VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ರೈತರು-ಕಾರ್ಮಿಕರು ಒಂದಾದರೆ ದೇಶದ ಬದಲಾವಣೆ ಸಾಧ್ಯ

ಕಾರ್ಮಿಕ ಸಮಾವೇಶದಲ್ಲಿ ಪುಟ್ಟಣ್ಣಯ್ಯ ಪ್ರತಿಪಾದನೆ

ಮಂಡ್ಯ, ಮೇ 28: ರೈತರು ಮತ್ತು ಕಾರ್ಮಿಕರು ಒಂದಾದರೆ ಇಡಿ ದೇಶವನ್ನೇ ನಡುಗಿಸಬಹುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆ. ಎಸ್.ಪುಟ್ಟಣ್ಣಯ್ಯ ಪ್ರತಿಪಾದಿಸಿದ್ದಾರೆ.

ಕರ್ನಾಟಕ ಜನಪರ ವೇದಿಕೆ ಸಂಯೋಜಿತ ಜಿಲ್ಲಾ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ಬ್ರಹತ್ ಸಮಾ ವೇಶದಲ್ಲಿ ಅವರು ಮಾತನಾಡಿದರು.

ದುಡಿಯುವ ವರ್ಗದ ಶಕ್ತಿಗಿಂತ ಬೇರೊಂದು ದೊಡ್ಡ ಶಕ್ತಿ ದೇಶದಲ್ಲಿ ಇಲ್ಲ. ಹಸಿರು (ರೈತರು) ಹಾಗೂ ಕೆಂಪು (ಕಾರ್ಮಿಕರು) ಒಂದಾಗಬೇಕು ಎಂದು ಅವರು ಕರೆ ನೀಡಿದರು.

ಪ್ರತಿಯೊ0ದು ಉತ್ಪಾದನೆಯಲ್ಲಿ ಶೇ. 80ರಷ್ಟು ಕಾರ್ಮಿಕರದೇ ಪಾಲು. ಕಾರ್ಮಿಕರು ದುಡಿಮೆ ನಿಲ್ಲಿಸಿದರೆ ದೇಶವೇ ಹಾಳಾಗಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಆಳುವ ವರ್ಗ ದುಡಿಯುವ ವರ್ಗವನ್ನು ಕಡೆಗಣಿಸುತ್ತಲೇ ಬಂದಿದೆ. ದುಡಿಯುವ ಜನರು ಸಂಘ ಟಿತರಾಗದೇ ಇರುವುದು ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.

30 ಕೋಟಿ ಉದ್ಯೋಗ ಸಷ್ಟಿಗೆ ಕಾರಣರಾಗಿರುವ ಸಹಸ್ರಾರು ಕಾರ್ಮಿಕರ ಬಾಳಿಗೆ ಈ ದೇಶದಲ್ಲಿ ಬೆಳಕೇ ಇಲ್ಲದಿರುವುದು ಈ ದೇಶದ ದೊಡ್ಡ ದುರಂತ ಎಂದು ಅವರು ವಿಷಾದಿಸಿದರು.

ಶೇ.60 ಶ್ರಮಿಕ ಮಹಿಳೆಯರು ಗರ್ಭಕೋಶದ ಕಾಯಿಲೆಯಿಂದ ನರಳುತ್ತಿದ್ದಾರೆ. ಈ ಮಹಿಳೆಯರಿಗೆ ಆರೋಗ್ಯ ರಕ್ಷಣೆ ಕಾರ್ಡ್ ಇಲ್ಲ ಎಂದು ಪುಟ್ಟಣ್ಣಯ್ಯ ಸರಕಾರದ ವಿರುದ್ಧ ಕಿಡಿಕಾರಿದರು.

ವಿಮಾನ ಅಪಘಾತದಲ್ಲಿ ಸತ್ತವರಿಗೆ 10 ಲಕ್ಷ ರೂ. ಪರಿಹಾರವಿದೆ. ಆದರೆ, ಹಾವು ಕಡಿದು ಸತ್ತ ಕೃಷಿಕರಿಗೆ 500 ರೂ. ಪರಿಹಾರವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆವರು ಮತ್ತು ರಕ್ತ ಸುರಿಸುವವರಿಗೆ ನ್ಯಾಯಬೇಕು. ಅಲ್ಲಿವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ಗೊಷಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಮತ್ತು ಕಾರ್ಮಿಕ ಮುಖಂಡ ಎಸ್. ಬಾಲನ್ ಅವರು, ತಮ್ಮ ಬೇಡಿಕೆ ಈಡೇರಿಕೆಗೆ ಅಸಂಗಟಿತ ಕಾರ್ಮಿಕರ ಒಗ್ಗಟ್ಟಿನ ಹೋರಾಟ ಅನಿವಾರ್ಯವೆಂದರು.

ದೇಶದ 40.33 ಕೋಟಿ ಅಂಸಗಟಿತ ಕಾರ್ಮಿಕರು ಜೀವನ ಭದ್ರತೆಯಿಂದ ವಂಚಿತರಾಗಿದ್ದಾರೆ. ಕಾನೂನುಗಳಿದ್ದರೂ ಪ್ರಯೊಜನವಾಗಿಲ್ಲ ಎಂದು ಅವರು ವಿವರಿಸಿದರು.

