VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 16, 2010

ಅಜ್ಮೀರ್-ಹೈದರಾಬಾದ್ ಸ್ಫೋಟ ಸಂಬಂಧ ದೃಢಆರೆಸ್ಸೆಸ್ ಕಾರ್ಯಕರ್ತರು ಪ್ರಮುಖ ಆರೋಪಿಗಳು

* ಎರಡು ಪ್ರಕರಣಗಳಲ್ಲೂ ಸ್ಫೋಟಕ್ಕೆ ಒಂದೇ ಕಾರ್ಯ ವಿಧಾನ * ಮಾಲೇಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್, ಲೆ. ಕರ್ನಲ್ ಪುರೋಹಿತ್‌ರಿಂದ ಮಾಹಿತಿ ಬಹಿರಂಗ
* ಸ್ವಾಮಿ ಅಸೀಮಾನಂದ ಬಂಧನ ಸಾಧ್ಯತೆ

ಹೊಸದಿಲ್ಲಿ, ಮೇ 15: ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಮತ್ತು ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಆರೆಸ್ಸೆಸ್ ಕಾರ್ಯಕರ್ತರಾದ ದೇವೇಂದ್ರ ಗುಪ್ತಾ ಮತ್ತು ಚಂದ್ರಶೇಖರ್ ಬರೋಡ್‌ನ್ನು ಪ್ರಧಾನ ಶಂಕಿತರೆಂದು ಗುರುತಿಸಲಾಗಿದೆ.

ಎರಡೂ ಸ್ಫೋಟ ಪ್ರಕರಣಗಳಿಗೆ ಸಂಬಂಧ ವಿರುವುದನ್ನು ಸಿಬಿಐಯು ದೃಢ ಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಸರಿ ಭಯೋತ್ಪಾದಕ ಸಂಘಟನೆಯ ಪಾತ್ರದ ಕುರಿತು ಹೆಚ್ಚಿನ ಮಾಹಿತಿಗಳನ್ನು ಸಿಬಿಐ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.


ಆದರೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ, ಮುಸ್ಲಿಮ್ ಭಯೋತ್ಪಾದಕ ಸಂಘಟನೆಗಳು ಜವಾಬ್ದಾರರೆಂದು ಶಂಕಿಸಿ ಪೊಲೀಸರು ಕೆಲವು ಮುಸ್ಲಿಮ್ ಯುವಕರನ್ನು ಬಂಧಿಸಿ ಹಿಂಸೆಗೊಳಪಡಿಸಿದ್ದರು.

ಇಬ್ರಾಹೀಂ ಜುನೈದ್ ಮತ್ತು ಇತರ 25 ಮಂದಿಯನ್ನು ಕಳೆದ 2 ವರ್ಷಗಳಿಂದ ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ತೀವ್ರ ಹಿಂಸೆ ನೀಡಲಾಗಿದೆ.


‘‘ನನ್ನನ್ನು ನಿರಂತರ ಐದು ದಿನಗಳ ಕಾಲ ಥಳಿಸಲಾಗಿತ್ತು. ನನಗೆ ತೃತೀಯ ದರ್ಜೆಯ ಹಿಂಸೆ ನೀಡಲಾಗಿತ್ತು. ರಬ್ಬರ್ ಬೆಲ್ಟ್‌ನಲ್ಲಿ ನನಗೆ ಥಳಿಸಲಾ ಗಿತ್ತು ಮತ್ತು ನನ್ನ ದೇಹಕ್ಕೆ ವಿದ್ಯುತ್ ಆಘಾತ ಕೂಡ ನೀಡಲಾಗಿತ್ತು’’ ಎಂದು ಅಮಾಯಕ ಜುನೈದ್ ಪೊಲೀಸ್ ಹಿಂಸಾಚಾರದ ಕುರಿತು ವಿವರಿಸುತ್ತಾನೆ.


‘‘ಅಜ್ಮೀರ್ ದರ್ಗಾ ಸ್ಫೋಟ ಮತ್ತು ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ನಡುವೆ ಸಂಬಂಧವಿದೆ’’ ಎಂದು ಸಿಬಿಐ ನಿರ್ದೇಶಕ ಅಶ್ವಿನಿ ಕುಮಾರ್ ಹೇಳಿದ್ದಾರೆ.


