VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಕ್ರೀಡಾ ಸುದ್ದಿಗಳು

ಪದವಿಯಲ್ಲಿ ಡುಮ್ಕಿ ಹೊಡೆದ ಧೋನಿ

ಹೊಸದಿಲ್ಲಿ, ಮೇ 22: ಕ್ರೀಡಾಂಗಣದಲ್ಲಿ ರಾಜನಾಗಿ ಮೆರೆಯುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶೈಕ್ಷಣಿಕವಾಗಿ ಹಿಂದುಳಿದ್ದಾರೆ. ಪದವಿ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡಿದ್ದಾರೆ. ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಸೆಕ್ರೆಟರಿಯಲ್ ಪ್ರಾಕ್ಟೀಸ್ ಪದವಿಯ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಧೋನಿ ಫೇಲ್ ಆಗಿದ್ಧಾರೆ.

ಐಪಿಎಲ್-4 ಎನ್‌ಬಿಎ ಮಾದರಿಗೆ ಬದಲಾವಣೆ ಸಂಭವ
ಹೊಸದಿಲ್ಲಿ, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ನಾಲ್ಕನೆ ಆವೃತ್ತಿಯ ಸರಣಿಯ ವೇಳೆ ಭಾರೀ ಬದಲಾವಣೆಯಾಗಲಿದ್ದು, ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೆಶನ್(ಎನ್‌ಬಿಎ) ಮಾದರಿಯಲ್ಲಿ ಪಂದ್ಯಾವಳಿಯನ್ನು ಸಂಘಟಿಸುವ ಸಾಧ್ಯತೆ ಇದೆ. ಮುಂಬರುವ ಜೂನ್‌ನಲ್ಲಿ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಬಿಡುವಿಲ್ಲದ ಪಂದ್ಯಗಳಿಂದಾಗಿ ಆಟಗಾರರಿಗೆ ವಿಶ್ರಾಂತಿಗೆ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಐಪಿಎಲ್ 4ನೆ ಆವೃತ್ತಿಯ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ.ಈ ಆವೃತ್ತಿಯಲ್ಲಿ ಎರಡು ತಂಡಗಳ ಸೇರ್ಪಡೆಯೊಂದಿಗೆ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಲಿದೆ.ಅಲ್ಲದೆ ಪಂದ್ಯಗಳ ಸಂಖ್ಯೆ 60ರಿಂದ 94ಕ್ಕೆ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ಆಟಗಾರರು ಆನೇಕ ಸಮಸ್ಯೆ ಎದುರಿಸಲಿದ್ದಾರೆ. ಇದನ್ನು ತಪ್ಪಿಸಲು ಐಪಿಎಲ್ 4ನೆ ಆವೃತ್ತಿಯ ಸರಣಿಯ ವೇಳೆ ಅಗತ್ಯದ ಬದಲಾವಣೆಯ ನಿಟ್ಟಿನಲ್ಲಿ ಐಪಿಎಲ್ ಆಡಳಿತ ಮಂಡಳಿಯು ಯೋಚಿಸುತ್ತಿದೆ.

10 ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ, ರೌಂಡ್ ರಾಬಿನ್ ಮಾದರಿಯಲ್ಲಿ ತಂಡಗಳು ಆಡಲಿದೆ.ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಮೂರು ತಂಡಗಳು ನೇರ ಸೂಪರ್ ಸಿಕ್ಸ್ ಹಂತಕ್ಕೆ ತೆರ್ಗಡೆಗೊಳ್ಳಲಿದೆ.ಇಲ್ಲಿ ತಲಾ 3 ಪಂದ್ಯಗಳನ್ನು ಆಡಿ , ಅಗ್ರಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಐಪಿಎಲ್ ಆಡಳಿತ ಸಮಿತಿಯು ಈ ರೀತಿಯ ಚಿಂತನೆಗೆ ಮುಂದಾಗಿದ್ದರೂ ಫ್ರಾಂಚೈಸಿಗಳ ನಿಲುವು ಏನೆಂದು ಗೊತ್ತಾಗಿಲ್ಲ.


ಒಲಿಂಪಿಕ್ ಬಳಗದಿಂದ ಭಾರತವನ್ನು ಹೊರದಬ್ಬುವ ಎಚ್ಚರಿಕೆ!
ಹೊಸದಿಲ್ಲಿ, ಮೇ 22: ಕ್ರೀಡಾ ಸಚಿವಾಲಯವು ಇಂಡಿಯನ್ ಒಲಿಂಪಿಕ್ ಎಸೋಸಿಯೆಶನ್, ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಸೇರಿದಂತೆ ವಿವಿಧ ಕ್ರೀಡೆಗೆ ಸಂಬಂಧಿಸಿದ ಸಂಘಟನೆಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರದ ಅವಧಿಯನ್ನು ಮೊಟಕುಗೊಳಿಸುವ ಕ್ರಮ ಕೈಗೊಂಡರೆ ಭಾರತವನ್ನು ಒಲಿಂಪಿಕ್ ಕುಟುಂಬದಿಂದ ಮುಂದಿನ ತಿಂಗಳು ಹೊರದಬ್ಬುವ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಇಂಟರ್‌ನ್ಯಾಶನಲ್ ಒಲಿಂಪಿಕ್ ಕೌನ್ಸಿಲ್ ಎಚ್ಚರಿಕೆ ನೀಡಿದೆ.

ಐಒಸಿಯ ನ್ಯಾಶನಲ್ ಒಲಿಂಪಿಕ್ ಕಮಿಟಿ (ಒಸಿಎ)ರಿಲೇಶನ್ಸ್ ಡೈರಕ್ಟರ್ ಪೆರಿ ಮೆರೊ ಮತ್ತು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ) ಇದರ ಮಹಾ ನಿರ್ದೇಶಕ ಹುಸೈನ್ ಅಲ್-ಮುಸಲ್ಲ್ಲಮ್ ಈ ಸಂಬಂಧ ಕ್ರೀಡಾ ಸಚಿವ ಎಂ.ಎಸ್.ಗಿಲ್ ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಕಳುಹಿಸಿರುವ ಜಂಟಿ ಹೇಳಿಕೆಯ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ. ಕ್ರೀಡಾ ಸಚಿವಾಲಯವು ಹೊಸ ಮಾರ್ಗದರ್ಶನ ಸೂತ್ರಗಳನ್ನು ಹೇರಿದಲ್ಲಿ ಈ ವಿಚಾರವನ್ನು ಮುಂದಿನ ತಿಂಗಳು ನಡೆಯುವ ಐಒಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಭಾರತವನ್ನು ಒಲಿಂಪಿಕ್ ಕುಟಂಬದಿಂದ ಅಮಾನತುಗೊಳಿಸುವ ಅಥವಾ ಭಾರತದ ಒಲಿಂಪಿಕ್ ಮಾನ್ಯತೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕ್ರೀಡಾ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರ ಅವಧಿ 12 ವರ್ಷಗಳಿಗೆ ಸೀಮಿತವಾಗಿರುತ್ತದೆ. ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ 8 ವರ್ಷಗಳಿಗಿಂತ ಹೆಚ್ಚು ಸಮಯ ಅಧಿಕಾರದಲ್ಲಿ ಇರುವಂತಿಲ್ಲ. ಇತ್ತೀಚೆಗೆ ಕ್ರೀಡಾ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದಾಗ, ದೇಶದ ನಾನಾ ಕ್ರೀಡಾ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿತ್ತು. ಕ್ರೀಡಾ ಸಚಿವಾಲಯದ ನಿರ್ಧಾರದಿಂದಾಗಿ ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ, ಎನ್‌ಎಸ್‌ಎಫ್ ಮುಖ್ಯಸ್ಥ ವಿ.ಕೆ.ಮೆಲ್ಲೋತ್ರಾ (ಬಿಲ್ಲುಗಾರಿಕೆ), ಜೂಡೋದ ಜಗದೀಶ್ ಟೈಟ್ಲರ್, ಸೈಕ್ಲಿಂಗ್ ಫೆಡರೇಶನ್‌ನ ಮುಖ್ಯಸ್ಥ ಎಂ.ಎಸ್.ದಿಂಡ್ಸಾರ ಅಧಿಕಾರಕ್ಕೆ ಕತ್ತರಿ ಬೀಳುವ ಸಾಧ್ಯತೆ ಕಂಡು ಬಂದಿತ್ತು

No comments: