

ಮಂಗಳೂರು, ಮೇ ೨೭: ಕಳೆದ ಶನಿವಾರ ಬಜಪೆಯಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಡಿದ ವರ ಆತ್ಮಗಳಿಗೆ ಶಾಂತಿ ಕೋರಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಸರ್ವ ಧರ್ಮೀಯ ಶ್ರದ್ಧಾಂಜಲಿ ಸಭೆ ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ಬುಧವಾರ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸುಮಾರು ೪೦ರಷ್ಟು ಪಾದ್ರಿಗಳು ಹಾಗೂ ಭಾರೀ ಸಂಖ್ಯೆಯಲ್ಲಿ ಸಾರ್ವ ಜನಿಕರು ಪಾಲ್ಗೊಂಡಿದ್ದರು.


ಈ ಸಂದರ್ಭ ಮಾತನಾಡಿದ ಡಾ.ಪಾವ್ಲ್ ಡಿಸೋಜ ದುರ್ಮರಣ ಕ್ಕೀಡದವರ ಆತ್ಮ ಶಾಂತಿಗಾಗಿ ಪ್ರಾರ್ಥಿಸಿದರು. ಹಾಗೂ ಪೋಪ್ ಮತ್ತು ವೆಟಿಕನ್‌ನ ರಾಯಭಾರಿಯ ಸಂದೇಶವನ್ನು ವಾಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಡಾ. ಶಾಂತರಾಮ ಶೆಟ್ಟಿ, ಭೀಕರ ದುರಂತ ವೊಂದು ಸಂಭವಿಸಿದೆ. ಅಗಲಿದ ಆತ್ಮಗಳಿಗೆ ಶಾಂತಿ ದೊರೆಯಲಿ. ಸಂತ್ರಸ್ತರ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಸಂತ್ರಸ್ತ ಕುಟುಂಬಗಳಿಗೆ ಆತ್ಮ ವಿಶ್ವಾಸ ತುಂಬುವ ಕಾರ್ಯ ಆಗಬೇ ಕಿದೆ ಎಂದು ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ ಹೇಳಿದರು. ಮೊಯ್ದಿನ್ ಬಾವ ಉಪಸ್ಥಿತರಿದ್ದರು.
ರೆ.ಫಾ.ಒನೀಲ್ ಡಿಸೋಜ ಪ್ರಸ್ತಾವ ನೆಗೈದರು. ಪತ್ರಕರ್ತ ಮನೋಹರ್ ಪ್ರಸಾದ್, ಎಂ.ಪಿ.ಟೈಟಸ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. ಧರ್ಮಾಪ್ರಾಂತ್ಯದ ರೆ.ಫಾ.ವಿಲಿಯಂ ಮಿನೇಜಸ್ ವಂದಿಸಿದರು.
No comments:
Post a Comment