ಮುಸ್ಲಿಮ್ ಮಹಿಳೆಯರ ಕೆಲಸಕ್ಕೆ ಹೋಗುವುದು, ಇನ್ಸೂರೆನ್ಸ್ ಪಾಲಿಸಿ ಮಾಡಿಸುವುದು ಕೂಡ ಇಸ್ಲಾಂಗೆ ವಿರುದ್ಧದವಾದದ್ದು, ಇದೀಗ ಹುಟ್ಟುಹಬ್ಬ ಆಚರಿಸುವುದು ಕೂಡ ಇಸ್ಲಾಂ ಧರ್ಮಕ್ಕೆ ವಿರುದ್ಧದವಾದದ್ದು ಎಂದು ಇಸ್ಲಾಮ್ ಧಾರ್ಮಿಕ ಸಂಘಟನೆಯಾದ ದಾರುಲ್ ಉಲೂಮ್ ದಿಯೋಬಂದ್ ತಿಳಿಸಿದೆ.
ಹುಟ್ಟುಹಬ್ಬದ ಆಚರಣೆ ಮೂಲ ಯೆಹೂದಿ ಮತ್ತು ಕ್ರಿಶ್ಚಿಯನ್‌ರದ್ದು, ಆದರೆ ಇಸ್ಲಾಮ್ ಇದಕ್ಕೆ ವಿರುದ್ದವಾಗಿದೆಯೇ ಎಂದು ಮಹಿಳೆಯೊಬ್ಬರು ಈ ಬಗ್ಗೆ ಕೇಳಿದ ಪ್ರಶ್ನೆಗೆ ದಿಯೋಬಂದ್ ಸ್ಪಷ್ಟನೆ ನೀಡಿದೆ. ಆ ನಿಟ್ಟಿನಲ್ಲಿ ಹುಟ್ಟು ಹಬ್ಬ ಆಚರಿಸುವುದು ಸರಿಯಲ್ಲ ಎಂದಿರುವ ದಿಯೋಬಂದ್ ಅದರ ವಿರುದ್ಧವೇ ಫತ್ವಾ ಹೊರಡಿಸಿದೆ.
ಇತ್ತೀಚೆಗಷ್ಟೇ ಭಾರತದ ಬೃಹತ್ ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್, ಕೆಲಸಕ್ಕೆ ಹೋಗುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿ, ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ತಿಳಿಸಿತ್ತು.
ಪುರುಷರು ಮತ್ತು ಮಹಿಳೆಯರು ಜತೆಯಾಗಿ ಕೆಲಸ ಮಾಡುವ ಮತ್ತು ಮುಖ ಪರದೆಯಿಲ್ಲದೆ ಪುರುಷರ ಜತೆ ಮಾತನಾಡಲು ಅವಕಾಶ ಮಾಡಿಕೊಡುವ ಖಾಸಗಿ ಅಥವಾ ಸರಕಾರಿ ಕೆಲಸಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಫತ್ವಾದಲ್ಲಿ ಸೂಚಿಸಲಾಗಿತ್ತು.
ಮುಸ್ಲಿಂ ಮಹಿಳೆ ಕಚೇರಿಯಲ್ಲಿರುವ ಸಂದರ್ಭದಲ್ಲಿ ಬುರ್ಖಾ ತೊಡುವುದು ಕಡ್ಡಾಯ ಮತ್ತು ಪುರುಷ ಸಹೋದ್ಯೋಗಿಗಳ ಜತೆ ಬೆರೆಯಬಾರದು ಎಂದು ಶರಿಯತ್ ಸ್ಪಷ್ಟವಾಗಿ ಹೇಳಿದೆ ಎಂದು ದಿಯೋಬಂದ್ ಧರ್ಮಗುರುಗಳು ಹೇಳಿದ್ದರು. ಅಲ್ಲದೇ ಇಸ್ಲಾಮ್ ಶರಿಯತ್ ವಿಮಾ ಪಾಲಿಸಿ ಮಾಡುವುದನ್ನು ಕೂಡ ವಿರೋಧಿಸುತ್ತದೆ ಎಂದು ಇತ್ತೀಚೆಗಷ್ಟೇ ದಿಯೋಬಂದ್ ತನ್ನ ಸ್ಪಷ್ಟನೆ ನೀಡಿತ್ತು.
Subscribe to:
Post Comments (Atom)
No comments:
Post a Comment