VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 25, 2010

ಪೈಲಟ್-ಗಗನಸಖಿ ಸಂಘರ್ಷ: ಮಮತಾ ಬ್ಯಾನರ್ಜಿ ವಿಮಾನ ವಿಳಂಬ

ಹೊಸದಿಲ್ಲಿ, ಮೇ 24: ಏರ್ ಇಂಡಿಯಾದ ಪೈಲಟ್‌ಗಳು ಮತ್ತು ಗಗನ ಸಖಿಯರ ನಡುವಿನ ವಿವಾದಗಳು ಪದೇಪದೇ ವರದಿಯಾಗುತ್ತಲೇ ಇವೆ. ಇಬ್ಬರ ನಡುವಿನ ಸಂಘರ್ಷವು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಗೆ ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮೂರು ಗಂಟೆಗಳ ಕಾಲ ವಿಮಾನ ತಡವಾಗಲು ಕಾರಣವಾದ ಘಟನೆ ವರದಿಯಾಗಿದೆ.

ತೃಣಮೂಲ ಕಾಂಗ್ರೆಸ್‌ನ ಸಹೋದ್ಯೋಗಿ ಮತ್ತು ಆರೋಗ್ಯ ಖಾತೆಯ ಸಹಾಯಕ ಸಚಿವ ದಿನೇಶ್ ತ್ರಿವೇದಿ ಜೊತೆಗೆ ಮಮತಾ ಬ್ಯಾನರ್ಜಿ ಶನಿವಾರ ಹೊಸದಿಲ್ಲಿಯಲ್ಲಿ ನಡೆಯಲಿದ್ದ ಯುಪಿಎಯ ಕಾರ್ಯಕ್ರಮದಲ್ಲಿ ಹಾಜರಾಗಲು ಹೊರಟಿದ್ದರು.

‘‘ಎಐ-101ರ ಪೈಲಟ್ ಮತ್ತು ಅದರ ವಾಣಿಜ್ಯ ಗಗನ ಸಖಿಯ ನಡುವೆ ವಾಗ್ವಾದ ನಡೆದು ಪೈಲಟ್ ಹೊರ ನಡೆದ ಹಿನ್ನೆಲೆಯಲ್ಲಿ ವಿಮಾನ ತಡವಾಗಿತ್ತು’’ ಎಂದು ಮಮತಾ ಬ್ಯಾನರ್ಜಿ ಜೊತೆಗಿದ್ದ ತ್ರಿವೇದಿ ತಿಳಿಸಿದ್ದಾರೆ.

ವಿಮಾನದಲ್ಲಿ ಆಗಲೇ ಕುಳಿತಿದ್ದ ಸಚಿವರು, ವಿಮಾನ ಹೊರಡಲು ತಡವಾದುದನ್ನು ಗಮನಿಸಿ ಕೆಳಗಿಳಿದು ವಿಚಾರಣೆ ನಡೆಸಿದ್ದರು. ಪೈಲಟ್ ಮತ್ತು ಗಗನ ಸಖಿಯ ನಡುವೆ ನಡೆದ ವಾಗ್ವಾದದ ಪರಿಣಾಮ ಪೈಲಟ್ ಹೊರಟು ಹೋಗಿದ್ದುದಾಗಿ ವಿಚಾರಣೆಯಲ್ಲಿ ತಿಳಿಯಿತು.


ಮಮತಾ ಬ್ಯಾನರ್ಜಿ ಮತ್ತು ತ್ರಿವೇದಿಯವರ ಮಧ್ಯ ಪ್ರವೇಶದಿಂದಾಗಿ ಮತ್ತು ಪ್ರಯತ್ನದ ಪರಿಣಾಮ, ಕೊನೆಗೆ ಹೈದರಾಬಾದ್‌ನಿಂದ ಹಾರಾಟ ನಡೆಸಿದ್ದ ಕ್ಯಾಪ್ಟನ್ ಕೆಜಿರ್ವಾಲ್, ಎಐ-101ನ್ನು ದಿಲ್ಲಿಗೆ ಚಲಾಯಿಸಲು ಒಪ್ಪಿಕೊಂಡರು.

ರಾತ್ರಿ 8:00 ಗಂಟೆಗೆ ಹೊರಡಬೇಕಾಗಿದ್ದ ವಿಮಾನವು ಕೊನೆಗೂ ರಾತ್ರಿ 11:00 ಗಂಟೆಗೆ ಹೊರಟಿತು ಎಂದು ಅವರು ತಿಳಿಸಿದ್ದಾರೆ.
‘‘ಉತ್ತಮ ಎಂಜಿನಿಯರ್ ಮತ್ತು ಪೈಲಟ್‌ಗಳಿಂದಾಗಿ ಏರ್ ಇಂಡಿಯಾಕ್ಕೆ ರಾಷ್ಟ್ರೀಯ ಮಾನ್ಯತೆ ಇದೆ. ಆದರೆ ಅದರ ಪೈಲಟ್‌ನಿಂದ ಹಿಡಿದು ಲೋಡರ್‌ಗಳವರೆಗಿನ ಸಿಬ್ಬಂದಿ ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಕೆಲವರು ನನಲ್ಲಿ ಹೇಳುತ್ತಾರೆ.

ಇಲ್ಲಿ ಅರವಿಂದ್ ಜಾದವ್(ಎಐ ಮುಖ್ಯಸ್ಥ)ರಿಂದ ಕೊಳಕು ರಾಜಕಾರಣ ನಡೆಯುತ್ತಿದೆ, ಹೀಗಾಗಿ ಇದೆಲ್ಲ ನಡೆಯುತ್ತಿದೆ’’ ಎಂದು ತ್ರಿವೇದಿ ಆಪಾದಿಸಿದ್ದಾರೆ.

No comments: