
ಭಾರತದ ಕ್ರಿಕೆಟಿಗ ಪ್ರಗ್ಯಾನ್ ಓಜಾ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ಸೋಮವಾರ ಪಂಚತಾರಾ ಹೋಟೆಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ವಧು ಕರಬಿ ಬಿಸ್ವಾಲ್‌ರನ್ನು ಈ ಎಡಗೈ ಸ್ಪಿನ್ನರ್ ತನ್ನ ಬಾಲ ಸಂಗಾತಿಯನ್ನಾಗಿ ಆಯ್ಕೆಮಾಡಿಕೊಂಡಿದ್ದಾರೆ.
ವಿವಾಹ ಒರಿಸ್ಸಾ ಸಂಪ್ರದಾಯದಂತೆ ಜರಗಿತ್ತು ಎಂದು ಓಜಾ ನಂತರ ವರದಿಗಾರರಿಗೆ ತಿಳಿಸಿದರು.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಓಜಾ ಅತೀ ಹೆಚ್ಚು ವಿಕೆಟ್ ಕಿತ್ತಿದ್ದರಲ್ಲದೆ 'ಪರ್ಪಲ್ ಕ್ಯಾಪ್' ಪ್ರಶಸ್ತಿಗೂ ಆಯ್ಕೆಯಾಗಿದ್ದರು. ಆದರೂ ಟ್ವೆಂಟಿ-20 ವಿಶ್ವಕಪ್‌ಗಾಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.
No comments:
Post a Comment