದ ಟ್ವಿಟ್ಟರ್ ಸಂದೇಶ.
ಮೇ 11ರಂದು ಆಕೆ ಬರೆದ ಸಾಲುಗಳು ಆರಂಭವಾಗುವುದು ಹೀಗೆ. "We are all an end product of time.It takes a toll on all of us."
ಈ ಸಾಲುಗಳು ಕೊನೆಯಾಗುವುದು ಆಗುವುದೆಲ್ಲಾ ತಿಳಿದಿರುವುದು ದೇವರಿಗೆ ಮಾತ್ರ. ಅಲ್ಲಿರುವ ಎಲ್ಲದಕ್ಕಾಗಿ ಸಂತೋಷದಿಂದಿರಿ...” ಹರ್ಷಿಣಿ ಸೈಬರ್ ಲೋಕದ ವಿಹಾರಕ್ಕೆ ಬಹುದೊಡ್ಡ ಇತಿಹಾಸವೇನೂ ಇಲ್ಲ ಅನ್ನಿಸುತ್ತದೆ.
‘ನೆಟಿಝನ್ ಟು’ (http://netizentwo.blogspot.com )ಶೀರ್ಷಿಕೆಯ ಆಕೆಯ ಬ್ಲಾಗ್ ಹೆಚ್ಚೆಂದರೆ ನಾಲ್ಕು ತಿಂಗಳಷ್ಟು ಹಳೆಯದು. ಹರ್ಷಿಣಿಯ ಟ್ವಿಟ್ಟರ್ ಪರಿಚಯ ಹೇಳುವಂತೆ ಆಕೆಯಿರುವ ಸ್ಥಳ ಅನಂತ ವಿಶ್ವ. ಆಕೆಯ ಪರಿಚಯವಿರಬೇಕಾದಲ್ಲಿ ಇರುವ ಸಾಲುಗಳು ಹೀಗಿವೆ. Let it go. let roll right off your shoulder, Let it in. Let your clarity define you In the end (ಸುಮ್ಮನೆ ಕಳಚಿಕೊಳ್ಳಬೇಕು. ಭುಜದಿಂದ ಹಾಗೆಯೇ ಜಾರಿ ಬಿದ್ದು ಹೋಗಲು ಬಿಟ್ಟುಬಿಡಬೇಕು. ಬರುವುದೆಲ್ಲವ ಒಳಕ್ಕೆ ಬರ ಮಾಡಬೇಕು. ಕೊನೆಗೆ ತಿಳಿ ಮನಸ್ಸೇ ನಮ್ಮ ತನದ ಗುರುತು) ಇದು ರಾಬ್ ಥಾಮಸ್ ಎಂಬ ರಾಕ್ ಹಾಡುಗಾರನ ಸಾಲುಗಳು.
ಹರ್ಷಿಣಿಯ ತಾಯಿ ಮಣಿರೇಖಾ ‘ಗಲ್ಫ್ ನ್ಯೂಸ್’ ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಹರ್ಷಿಣಿ ಮಾಧ್ಯಮ ಮತ್ತು ಸಂವಹನದ ವಿದ್ಯಾರ್ಥಿ ಎಂದು ಗಲ್ಫ್ ನ್ಯೂಸ್ ವೆಬ್ ಸೈಟ್ ಹೇಳುತ್ತಿದೆ.
May 23, 2010
Subscribe to:
Post Comments (Atom)
No comments:
Post a Comment