ಎರಡೂ ಸ್ಫೋಟಗಳೂ ಶುಕ್ರವಾರದ ಪ್ರಾರ್ಥನೆ ಮುಗಿದ ಬಳಿಕ ನಡೆದಿದೆ. ಎರಡರಲ್ಲೂ ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿತ್ತು. ಎರಡೂ ಸ್ಫೋಟಕಗಳನ್ನೂ ತವರದ ಪೆಟ್ಟಿಗೆಗಳಲ್ಲಿ ಇರಿಸಲಾಗಿತ್ತು.

ಅದರ ಸುತ್ತ ಕಬ್ಬಿಣದ ಪೈಪ್ ಸುತ್ತಲ್ಪಟ್ಟಿತ್ತು. ಎರಡೂ ಬಾಂಬ್‌ಗಳನ್ನು ಸ್ಫೋಟಿಸಲು ಸೆಲ್‌ಫೋನ್‌ಗಳನ್ನು ಬಳಸಲಾಗಿತ್ತು. ಎರಡೂ ಘಟನೆಗಳಿಗೂ ನಕಲಿ ಗುರುತು ಚೀಟಿಗಳನ್ನು ನೀಡಿ ಒಂದೇ ಕಡೆಯಿಂದ ಸಿಮ್‌ಕಾರ್ಡ್‌ಗಳನ್ನು ಖರೀದಿಸಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಬಾಂಬ್‌ನ್ನು ಸುತ್ತಲು ತೆಲುಗು ಸುದ್ದಿ ಪತ್ರಿಕೆಯನ್ನು ಬಳಸಲಾಗಿತ್ತು.


ಆದರೆ ಬಾಂಬ್ ಸ್ಫೋಟದ ಹೊಣೆಯನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಹರ್ಕತ್-ಅಲ್- ಜಿಹಾದ್-ಅಲ್ ಇಸ್ಲಾಮಿ (ಹುಜಿ) ಅಥವಾ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಈ ಸ್ಫೋಟಗಳಿಗೆ ಜವಾಬ್ದಾರಿ ಎಂಬಂತೆ ಬಿಂಬಿಸಲು ಯತ್ನಿಸಲಾಗಿತ್ತು.

ಆದರೆ ಇದೀಗ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರಾಗಿರುವ ಗುಪ್ತಾ ಮತ್ತು ಬರೋಡ್, ಈ ಸ್ಫೋಟಗಳ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟಿದ್ದಾರೆ.


ಮಾಲೆಗಾಂವ್ ಸ್ಫೋಟ ಆರೋಪಿಗಳಾದ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಂಠ ಪುರೋಹಿತ್‌ರನ್ನು ಮಂಪರು ಪರೀಕ್ಷೆಗೊಳಪಡಿಸಿದ್ದಾಗ, ಗುಪ್ತಾ ಮತ್ತು ಬರೋಡ್‌ರ ಹೆಸರು ಕೇಳಿ ಬಂದಿತ್ತು ಎಂದು ತನಿಖಾ ಮೂಲಗಳು ಹೇಳುತ್ತವೆ.

2007ರಲ್ಲಿ ಸಾವನ್ನಪ್ಪಿರುವ ಮಧ್ಯಪ್ರದೇಶದ ಆರೆಸ್ಸೆಸ್ ಕಾರ್ಯಕರ್ತ ಸುನಿಲ್ ಜೋಶಿ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ‘‘ಗುಪ್ತಾನ ಸಹಾಯದೊಂದಿಗೆ ಸುನಿಲ್ ಜೋಶಿ ದರ್ಗಾ ಸ್ಫೋಟ ಕಾರ್ಯಾಚರಣೆಯನ್ನು ಕೈಗೊಂಡಿದ್ದ ಎಂಬುದನ್ನು ಮಾಲೆಗಾಂವ್ ಸ್ಫೋಟ ಆರೋಪಿ ಕರ್ನಲ್ ಪುರೋಹಿತ್ ತನ್ನ ತಪ್ಪೊಪ್ಪಿಗೆಯಲ್ಲಿ ಒಪ್ಪಿಕೊಂಡಿದ್ದಾನೆ’’ ಎಂದು ರಾಜಸ್ಥಾನ ಗೃಹ ಸಚಿವ ಶಾಂತಿ ಧರಿವಾಲ್ ದೃಢ ಪಡಿಸಿದ್ದಾರೆ.


ಆದಾಗ್ಯೂ ಅಜ್ಮೀರ್ ಮತ್ತು ಹೈದರಾಬಾದ್ ಸ್ಫೋಟಗಳನ್ನು ನಿರ್ವಹಿಸಲು ಗುಪ್ತಾ ಮತ್ತು ಬರೋಡ್‌ಗೆ ಸಹಕರಿಸಿದ ವ್ಯಕ್ತಿಗಾಗಿ ತನಿಖಾ ತಂಡವು ಇದೀಗ ವ್ಯಾಪಕ ಬಲೆ ಬೀಸಿದೆ. ಗುಜರಾತ್‌ನ ದಂಗ್ಸ್ ಜಿಲ್ಲೆಯಲ್ಲಿ ಆದಿವಾಸಿ ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ನಡೆಸಿದ್ದ ಸ್ವಾಮಿ ಅಸೀಮಾನಂದ್ ಈ ವ್ಯಕ್ತಿಯೆಂದು ಶಂಕಿಸಲಾಗಿದೆ.


ಸ್ವಾಮಿ ಅಸೀಮಾನಂದ್ ದಂಗ್ಸ್ ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿರುವುದಾಗಿ ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಎಟಿಎಸ್ ಆತನಿಗಾಗಿ ಅಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.


ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿಗಳಾದ ಪ್ರಜ್ಞಾ ಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ದೇಶದಲ್ಲಿರುವ ಕೇಸರಿ ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗಳೆಂದು ಗುರುತಿಸಲಾಗಿದೆ.
ಮಾಲೆಗಾಂವ್ ಸ್ಫೋಟ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಸ್ಫೋಟಕ್ಕೆ ಬಳಸಿರುವ ಆರ್‌ಡಿಎಕ್ಸ್‌ನ್ನು ಸೇನಾ ಸಂಗ್ರಹಾಲಯದಿಂದ ಸಂಗ್ರಹಿಸಿದ್ದನೆಂದು ಆರೋಪಿಸಲಾಗಿದೆ.

ಆದರೆ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇವೆಗೆ ನಿಯೋಜಿತನಾಗಿದ್ದ ಸೇನಾ ನೆಲೆಯಲ್ಲಿ ಯಾವುದೇ ಸ್ಫೋಟಕ ಕಾಣೆಯಾಗಿಲ್ಲ ಎಂದು ಭಾರತೀಯ ಸೇನೆಯ ತನಿಖೆಯು ಸ್ಪಷ್ಟ ಪಡಿಸಿದೆ. ಹೀಗಾಗಿ ಸ್ಫೋಟಕಗಳು ಎಲ್ಲಿಂದ ಬಂತು ಮತ್ತು ಅವುಗಳನ್ನು ಮಾಲೆಗಾಂವ್, ಅಜ್ಮೀರ್, ಮಕ್ಕಾ ಮಸೀದಿ ಸ್ಫೋಟಕರಿಗೆ ಯಾರು ಪೂರೈಸಿದರು ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.


ಆದಾಗ್ಯೂ ಮಾಲೆಗಾಂವ್‌ನಿಂದ ಹಿಡಿದು ಅಜ್ಮೀರ್, ಹೈದರಾಬಾದ್ ಎಲ್ಲ ಸ್ಫೋಟಗಳಿಗೂ ಮಧ್ಯಪ್ರದೇಶದ ಇಂದೋರ್‌ನಿಂದ ಕಾರ್ಯಾಚರಿಸುತ್ತಿರುವ ಅಭಿನವ್ ಭಾರತ್ ಎಂಬ ಭಯೋತ್ಪಾದಕ ಸಂಘಟನೆಯ ಕೈವಾಡವಿರುವ ಕುರಿತು ವ್ಯಾಪಕಶಂಕೆ ಮೂಡಿದೆ.

No comments: