ಹೊಸದಿಲ್ಲಿ, ಮೇ 23: ಮಂಗಳೂರು ವಿಮಾನ ಅಪಘಾತವು, ಭಾರತೀಯ ವಾಯು ಯಾನಿಗಳಿಗೆ ಅಪಾಯಕಾರಿ ಪ್ರದೇಶವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯನ್ನೊದಗಿಸಿದೆ. ಪೈಲಟ್‌ನ ಪ್ರಮಾದದಿಂದಾಗಿ ಅಪಘಾತ ಸಂಭವಿಸಿರಬಹುದು ಎಂಬುದು ಪ್ರಥಮ ವರದಿಯಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪೈಲಟ್‌ಗಳ ವರ್ತನೆ ಕುರಿತು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಯುತ್ತಿವೆ. ಈ ಹಿಂದೆ ಅಪಘಾತ ಸಂಭವಿಸಬಹುದಾಗಿದ್ದ, ಆದರೆ ಅದೃಷ್ಟಕರವಾಗಿ ಪಾರಾದ ಹಲವು ಘಟನೆಗಳ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ.
ಪರಸ್ಪರ ಒಂದಕ್ಕೆ ಒಂದು ಹತ್ತಿರವಾಗಿ ಅಪಾಯಕರ ಸ್ಥಿತಿಯಲ್ಲಿ ಅಪಘಾತ ಸಂಭವಿಸಬಹುದಾಗಿದ್ದ ಸುಮಾರು 15 ಘಟನೆಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಕಳೆದ ತಿಂಗಳು ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿತ್ತು. ಕೆಲವು ಪೈಲಟ್‌ಗಳು ಮದ್ಯಪಾನಿಗಳಾಗಿ ವಿಮಾನ ಚಲಾಯಿಸಿದ ಪ್ರಕರಣಗಳೂ ವರದಿಯಾಗಿದ್ದವು.
ಕಳೆದ ವರ್ಷ ಸ್ವಲ್ಪದರಲ್ಲೇ ಅಪಘಾತ ತಪ್ಪಿದ ಪ್ರಕರಣಗಳ ಕುರಿತು ಅಭಿಶೇಕ್ ಶುಕ್ಲಾ ಎಂಬವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯನ್ನು ನೀಡಲಾಗಿದೆ. ಆದರೆ ಘಟನೆ ನಡೆದ ದಿನಾಂಕಗಳ ಕುರಿತು ಸರಿಯಾದ ವಿವರಗಳಿಲ್ಲ.
ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಏರ್ ಲೈನ್ಸ್‌ಗಳು ತಮ್ಮ ಪೈಟಲ್‌ಗಳ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮಗಳ ಕುರಿತೂ ವಿವರಗಳನ್ನು ನೀಡಲಾಗಿಲ್ಲ.
ಹಲವು ಕಾರಣಗಳಿಂದ ಅಪಘಾತಗಳು ಸ್ವಲ್ಪದರಲ್ಲೇ ತಪ್ಪಿದ್ದವು.
ವಾಯು ಸಾರಿಗೆ ನಿಯಂತ್ರಕರು ಮತ್ತು ಪೈಲಟ್‌ಗಳ ನಡುವಿನ ಸಮನ್ವಯತೆಯ ಕೊರತೆ, ಇಬ್ಬರಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಒತ್ತಡದ ಅಥವಾ ಖಿನ್ನತೆಗಳಿದ್ದ ಹೊರತಾಗಿಯೂ ಕರ್ತವ್ಯ ನಿಭಾಯಿಸುತ್ತಿದ್ದ ವೇಳೆ ಇಂತಹ ಅಪಘಾತಗಳು ನಡೆಯುವ ಸಾಧ್ಯತೆಗಳಿದ್ದವು.
ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ವಿಮಾನಗಳ ಹಾರಾಟ ಮತ್ತು ವ್ಯವಹಾರವೂ ಅಪಘಾತಕ್ಕೆ ಕಾರಣವಾಗಬಹುದು. ದಿಲ್ಲಿಯಲ್ಲಿರುವ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ 700ಕ್ಕೂ ಅಧಿಕ ವಿಮಾನಗಳು ಕಾರ್ಯ ನಿರ್ವಹಿಸುತ್ತವೆ. ಸುಮಾರು 62,000ಕ್ಕೂ ಅಧಿಕ ಮಂದಿ ಪ್ರತಿನಿತ್ಯ ಈ ಸೇವೆಯ ಅನುಕೂಲ ಪಡೆಯುತ್ತಿದ್ದಾರೆ. ಆದರೆ 2002-03ರ ವೇಳೆ ಈ ವಿಮಾನ ನಿಲ್ದಾಣದಲ್ಲಿ ದಿನಕ್ಕೆ ಕೇವಲ 77 ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.
ಮುಂಬೈಯಲ್ಲಿ ಸುಮಾರು 600 ವಿಮಾನಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತವೆ. 2002-03ರ ವೇಳೆ ಅಲ್ಲಿ ಕೇವಲ 96 ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.
ಇತ್ತೀಚೆಗೆ ಮುಂಬೈ ನಿಲ್ದಾಣದಲ್ಲಿ ದೊಡ್ಡ ಅಪಘಾತ ನಡೆಯುವುದೊಂದು ತಪ್ಪಿತ್ತು.
ಗೋಏರ್ ವಿಮಾನಕ್ಕೆ ಕೆಳಗಿಳಿಯಲು ಅನುಮತಿ ನೀಡಿರುವುದು ಸ್ಪಷ್ಟವಾಗುವ ಮೊದಲೇ, ಕಿಂಗ್ ಫಿಶರ್ ವಿಮಾನಕ್ಕೆ ಹಾರಾಟ ಮಾಡಲು ಅನುಮತಿ ನೀಡಿದುದರಿಂದಾಗಿ ದುರಂತವೊಂದು ನಡೆಯುವುದರಲ್ಲಿತ್ತು.
ವಿವಿಐಪಿಗಳ ವಿಮಾನಗಳೂ ದುರಂತದಿಂದ ಪಾರಾಗಿವೆ. ಕಳೆದ ವರ್ಷ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್‌ರ ವಾಯು ಸೇನಾ ದಳದ ಹೆಲಿಕಾಪ್ಟರ್‌ನ್ನು ದಿಲ್ಲಿಗೆ ತೆರಳುವ ವಿಮಾನ ವೊಂದು ಹಾರಾಟ ನಡೆಸಲು ಸಿದ್ಧಗೊಂಡಿದ್ದ ರನ್‌ವೇಯಲ್ಲೇ ಇಳಿಸಿದ್ದುದು ಭೀಕರ ಅಪಘಾತಕ್ಕೆ ಕಾರಣವಾಗುತ್ತಿತ್ತು.ಆದರೆ ಸ್ವಲ್ಪದರಲ್ಲಿ ಅಪಘಾತ ತಪ್ಪಿ ಹೋಗಿತ್ತು.
ಪೈಲಟ್‌ಗಳು ಪಾನಮತ್ತರಾಗಿ ವಿಮಾನ ಚಲಾಯಿಸುವುದೂ ವಿಮಾನ ಅಪಘಾತಕ್ಕೆ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯೂ ಈ ಬಗ್ಗೆ ಆತಂಕ ವ್ಯಕ್ತಪಡುತ್ತದೆ. ವಿಮಾನಗಳಲ್ಲಿ ಹಾರಾಟ ನಡೆಸುವಾಗ ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿಗೆ ಆಲ್ಕೋಹಾಲ್ ಸಂಪೂರ್ಣ ನಿಷೇಧಿಸುವ ಕುರಿತು ಸಂಸ್ಥೆಯು ಎಚ್ಚರಿಕೆ ನೀಡುತ್ತದೆ.
Subscribe to:
Post Comments (Atom)
No comments:
Post a Comment