ಚೆನ್ನೈ, ಮೇ 24: ಯಾವುದೇ ವಿಮಾನ ಭೂಸ್ಪರ್ಶವಾಗುವ ವೇಳೆ ಅಪಘಾತಕ್ಕೀಡಾದರೆ, ಸಹಜವಾಗಿ ಪೈಲಟ್ ಮೇಲೆ ಸಂಶಯ ವ್ಯಕ್ತ ಪಡಿಸಲಾಗುತ್ತದೆ. ಆದರೆ ಪೈಲಟ್‌ಗಳು ಯಾಕೆ ತಪ್ಪುಗಾರರಾಗುತ್ತಾರೆ ಎಂಬ ಕುರಿತು ಯಾರೂ ಚಿಂತಿಸುವುದಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಪ್ರೋಚ್ ರಾಡಾರ್ ಇಲ್ಲ.
ಒಂದು ವೇಳೆ ಅದು ಇದ್ದಿದ್ದರೆ, ವಾಯು ಸಾರಿಗೆ ನಿಯಂತ್ರಕವು (ಎಟಿಸಿ) ಪೈಲಟ್‌ಗೆ ಎತ್ತರ, ವೇಗ ಅಥವಾ ಹಾರಾಟದ ಹಾದಿಯ ಕುರಿತು ಎಚ್ಚರಿಕೆಯನ್ನು ನೀಡುತ್ತಿತ್ತು.ವಾಯು ಸಾರಿಗೆ ನಿಯಂತ್ರಕಗಳಲ್ಲಿ ಬಳಸಲ್ಪಡುವ 60 ನಾಟಿಕಲ್ ಮೈಲು ದೂರದ ವರೆಗಿನ ವ್ಯಾಪ್ತಿಯ ಸಾಮರ್ಥ್ಯವುಳ್ಳ ಅಪ್ರೋಚ್ ರಾಡಾರ್‌ಗಳು ವಿಮಾನವು ಭೂಸ್ಪರ್ಶ ಮಾಡುವ ಕುರಿತು ನಿರ್ದೇಶನವನ್ನು ನೀಡುತ್ತವೆ.
ರಾಡಾರ್‌ಗಳು ವಾಯು ಸಾರಿಗೆಯ ಸುರಕ್ಷತೆಯನ್ನು ಕಾಪಾಡುವುದು ಮಾತ್ರವಲ್ಲದೆ, ನಿಲ್ದಾಣದಲ್ಲಿ ಹೆಚ್ಚು ವಿಮಾನಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಪ್ರೋಚ್ ರಾಡಾರ್‌ಗಳು ಇಲ್ಲದಿರುವ ಹಿನ್ನೆಲೆಯಲ್ಲಿ, ಪೈಲಟ್ ಸಹಜವಾಗಿ ತನಗೆ ತೋಚಿದಂತೆ ಮಾಡಬೇಕಾ ಗುತ್ತದೆ.
ಆತ ಇನ್ಸ್‌ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ಐಎಲ್‌ಎಸ್)ನ ಸೂಚನೆಗಳನ್ನು ಪಾಲಿಸಿಕೊಂಡು, ಅವುಗಳ ನಿರ್ಧಾರಗಳ ಆಧಾರದಲ್ಲಿ ವಿಮಾನವನ್ನು ಭೂಸ್ಪರ್ಶ ಮಾಡಬೇಕಾಗುತ್ತದೆ.ತುಂಬಾ ಕಾರ್ಯ ನಿರತವಾಗಿರುವ ವಿಮಾನ ನಿಲ್ದಾಣದಲ್ಲಿ ಎರಡು ರಾಡಾರ್‌ಗಳಿರುವುದು ಉತ್ತಮ.
ಒಂದು ಅಪ್ರೋಚ್ ರಾಡಾರ್ ಮತ್ತು ಎರಡನೆಯದ್ದು ಸರ್ವೈಲೆನ್ಸ್ ರಾಡಾರ್. ಸರ್ವೈಲೆನ್ಸ್ ರಾಡಾರ್‌ನ ಕಾರ್ಯವ್ಯಾಪ್ತಿಯು 250 ನಾಟಿಕಲ್ ಮೈಲ್ಸ್‌ನ್ನು ನಿಯಂತ್ರಿಸುತ್ತದೆ. ಜಗತ್ತಿನ ಇತರ ರಾಷ್ಟ್ರಗಳು ದೇಶವನ್ನು ಸಂಪೂರ್ಣ ರಾಡಾರ್ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದರೆ, ಭಾರತವು ಇನ್ನೂ ಈ ಬಗ್ಗೆ ಗಂಭೀರವಾಗಿ ಚಿಂತಿಸಿದಂತಿಲ್ಲ.
ಭಾರತದ ರಾಡಾರ್ ಸೌಕರ್ಯ ಮತ್ತು ಬೆಳೆಯುತ್ತಿರುವ ವಾಯು ಸಾರಿಗೆಯ ನಡುವೆ ಸಮಾನವಾದ ಹೊಂದಾಣಿಕೆಯಿಲ್ಲ.ಭಾರತದ ಸಣ್ಣ ವಿಮಾನ ನಿಲ್ದಾಣಗಳಲ್ಲಿ, ಸರ್ವೈಲೆನ್ಸ್ ರಾಡಾರ್ ಅಥವಾ ಅಪ್ರೋಚ್ ರಾಡಾರ್‌ಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಅಳವಡಿಸಲಾಗಿದೆ.
ಮಂಗಳೂರು, ಕೊಚ್ಚಿ ಮತ್ತು ನಾಗ್ಪುರ ವಿಮಾನ ನಿಲ್ದಾಣಗಳು ಸೇರಿದಂತೆ ಭಾರತದ ಬಹುತೇಕ ಸಣ್ಣ ವಿಮಾನ ನಿಲ್ದಾಣ ಗಳಲ್ಲಿ ವಿಮಾನದ ಸುರಕ್ಷಿತ ಭೂ ಸ್ಪರ್ಶಕ್ಕೆ ಅಗತ್ಯವಾಗಿರುವ ಅಪ್ರೋಚ್ ರಾಡಾರ್‌ಗಳನ್ನು ಅಳವಡಿಸಲಾಗಿಲ್ಲ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಥವಾ ಸುರಕ್ಷತೆ ತಜ್ಞರು ಇಂತಹ ನಿಲ್ದಾಣಗಳಲ್ಲಿ ಅಪ್ರೋಚ್ ರಾಡಾರ್ ಕಡ್ಡಾಯವಾಗಿರಬೇಕು ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಮಂಗಳೂರಿನ ದುರುಂತದಿಂದಾಗಿ ಇಂತಹ ರಾಡಾರ್‌ನ ಅವಶ್ಯಕತೆಯಿದೆ ಎಂಬುದನ್ನು ಸಾಬೀತು ಪಡಿಸಿದೆ.
‘‘ಅಪ್ರೋಚ್ ರಾಡಾರ್ ಇಲ್ಲದೆ ವಿಮಾನವನ್ನು ಭೂ ಸ್ಪರ್ಶ ಮಾಡುವುದು ಸುರಕ್ಷಿತವಲ್ಲ ಎಂದು ಹೇಳಲಾಗು ವುದಿಲ್ಲ, ಆದರೆ ಹಾದಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಪೈಲಟ್‌ಗೆ ಇನ್ನಷ್ಟು ಸ್ಪಷ್ಟ ಪಡಿಸಲು ಇದು ಸಹಕಾರಿಯಾಗುತ್ತದೆ’’ ಎಂದು ವಾಯು ಸಾರಿಗೆ ನಿಯಂತ್ರಕರ ಒಕ್ಕೂಟದ ಮಾಜಿ ಪದಾಧಿಕಾರಿ ವಿ. ಕನಷ್ಣನ್ ಹೇಳುತ್ತಾರೆ.
ಮಧುರೈ, ತಿರ್ಚಿ, ಕೊಯಂಬತ್ತೂರು ವಿಮಾನ ನಿಲ್ದಾಣಗಳಲ್ಲಿ ರಾಡಾರ್‌ಗಳೇ ಇಲ್ಲ. ಮಂಗಳೂರು, ನಾಗ್ಪುರ, ವಾರಣಾಸಿ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಸರ್ವೈಲೆನ್ಸ್ ರಾಡಾರ್‌ಗಳನ್ನು ಅಳವಡಿಸಲಾಗಿದೆ. ಇದು ಮೇಲೆ ಹಾರಾಡುವ ವಿಮಾನಗಳಿಗೆ ನಿರ್ದೇಶನ ನೀಡುತ್ತದೆ.
ಆದರೆ ಭೂ ಸ್ಪರ್ಶ ಮಾಡಲು ಬರುವ ಪೈಲಟ್‌ಗಳಿಗೆ ಮಾಹಿತಿ ನೀಡುವ ಅಪ್ರೋಚ್ ರಾಡಾರ್‌ಗಳು ಈ ವಿಮಾನ ನಿಲ್ದಾಣಗಳಲ್ಲಿ ಇಲ್ಲ.
Subscribe to:
Post Comments (Atom)
No comments:
Post a Comment