VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 21, 2010

ಅಸ್ಪಷ್ಟ ಉತ್ತರಗಳ ಸುದ್ದಿಗೋಷ್ಠಿ


ಮಂಗಳೂರು: ಗ್ರಾಮ ಪಂಚಾ ಯತ್‌ ಚುನಾವಣೆಯ ಫಲಿತಾಂಶ ಬಳಿಕ ನಿನ್ನೆ ಡಿಸಿಸಿ ಅಧ್ಯಕ್ಷ ರಮಾನಾಥ ರೈ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ಗಳೇ ದೊರೆತವು.

ರಾಜ್ಯದಲ್ಲಿ ಧರ್ಮಸಿಂಗ್‌ ನೇತೃತ್ವದ ಸರಕಾರ ಇದ್ದಾಗ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗಳಿಸಿ ದ್ದಕ್ಕಿಂತಲೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್‌ ಈ ಬಾರಿಯ ಚುನಾವಣೆ ಯಲ್ಲಿ ದ.ಕ. ಜಿಲ್ಲೆಯಲ್ಲಿ ಗಳಿಸಿದೆ. ರಾಜ್ಯ ಸರಕಾರದ ವಿರುದ್ಧ ಜನ ಭ್ರಮನಿರಸನಗೊಂಡಿರುವುದೇ ಇದಕ್ಕೆ ಕಾರಣ ಎಂದು ರೈ ಬೀಗಿದರು.

ಈ ಸಂದರ್ಭದಲ್ಲಿ ಪತ್ರಕರ್ತರು ಎಷ್ಟು ಗ್ರಾಮಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎಂದು ಪ್ರಶ್ನಿಸಿ ದಾಗ ಉತ್ತರಕ್ಕಾಗಿ ತಡಕಾಡಿದ ರೈ, ತಾಲೂಕುವಾರು ಲೆಕ್ಕಾಚಾರ ನೀಡಿ ಕೈತೊಳೆದುಕೊಂಡರು. ಕೆಲವು ಗ್ರಾಮಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಾದರೆ ಎಸ್‌ಡಿಪಿಐ ನಿರ್ಣಾ ಯಕವಾಗಿದ್ದು ಅದರ ಜೊತೆ ಮೈತ್ರಿ ಮಾಡುತ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಲು ತಡವರಿಸಿದ ರೈ ಅಂತಹ ಪರಿಸ್ಥಿತಿ ಎಲ್ಲೂ ಇಲ್ಲ ಎಂದು ನುಣುಚಿ ಕೊಳ್ಳಲು ಯತ್ನಿಸಿದರು.

ಆದರೆ ಪಟ್ಟು ಬಿಡದ ಪತ್ರಕರ್ತರು ಪುರಾವೆ ನೀಡಿದಾಗ ಇದರ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಕೈಗೊಳ್ಳು ತ್ತಾರೆ ಎನ್ನುವ ಬದಲು ಮತದಾರರು ತೀರ್ಮಾನ ಕೈಗೊಳ್ಳುತ್ತಾರೆಂದು ಅಸ್ಪಷ್ಟ ಉತ್ತರ ನೀಡಿದರು. ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್‌ ಮಾಡಿದ ಸಾಧನೆ ಲೋಕ ಸಭಾ ಚುನಾವಣೆಯಲ್ಲಿ ಏಕಾಗಿಲ್ಲ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ ಮತ್ತೆ ತಡಕಾಡಿದ ರೈ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪ್ರಶ್ನೆಗೆ ಸಂಬಂಧವೇ ಇಲ್ಲದಂತೆ ಉತ್ತರಿಸಿದರು.ಪತ್ರಕರ್ತರು ಮತ್ತೆ ಮತ್ತೆ ಪ್ರಶ್ನೆಗಳ ಸುರಿಮಳೆಗೈದಾಗ ಉತ್ತರ ನೀಡಲು ಯು.ಟಿ. ಖಾದರ್‌ ಮುಂದಾದರೂ ಅವರನ್ನು ತಡೆದ ರೈ, ಪತ್ರಿಕಾಗೋಷ್ಠಿಯಲ್ಲಿ ಚರ್ಚೆ ಬೇಡ ಎಂದು ಸಮಜಾಯಿಷಿ ನೀಡಿ ಕೈತೊಳೆದುಕೊಂಡಾಗ ಪತ್ರಕರ್ತರೇ ಅವರ ಸ್ಥಿತಿ ಕಂಡು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದರು.

ಬರುವಾಗಲೇ ಅರ್ಧ ಗಂಟೆ ತಡ

ನಿನ್ನೆಯ ಸುದ್ದಿಗೋಷ್ಠಿಯನ್ನು 3.30ಕ್ಕೆ ಕರೆಯಲಾಗಿತ್ತು. ಆದರೆ ರಮಾನಾಥ ರೈಯವರ ಪತ್ತೆಯೇ ಇರಲಿಲ್ಲ. ಇದರಿಂದ ಬೇಸತ್ತ ಪತ್ರಕರ್ತರು ಗೋಷ್ಠಿಯನ್ನು ಬಹಿಷ್ಕರಿಸಲು ಮುಂದಾದಾಗ ಅದುವರೆಗೂ ಹರಟೆ ಹೊಡೆಯುತ್ತಾ ಟೈಂಪಾಸ್‌ ಮಾಡುತ್ತಿದ್ದ ನಾಯಕರು ಕೊಂಚ ವಿಚಲಿತರಾಗಿ ಪತ್ರಕರ್ತರನ್ನು ಸಮಾಧಾನಪಡಿಸಿದರು.ಬಳಿಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿ ಆರಂಭಿಸಿ ತನ್ನ ಕ್ಷೇತ್ರದಲ್ಲಿನ ಸಾಧನೆ ಬಗ್ಗೆ ವಿವರಿಸಿದರು.

ಅವರ ನಂತರ ಅಭಯಚಂದ್ರ ಜೈನ್‌ ತಮ್ಮ ಕ್ಷೇತ್ರದ ಸಾಧನೆ ಬಗ್ಗೆ ರಮಾನಾಥ ರೈ ಬರುವವರೆಗೂ ವಿವರಿಸಿದರು. ಅಂತೂ 3.30ಕ್ಕೆ ಬರಬೇಕಿದ್ದ ರಮಾನಾಥ ರೈ ನಾಲ್ಕು ಗಂಟೆಗೆ ಆಗಮಿಸಿ ಟ್ರಾಫಿಕ್‌ ಜಾಮ್‌ ಇದ್ದ ಕಾರಣ ತಡವಾಯಿತೆಂದು ಕ್ಷಮೆಯಾಚಿಸಿದರು.

ಕಾರ್ಯಕರ್ತರ ಸಭೆಯಂತಾದ ಸುದ್ದಿಗೋಷ್ಠಿ

ಕಾಂಗ್ರೆಸ್‌ ಪಕ್ಷದ ಅಶಿಸ್ತು ನಿನ್ನೆಯೂ ಮುಂದುವರಿಯಿತು. ನಿನ್ನೆಯ ಸುದ್ದಿಗೋಷ್ಠಿಯಲ್ಲಿ 20ಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ಪತ್ರಕರ್ತರ ಪ್ರಶ್ನೆಗೆ ಕಾರ್ಯಕರ್ತರು ಉತ್ತರಿಸುವುದು, ಜಿಲ್ಲಾಧ್ಯಕ್ಷರು ಉತ್ತರಿಸಿದಾಗ ಕಾರ್ಯಕರ್ತರು ಚಪ್ಪಾಳೆ ತಟ್ಟುವುದು, ಜೋರಾಗಿ ಮಾತನಾಡುತ್ತಿದ್ದುದರಿಂದ ಪತ್ರಕರ್ತರು ಬಹಳಷ್ಟು ಕಿರಿಕಿರಿ ಅನುಭವಿಸುವಂತಾಯಿತು. ಸುದ್ದಿಗೋಷ್ಠಿಯಲ್ಲಿ ಫಾರೂಕ್‌ ಉಳ್ಳಾಲ್‌, ಟಿ.ಕೆ. ಸುಧೀರ್‌, ಅರುಣ್‌ ಕುವೆಲ್ಲೋ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.

No comments: