ಅಚ್ಚರಿ ಬೆಳವಣಿಗೆಯೊಂದರಲ್ಲಿ ಕ್ರಿಕೆಟಿಗ ಶೋಯಿಬ್ ಮಲೀಕ್ ಮೇಲೆ ಹೇರಲಾಗಿದ್ದ ಒಂದು ವರ್ಷದ ನಿಷೇಧವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಾಪಸ್ ಪಡೆದುಕೊಂಡಿದೆ.
ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿನ ಕಳಪೆ ಪ್ರದರ್ಶನ ಮತ್ತು ಅಶಿಸ್ತಿನ ವರ್ತನೆಯ ಹಿನ್ನಲೆಯಲ್ಲಿ ಕಠಿಣ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಪಿಸಿಬಿ, ಮಲೀಕ್ ಮೇಲೆ ಒಂದು ವರ್ಷದ ನಿಷೇಧ ಹೇರಿತ್ತಲ್ಲದೆ 20 ಲಕ್ಷ ರೂಪಾಯಿ ದಂಡ ಕೂಡಾ ವಿಧಿಸಲಾಗಿತ್ತು.
ಆದರೆ ಇದೀಗ ನಿಷೇಧ ಹಿಂಪಡೆದ ಹಿನ್ನಲೆಯಲ್ಲಿ ಒಟ್ಟು ದಂಡದ ಅರ್ಧದಷ್ಟು ಪಾವತಿಸಿದರೆ ಸಾಕಗುತ್ತದೆ ಎಂದು ಪಿಸಿಬಿ ತಿಳಿಸಿದೆ.
ತಂಡದ ಕೆಲವು ಆಟಗಾರರು ಬೇಡಿಕೆಯಿರಿಸಿದ್ದರ ಹಿನ್ನಲೆಯಲ್ಲಿ ಪಿಸಿಬಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಕೆಲವು ವಾರಗಳ ಹಿಂದೆಯಷ್ಟೇ ತನ್ನ ಮೇಲೆ ಕೈಗೊಂಡಿರುವ ಶಿಸ್ತು ಕ್ರಮವನ್ನು ಪ್ರಶ್ನಿಸಿ ಮಲಿಕ್ ಪಿಸಿಬಿ ವಿಚಾರಣಾ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು.
ಒಟ್ಟಿನಲ್ಲಿ ನಿಷೇಧದ ಹಿಂತೆಗೆತದಿಂದಾಗಿ ಮಲೀಕ್ ಇದೀಗ ರಿಲೀಫ್ ಸಿಕ್ಕಿದಂತಾಗಿದ್ದು, ಆಡಲು ಮುಕ್ತವಾಗಿದ್ದಾರೆ.
May 30, 2010
Subscribe to:
Post Comments (Atom)
No comments:
Post a Comment