ಜಾತಿ, ಧರ್ಮ ಮರೆತು ಅಸಂಗಟಿತ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದೆಂದು ಪಿಎಫ್ಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಕಿವಿಮಾತು ಹೇಳಿದರು.

ಕರ್ನಾಟಕ ಜನಪರ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ. ವಾಸು, ಕಾರ್ಯದರ್ಶಿ ಕುಮಾರ್ ಸಮತಳ, ಮಂಡ್ಯ ಜಿಲ್ಲಾ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಎಂ. ಬಿ. ಕುವಾರ್ ಮಾತನಾಡಿದರು. ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಕಷ್ಣಪ್ರಕಾಶ್ ಇತರರು ವೇದಿಕೆಯಲ್ಲಿದ್ದರು. ವಕೀಲ ಎಂ. ಮಹೇಶ್ ನಿರ್ಣಯ ಮಂಡಿಸಿದರು.

ಮೆರವಣಿಗೆ: ಸಮಾವೇಶಕ್ಕೂ ಮುನ್ನ ಕಾಳಿಕಾಂಬ ದೇವಸ್ಥಾನದ ಆವರಣದಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ಮಂಡ್ಯದ ಕಾರ್ಮಿಕ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

ಅಸಂಘಟಿತ ಕಾರ್ಮಿಕರಿಗೆ ಇರುವ ಕಾನೂನುಗಳು ಜಾರಿಯಾಗಲು ಸರಕಾರ ಮತ್ತು ಕಾರ್ಮಿಕ ಇಲಾಖೆಗಳು ಕ್ರಮ ಕೈಗೊಳ್ಳಬೇಕು, ಎಲ್ಲ ಅಸಂಘಟಿತ ಕಾರ್ಮಿಕರಿಗೂ ಅನ್ವಯವಾಗುವಂತೆ ಕಾನೂನುಗಳನ್ನು ಕಾರ್ಮಿಕರ ಪರವಾಗಿ ಜಾರಿಗೆ ತರಬೇಕು.

ಗುತ್ತಿಗೆ ಪದ್ಧತಿ, ದಿನಗೂಲಿ ಪದ್ಧತಿಗಳು ರದ್ದಾಗಬೇಕು, ಖಾಯಂ ಸ್ವರೂಪದ ಎಲ್ಲಾ ಕೆಲಸಗಳಿಗೂ ಕೂಡಲೇ ಹಾಲಿ ಗುತ್ತಿಗೆ/ದಿನಗೂಲಿ/ಲೋಡ್ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಿಕೊಳ್ಳಬೇಕು.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಾನ್‌ಕ್ಲಿನಿಕಲ್ ನೌಕರರಿಗೆ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿರುವ ಗುತ್ತಿಗೆದಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಇತರರ ಮೇಲೆ ಕ್ರಮ ಕೈಗೊಳ್ಳಬೇಕು, ಅವರುಗಳಿಗೆ ನೆಮ್ಮದಿಯಿಂದ ಕೆಲಸ ಮಾಡುವ ಅವಕಾಶ ಮಾಡಿಕೊಡಬೇಕು.

ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಸದ್ಯಕ್ಕೆ 8 ಗಂಟೆಗಳ ಕೆಲಸಕ್ಕೆ ಕನಿಷ್ಠ ಕೂಲಿ 300 ರೂ. ನಿಗದಿ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಯಾಗಬೇಕು.

ಈಗಿರುವ ಇಎಸ್‌ಐ ಮತ್ತು ಪಿಎಫ್ ಕಾನೂನಿನಡಿ ಯಾರಿಗೆಲ್ಲಾ ಅನ್ವಯವಾಗುತ್ತದೋ, ಅವರೆಲ್ಲರಿಗೂ ಇಎಸ್‌ಐ, ಪಿಎಫ್ ಮತ್ತು ಇತರ ಸೌಲಭ್ಯಗಳು ದೊರಕಬೇಕು.

ಗುತ್ತಿಗೆ ಪೌರಕಾರ್ಮಿಕರನ್ನು ಆದ್ಯತೆಯ ಮೇರೆಗೆ ಖಾಯಂಗೊಳಿಸಬೇಕು, ಗುತ್ತಿಗೆ ಪೌರಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿಯದಂತಿರಲು ಅವಶ್ಯವಿರಲು ಕ್ರಮಗಳನ್ನು ಕೈಗೊಳ್ಳಬೇಕು.

ಕೆಲಸದ ಸ್ಥಳದಲ್ಲಿ ಮಹಿಳಾ ಕಾರ್ಮಿಕರ ಮೇಲಿನ ಲೈಂಗಿಕ ಮತ್ತು ಇತರ ದೌರ್ಜನ್ಯಗಳು ನಿಲ್ಲಲು ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು.

ಗುಲ್ಬರ್ಗದಲ್ಲಿ ಉಪವಾಸ ನಿರತ ಪೌರಕಾರ್ಮಿಕ ಮಹಿಳೆಯ ಸಾವಿನ ಹೊಣೆಯನ್ನು ಸರಕಾರವೇ ಹೊರಬೇಕು. ಈ ಕೂಡಲೇ ಗುಲ್ಬರ್ಗಾ ಪೌರಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು.

ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ, ಸೌಲಭ್ಯಗಳು ದೊರಕಬೇಕು, 8 ಗಂಟೆ ಕೆಲಸದ ಅವಧಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

No comments: