ಕರಾಚಿ, ಮೇ 28: ಏಶ್ಯಾ ಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಶುಐಬ್ ಮಲಿಕ್ ಸ್ಥಾನ ಗಿಟ್ಟಿಸಿಕೊಂಡಿರುವ ಕುರಿತು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಆಫ್ರಿದಿಯವರಿಗೆ ಒಲವಿರಲಿಲ್ಲ ಎಂದು ಮೂಲಗಳು ಹೇಳಿವೆ.
ಏಶಿಯಾ ಕಪ್ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ 35 ಮಂದಿಯ ಆಟಗಾರರ ಸಂಭಾವ್ಯರ ಪಟ್ಟಿಯಲ್ಲಿ ಮಲಿಕ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಆದರೆ ಈ ಬಗ್ಗೆ ಆಫ್ರಿದಿ ನಿರಾಸಕ್ತಿ ತಾಳಿದ್ದರೆಂದು ಮೂಲಗಳು ಹೇಳಿವೆ. ಆಫ್ರಿದಿಗೆ ಕೇವಲ ಮುಹಮ್ಮದ್ ಯೂಸುಫ್ ಹಾಗೂ ಯೂನಿಸ್ ಖಾನ್ ಇಬ್ಬರನ್ನು ಮಾತ್ರ ಮರಳಿ ಕರೆಸುವ ಇರಾದೆಯಿದೆ ಹೊರತು ಮಲಿಕ್‌ರನ್ನು ಕರೆಸುವ ಯಾವ ಇರಾದೆ ಇಲ್ಲ ಎಂದು ಮೂಲಗಳು ಹೇಳಿವೆ.
May 29, 2010
Subscribe to:
Post Comments (Atom)
No comments:
Post a Comment