ವೆಸ್ಟ್‌ಇಂಡೀಸ್‌ನ ಪಬ್‌ವೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾರಿಗೊಳಿಸಿದ್ದ ಶೋಕಾಸ್ ನೋಟಿಸ್‌ಗೆ ನಾಲ್ವರು ಆಟಗಾರರು ಉತ್ತರ ನೀಡಿದ್ದಾರೆ.
ಈ ಹಿಂದೆ ಸ್ಥಳೀಯ ನೈಟ್ ಕ್ಲಬ್‌ನಲ್ಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆರು ಮಂದಿ ಆಟಗಾರರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತಲ್ಲದೆ ಉತ್ತರ ನೀಡಲು ಏಳು ದಿನಗಳ ಗಡುವು ನೀಡಿತ್ತು.
ಜಹೀರ್ ಖಾನ್, ಯುವರಾಜ್ ಸಿಂಗ್, ಆಶೀಶ್ ನೆಹ್ರಾ, ಪಿಯೂಷ್ ಚಾವ್ಲಾ, ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿತ್ತು.
ಕೆಲವು ಆಟಗಾರರು ಬಿಸಿಸಿಐ ಅಧಿಕಾರಿಗಳನ್ನು ನೇರ ಭೇಟಿ ಮಾಡಿದ್ದಾರೆ. ಇನ್ನು ಕೆಲವರು ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಆ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮನ್ನು ಅವಮಾನ ಮಾಡಿದ್ದರಿಂದ ಆ ರೀತಿ ವರ್ತಿಸಬೇಕಾಯಿತು ಎಂದು ಆಟಗಾರರು ಸ್ಪಷ್ಟನೆ ನೀಡಿರುವುದಾಗಿ ತಿಳಿದು ಬಂದಿದೆ.
ವಿಶ್ವಕಪ್‌ನಲ್ಲಿ ಎದುರಾದ ಹೀನಾಯ ಸೋಲಿನ ಬಳಿಕ ಮೇ 11ರಂದು ಸೇಂಟ್ ಲೂಸಿಯಾದ ಸ್ಥಳೀಯ ಪಬ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಟೀಕೆಯನ್ನು ಸಹಿಸಲಾರದೆ ಆಟಗಾರರರು ಅವರೊಂದಿಗೆ ಕಿತ್ತಾಡಿದ್ದರು.
May 21, 2010
Subscribe to:
Post Comments (Atom)
No comments:
Post a Comment