
ಮಂಗಳೂರು: ಶ್ರೀರಾಮಸೇನೆ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ ಅವರನ್ನು ಸುಳ್ಳು ಮೊಕದ್ದಮೆ ಹಾಕಿ ಜೈಲಿಗೆ ಹಾಕಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ರಾಷ್ಟ್ರವಾದಿ ಯುವ ಕಾಂಗ್ರೆಸ್, ಸರ್ಕಾರದ ಈ ಕ್ರಮವನ್ನು ದಮನಕಾರಿ ಕ್ರಮ ಎಂದು ಟೀಕಿಸಿದೆ. ರಾಜ್ಯದ ಬಿಜೆಪಿ ಸರ್ಕಾರದ ನೀತಿಗಳನ್ನು ಪ್ರತಿಭಟಿಸುವ ಸಂಘಟನೆಗಳ ಪದಾಧಿಕಾರಿಗಳ ಮೇಲೆ ಸರ್ಕಾರ ಸುಳ್ಳು ಮೊಕದ್ದಮೆ ಹೂಡುತ್ತಿದೆ ಎಂದು ಎನ್‌ಸಿಪಿ ರಾಜ್ಯ ಯುವ ಘಟಕ ಆರೋಪಿಸಿದೆ. ಸರ್ಕಾರದ ನೀತಿಯಿಂದಾಗಿ ಮಂಗಳೂರಿನಂತಹ ಮಹಾ ನಗರಗಳಲ್ಲಿ ಸ್ವಂತ ಮನೆ ನಿರ್ಮಿಸದಂತಹ ವಾತಾವರಣವನ್ನು ಹುಟ್ಟುಹಾಕಿರುವ ಬಿಜೆಪಿ ಸರ್ಕಾರ ಬಿಲ್ಡರ್‌ಗಳ ಫ್ಲಾಟ್‌ಗಳು ಮಾರಾಟವಾಗುವ ನೀತಿ ರೂಪಿಸುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರದ ಇಂತಹ ಜನ ವಿರೋಧಿ ನೀತಿಗಳ ವಿರುದ್ದ ರಾಷ್ಟ್ರವಾದಿ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪಕ್ಷದ ಯುವ ವಿಭಾಗದ ಅಧ್ಯಕ್ಷ ಧೀರಜ್ ಕುಮಾರ್ ಶೆಟ್ಟಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
No comments:
Post a Comment