VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 17, 2010

ಕ್ರಿಕೆಟ್ ಜನಕರಿಗೊಲಿದ ಮಿನಿ ವಿಶ್ವಕಪ್

ಕೀಸ್ವೆಟರ್ 63 * ಪೀಟರ್ಸನ್ 47 ರನ್ * ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಸುಲಭ ಜಯ



ಬಾರ್ಬಡಾಸ್, ಮೇ 16: ಕಳೆದ ಮೂರುವರೆ ದಶಕಗಳಿಂದ ಐಸಿಸಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಇಂಗ್ಲೆಂಡ್‌ಗೆ ಕೊನೆಗೂ ಆ ಅಫೂರ್ವ ಕನಸು ಸಾಕಾರಗೊಂಡಿತು. ಇಂದು ರಾತ್ರಿ ನಡೆದ ಐಸಿಸಿ 3ನೆ ಆವೃತ್ತಿಯ ಟ್ವಂಟಿ 20ವಿಶ್ವಕಪ್ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 7ವಿಕೆಟ್‌ಗಳಿಂದ ಬಗ್ಗು ಬಡಿಯುವುದರೊಂದಿಗೆ ಕ್ರಿಕೆಟ್ ಜನಕರಿಗೆ ಮೊದಲ ಬಾರಿಗೆ ಮಿನಿ ವಿಶ್ವಕಪ್ ಒಲಿಯಿತು.

ಬಾರ್ಬಡಾಸ್‌ನಲ್ಲಿ ರವಿವಾರ ರಾತ್ರಿ ನಡೆದ 3ನೆ ಆವೃತ್ತಿಯ ಐಸಿಸಿ ಟ್ವೆಂಟಿ 20 ವಿಶ್ವಕಪ್ ಪಂದ್ಯದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ನೀಡಿದ 148 ರನ್‌ಗಳ ಸವಾಲನ್ನು ಬೆಂಬತ್ತಿದ ಇಂಗ್ಲೆಂಡ್ ಕ್ರೇಗ್ ಕೀಸ್ವೆಟರ್ 63(49 ಎಸೆತ ,7 ಬೌಂಡರಿ, 2 ಸಿಕ್ಸರ್) ಮತ್ತು ಕೆವಿನ್ ಪೀಟರ್ಸನ್ 47(31 ಎಸೆತ, 4 ಬೌಂಡರಿ, 1 ಸಿಕ್ಸರ್) ರನ್‌ಗಳ ನೆರವಿನಿಂದ ನಿಗದಿತ 17 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಮಾಡಿ ಚಾಂಪಿಯನ್‌ಪಟ್ಟಕ್ಕೇರಿತು. ಕಾಲಿಂಗ್‌ವುಡ್ ಅಜೇಯ 12 ಹಾಗೂ ಇಯಾನ್ ಮಾರ್ಗನ್ ಅಜೇಯ 12 ರನ್ ಮಾಡಿದರು.

ಇದಕ್ಕೆ ಮೊದಲು ಆಸ್ಟ್ರೇಲಿಯ ತಂಡದ ಡೇವಿಡ್ ಹಸ್ಸಿ ಗಳಿಸಿದ 59 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಮಾಡಿತ್ತು.ಟಾಸ್ ಗೆದ್ದ ಇಂಗ್ಲೆಂಡ್ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಇಂಗ್ಲೆಂಡ್‌ನ ಬೌಲರ್ ರಿಯಾನ್ ಸೈಡ್ ಬಾಟಮ್ ಆರಂಭದಲ್ಲೆ ಆಸ್ಟ್ರೇಲಿಯಕ್ಕೆ ಆಘಾತ ನೀಡಿದರು. 8 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಕ್ಕೆ ನಾಯಕ ಮೈಕಲ್ ಕ್ಲರ್ಕ್ ಆಸರೆಯಾದರು.



ಅವರು 27 ಎಸೆತಗಳನ್ನು ಎದುರಿಸಿ 2 ಬೌಂಡರಿ ಇರುವ 27 ರನ್ ಕೂಡಿಸಿದ ಪರಿಣಾಮವಾಗಿ 9.2 ಓವರ್‌ಗಳಲ್ಲಿ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 45ರನ್‌ಗೆ ತಲುಪಿತ್ತು.ಆರಂಭಕಾರರಾದ ಶೇನ್ ವಾಟ್ಸನ್ (2), ಡೇವಿಡ್ ವಾರ್ನರ್(2), ಬ್ರಾಡ್ ಹೇಡನ್ (1) ರನ್ ಗಳಿಸಿ ಇಂಗ್ಲಂಡ್‌ನ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಕ್ಯಾಮರೂನ್ ವೈಟ್ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಇರುವ 30 ರನ್ ಗಳಿಸಿದ್ದಾಗ ಲ್ಯೂಕ್ ರೈಟ್ ಬೌಲಿಂಗ್‌ನಲ್ಲಿ ಎಸೆತವೊಂದನ್ನು ಭರ್ಜರಿ ಎತ್ತಲು ಹೋದಾಗ ಚೆಂಡು ಸ್ಟುವರ್ಟ್ ಬ್ರಾಡ್ ಕೈ ಸೇರುವುದರೊಂದಿಗೆ ಕ್ಯಾಮರೂನ್ ವೈಟ್ ಔಟ್.

ಬಳಿಕ ಡೇವಿಡ್ ಹಸ್ಸಿ 54 ಎಸೆತಗಳನ್ನು 2 ಸಿಕ್ಸರ್ ಹಾಗೂ 2 ಬೌಂಡರಿ ಇರುವ 59 ರನ್ ಮಾಡಿ ರನೌಟ್‌ಗೆ ಬಲಿಯಾದರು. ಅಂತಿಮವಾಗಿ ಮೈಕಲ್ ಹಸ್ಸಿ ಅಜೇಯ 17 ಮತ್ತು ಸ್ಟೀವನ್ ಸ್ಮಿತ್ ಅಜೇಯ 1 ರನ್ ಮಾಡಿ ಪೆವಿಲಿಯನ್‌ಗೆ ಹಿಂದಿರುಗಿದರು.ಇಂಗ್ಲೆಂಡ್ ಪರ ರಿಯಾನ್ ಸೈಡ್ ಬಾಟಮ್ 26ಕ್ಕೆ 2 ಗ್ರೇಮ್ ಸ್ವಾನ್ 17ಕ್ಕೆ 1 ಹಾಗೂ ಲ್ಯೂಕ್ ರೈಟ್ 5ಕ್ಕೆ 1 ವಿಕೆಟ್ ಪಡೆದರು.

No comments: