VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ರೆಬೆಲ್ ಸ್ಟಾರ್, ಕ್ರೇಜಿ ಸ್ಟಾರ್‌ಗೆ ಹ್ಯಾಪಿ ಬರ್ತ್‌ಡೇ

ಕನ್ನಡ ಚಿತ್ರರಂಗದ ಪಾಲಿಗೆ ಈ ತಿಂಗಳಾಂತ್ಯದ ಎರಡು ದಿನ ಅತ್ಯಂತ ಮಹತ್ವಪೂರ್ಣವಾದುದು. ಚಿತ್ರ ಅಭಿಮಾನಿಗಳಿಗಂತೂ, ಡಬಲ್ ಧಮಾಕಾ.

ಏಕೆಂದರೆ ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ಹಾಗೂ ಮೇರು ನಟರ ಜನ್ಮದಿನಗಳಿವು. ಇದನ್ನು ಅದೃಷ್ಟ ಅನ್ನುವುದೋ, ಕೋ ಇನ್ಸಿಡೆನ್ಸ್ ಎಂದು ಹೇಳುವುದೋ ಗೊತ್ತಿಲ್ಲ. ಶನಿವಾರ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಭಾನುವಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ಸಡಗರ.

ರೆಬೆಲ್ ಸ್ಟಾರ್ ಹೆಸರಿನಿಂದ ಕನ್ನಡ ಅಭಿಮಾನಿಗಳಿಗೆ ಪರಿಚಯವಾಗಿರುವ ಅಂಬರೀಶ್, ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿ ನಾಯಕರಾಗಿ ವೈಭವಿಸಿದವರು. ಈ ಮಂಡ್ಯದ ಗಂಡು ತಮ್ಮ ಬದುಕಿನಲ್ಲಿ ಕಂಡ ಏಳು ಬೀಳುಗಳು ಅನೇಕ.ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ ಪಯಣಿಸಿ ಯಶಸ್ವಿಯಾದ ಇವರು ಈಗ ರಾಜಕೀಯ ಹಿನ್ನಡೆಯ ಪರಿಣಾಮ ಚಿತ್ರ ಬದುಕಿನಲ್ಲಿ ಮುಂದುವರಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಕನ್ನಡ ಚಿತ್ರ ರಂಗದ ನಾಯಕರಲ್ಲಿ ಅತ್ಯಂತ ಹಿರಿಯ ನಾಯಕ ಇವರು. ಸದ್ಯ ಸುದೀಪ್ ಅವರ ವೀರ ಪರಂಪರೆಯಲ್ಲಿ ನಟಿಸುತ್ತಿದ್ದು, ಸಿಕ್ಕಾಪಟ್ಟೆ ಬ್ಯುಸಿ ಕೂಡ. ಅಂತ, ಕಲಿಯುಗ ಕರ್ಣ ಮುಂತಾದ ಚಿತ್ರಗಳ ಮೂಲಕ ಹೆಸರು ಮಾಡಿರುವ ಈ ನಟನಿಗೆ ಮೇ 29ರಂದು ಹುಟ್ಟು 59ನೇ ಹಬ್ಬದ ಸಡಗರ. ಅವರ ಬೆಂಗಳೂರು ನಿವಾಸದಲ್ಲಿ ಅಭಿಮಾನಿಗಳ ದಂಡೇ ನೆರೆದು ಶುಭಾಶಯ ಹೇಳುತ್ತಿದೆ. ಹ್ಯಾಪಿ ಬರ್ತ್‌ಡೇ ಅಂಬಿ ಸಾರ್.

ಮತ್ತೊಂದೆಡೆ, ಹೂ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ನಟ ರವಿಚಂದ್ರನ್‌ಗೆ ಮೇ 30ರಂದು 49ನೇ ಹುಟ್ಟು ಹಬ್ಬದ ಸಂಭ್ರಮ. ಪ್ರೇಮಲೋಕದಿಂದ ಹೂವರೆಗೆ ಪಯಣಿಸಿರುವ ಇವರು ನಾಯಕರಾಗಿ ಅಭಿನಯಿಸಿದ ಅದೆಷ್ಟೋ ಸಿನಿಮಾಗಳು ಹೆಸರು ಮಾಡಿವೆ. ಬೇರೆ ಭಾಷೆಗಳ ಸುಂದರಿಯರನ್ನೆಲ್ಲಾ ಕನ್ನಡಕ್ಕೆ ಪರಿಚಯಿಸುತ್ತಾ, ಅತ್ಯಂತ ಅದ್ದೂರಿ ಚಿತ್ರಗಳ ನಿರ್ಮಿಸುತ್ತಾ ಗಮನ ಸೆಳೆದಿರುವ ರವಿಚಂದ್ರನ್ ಅವರಿಗೂ ನಮ್ಮಿಂದ, ನಿಮ್ಮಿಂದ ಶುಭಾಶಯಗಳು.

No comments: