ಬೆಂಗಳೂರು, ಮೇ.30: ಇತ್ತೀಚೆಗೆ ಕೋಣನಕುಂಟೆ ಬಳಿ ಒಂಟಿ ಮಹಿಳೆ ಕೊಲೆಯಾದ ಬೆನ್ನಲ್ಲೇ ನಗರದಲ್ಲಿ ಮತ್ತೆ ಒಂಟಿ ಮಹಿಳೆಯೊಬ್ಬರ ಹತ್ಯೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 70 ವಯಸ್ಸಿನ ವೃದ್ಧೆ ಜಯಲಕ್ಷ್ಮೀ ಎಂಬುವವರ ಕೊರಳ ಕುಯ್ದು ಹತ್ಯೆ ಮಾಡಿ, ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ.
ಘಟನೆ ವಿವರ: ಜಯಲಕ್ಷ್ಮಿ ಅವರ ಟೆಕ್ಕಿ ಮಗ ಮತ್ತು ಸೊಸೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮಗ ಮತ್ತು ಸೊಸೆ ಬೆಳಗ್ಗೆ 11ಕ್ಕೆ ಕನಕಪುರ ರಸ್ತೆಯಲ್ಲಿ ಇರುವ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ಗೆ ಹೋಗಿದ್ದರು. ಮನೆಯಲ್ಲಿ ಜಯಲಕ್ಷ್ಮೀ ಒಬ್ಬರೇ ಇದ್ದರು. ಮಗ ಮತ್ತು ಸೊಸೆ ರಾತ್ರಿ ಮನೆಗೆ ಬಂದಾಗ ಇಬ್ಬರು ಮನೆಯೊಳಗಿಂದ ಹೊರಕ್ಕೆ ಓಡಿ ಹೋಗುತ್ತಿದ್ದನ್ನು ಕಂಡು ಸಹಾಯಕ್ಕೆ ನೆರೆಮನೆ ಅವರನ್ನು ಕೂಗಿದ್ದಾರೆ.
ದುಷ್ಕರ್ಮಿಗಳಲ್ಲಿ ಒಬ್ಬ ಓಡಿ ಹೋಗುವಾಗ ಸಿಕ್ಕಿ ಬಿದ್ದಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಚೋಟು ಎಂದು ಗುರುತಿಸಲಾಗಿದೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿರುವವರ ಕೃತ್ಯ ಇದು ಎಂದು ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
May 30, 2010
Subscribe to:
Post Comments (Atom)
No comments:
Post a Comment