VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ವಿಧಾನಪರಿಷತ್ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮೇ 23: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ದ್ವೆೃ ವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಸೋಮವಾರ(ಮೇ 24)ದಿಂದ ಆರಂಭಗೊಳ್ಳಲಿದೆ.

ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಏಳು ಮಂದಿ ಸದಸ್ಯರು (ಬಿ.ಆರ್.ಗುರುದೇವ್ ಕಳೆದ ಜನವರಿ 21 ರಂದು ರಾಜೀನಾಮೆ ನೀಡಿರುವುದರಿಂದ ಮತ್ತು ಕೈಲಾಸ್ ಕಳೆದ ಡಿಸೆಂಬರ್ 29 ರಂದು ನಿಧನ ರಾಗಿರುವ ಪ್ರಯುಕ್ತ ತೆರವಾದ ಸ್ಥಾನವು ಸೇರಿ ದಂತೆ) ಜೂನ್ 14ರಂದು ನಿವತ್ತರಾಗಲಿದ್ದು, ಅವರ ಸ್ಥಾನಗಳನ್ನು ತುಂಬಲು ವಿಧಾನಪರಿಷತ್‌ಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಮುಂದಾಗಿದೆ.

ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕಾಂಗ್ರೆಸ್‌ನ ಆರ್.ವಿ.ವೆಂಕಟೇಶ್, ಬಿಜೆಪಿಯಿಂದ ಮುಖ್ಯಮಂತ್ರಿ ಚಂದ್ರು, ಜಿ.ಎಂ.ಮಧು ಮಾದೇಗೌಡ, ಜೆಡಿಎಸ್‌ನ ಎಂ.ಶ್ರೀನಿವಾಸ್ ಜೂನ್ 14ರಂದು ನಿವತ್ತರಾಗಲಿದ್ದಾರೆ. ನಿವತ್ತಿಯಿಂದ ತೆರವಾಗುವ ಐದು ಸ್ಥಾನ ಹಾಗೂ ಬಿ.ಆರ್.ಗುರುದೇವ್ ಅವರ ರಾಜೀನಾಮೆ ಮತ್ತು ಕೈಲಾಸ್ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

ಚುನಾವಣಾ ಅಧಿಸೂಚನೆಯು ಮೇ 24ರಂದು ಹೊರಬೀಳಲಿದ್ದು, ಮೇ 31 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಜೂನ್ 1ರಂದು ನಡೆಯಲಿದ್ದು, ಜೂನ್ 3 ಉಮೇದುವಾರಿಕೆಯನ್ನು ಹಿಂತೆಗೆದು ಕೊಳ್ಳಲು ಅಂತಿಮ ದಿನವಾಗಿದೆ. ಮತದಾನವು ಜೂನ್ 10 ಬೆಳಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ವಿಧಾನ ಸಭೆಯ ಕಾರ್ಯದರ್ಶಿ ಎಸ್.ಬಿ. ಪಾಟೀಲ್ ಚುನಾವಣಾಧಿಕಾರಿಯಾಗಿ ಹಾಗೂ ಜಂಟಿ ಕಾರ್ಯದರ್ಶಿ ಪಿ.ಓಂಪ್ರಕಾಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಮೇ 24ರಿಂದ 31 ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸ ಬಹುದಾಗಿದೆ. ಮೇ 30ರಂದು ರವಿವಾರ ಸಾರ್ವ ತ್ರಿಕ ರಜಾ ದಿನವಾಗಿರುವುದರಿಂದ ಅಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2(ಡಿ) ಯಲ್ಲಿ ಸಲ್ಲಿಸಬೇಕು. ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಠ 10 ಮಂದಿ ಹಾಲಿ ವಿಧಾನ ಸಭಾ ಸದಸ್ಯರು ಸಹಿ ಮಾಡಿರಬೇಕು. ಈ ಸಂಬಂಧದಲ್ಲಿ 1951ನೆ ಇಸವಿಯ ಪ್ರಜಾಪ್ರಾತಿನಿಧ್ಯ ಅಧಿನಿಯಮದ 31(1) (ಬಿ)ಯೊಂದಿಗೆ ಓದಲಾದ ಪ್ರಕರಣ 39(2) ಕ್ಕೆ ಅಭ್ಯರ್ಥಿಗಳ ಗಮನವನ್ನು ಸೆಳೆಯಲಾಗಿದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ 5 ಸಾವಿರ ರೂ.ಗಳನ್ನು ಹಾಗೂ ಇತರರು 10 ಸಾವಿರ ರೂ.ಗಳನ್ನು ಠೇವಣಿ ಇಡಬೇಕಾಗಿದೆ. ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

No comments: