VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 22, 2010

ಮೃತರ ಪಟ್ಟಿ, ಬದುಕುಳಿದ ಅದೃಷ್ಟಶಾಲಿಗಳ ವಿವರ

ಮಂಗಳೂರು ವಿಮಾನ ನಿಲ್ದಾಣದ ಬಳಿ ಕರಾಳ ಶನಿವಾರವಾದ ಮೇ 22ರಂದು ನಡೆದ
ವೈಮಾನಿಕ ದುರಂತದಲ್ಲಿ ದುರದೃಷ್ಟವಶಾತ್ ಮೃತಪಟ್ಟವರು ಹಾಗೂ ಸಾವನ್ನು ಗೆದ್ದುಬಂದವರ ಸಂಪೂರ್ಣ ಪಟ್ಟಿ ಇಲ್ಲಿದೆ:
* ದುಬೈಯಿಂದ ಮಂಗಳೂರಿಗೆ ಬರಲು ಟಿಕೆಟ್ ಮಾಡಿದ್ದ ಪ್ರಯಾಣಿಕರು: 169 ಮಂದಿ
* ವಿಮಾನವೇರದೆ ಬದುಕುಳಿದ ಅದೃಷ್ಟಶಾಲಿಗಳು: 9 ಮಂದಿ
* ವಿಮಾನದಲ್ಲಿದ್ದ ಸಿಬ್ಬಂದಿಗಳು: 6 ಮಂದಿ
* ವಿಮಾನ ದುರಂತದಲ್ಲಿ ಬದುಕುಳಿದ ಅದೃಷ್ಟವಂತರು: 8 ಮಂದಿ
* ಮೃತಪಟ್ಟವರ ಒಟ್ಟು ಸಂಖ್ಯೆ (ಸಿಬ್ಬಂದಿ 6 ಮತ್ತು ಪ್ರಯಾಣಿಕರು 152): 158
* ಪ್ರಯಾಣಿಕರಲ್ಲಿ ಮೃತಪಟ್ಟ ಹಸುಳೆಗಳು, ಮಕ್ಕಳು: 24
* ಪ್ರಯಾಣಿಕರಲ್ಲಿ ಮೃತಪಟ್ಟ ಪುರುಷರು: 94
* ಪ್ರಯಾಣಿಕರಲ್ಲಿ ಮೃತರಾದ ಸ್ತ್ರೀಯರು: 34

ಟಿಕೆಟ್ ಬುಕ್ ಮಾಡಿದ್ದರೂ ವಿಮಾನವೇರದ ಅದೃಷ್ಟವಂತರು
ಮೆರ್ವಿನ್ ಡಿಸೋಜ
ವಸಂತ ಶೆಟ್ಟಿ
ತ್ರೇಸಿಯಮ್ಮ ಫಿಲಿಪ್
ಮೊಹಮದ್ ಅಶ್ಫಾಕ್
ಹುಸ್ನಾ ಫರ್ಹೀನ್
ಸಂಜೀವ ಬಾಬಣ್ಣ ಹೆಗ್ಡೆ
ಲೂಯಿಸ್ ಕಾರ್ಲೋ ವಿನ್ಸೆಂಡ್ ಗೆರಾರ್ಲೋ
ಸ್ಟೀವನ್ ರೇಗೋ
ಕುಞ್ಞಿಕಣ್ಣನ್ ಚಂದು

ವಿಮಾನದಿಂದ ಹಾರಿ ಪಾರಾದವರು
ಆರೋನ್ ಜೋಯಲ್ ಫರ್ನಾಂಡಿಸ್
ಮೊಯಿನ್ ಕುಟ್ಟಿ ಕೆ.ಪಿ.
ಪ್ರದೀಪ್ ದೀಪನಿವಾಸ್
ಉಮರ್ ಫಾರೂಕ್ ಮಹಮದ್
ಪುತ್ತೂರ್ ಇಸ್ಮಾಯಿಲ್ ಅಬ್ದುಲ್ಲಾ
ಕೃಷ್ಣನ್ ಕುಲಿಕ್ಕುನ್ನು
ಸಬ್ರಿನಾ ನಸ್ರಿನ್ ಹಕ್
ಜೋಯಲ್ ಪ್ರತಾಪ್ ಡಿಸೋಜ

ದುರಂತ ಸಾವಿಗೀಡಾದ ಮಕ್ಕಳು
1. ಹೈಫಾ ಹಶಾ (ಹಸುಗೂಸು)
2. ರಶಾದ್ ಶಫ್‌ಕತ್ ಮಹಮೂದ್ (ಹಸುಗೂಸು)
3. ಅಫಾನ್ ಅಹ್ಮದ್ (ಹಸುಗೂಸು)
4. ವಿಶಾ ಸಂತೋಷ್ ರೈ (ಹಸುಗೂಸು)
5. ವೈಷ್ಣವಿ ನಾರಾಯಣ ರಾವ್
6. ಹೀಬಾ ಅಜೀನಾ
7. ಮುಶೀನಾ
8. ಜೀಶನ್ ಅಬ್ದುಲ್ ರಹಮಾನ್
9. ಸುಹೇಬ್ ಮೊಹಮದ್ ನಸೀರ್
10. ಬೀಬೀ ಸಾರಾ
11. ನಬೀಹಾ ಮೊಹಮದ್ ನಸೀರ್
12. ಅಶಾಜ್ ಅಬ್ದುಲ್ಲಾ
13. ಆಯೇಷಾ ಅಫ್‌ಶೀನ್
14. ವಿಶಾಲ್ ಫ್ಲಾಯ್ಡ್ ಲೋಬೋ
15. ಗೋಡ್ವಿನಾ ಥೋಮಸ್
16. ಗ್ಲೋರಿಯಾ ಥೋಮಸ್
17. ಅಬ್ದುಲ್ ಬಾರ್ ಡಮುಡಿ
18. ರಾಹುಲ್ ಜಯರಾಮ್
19. ಮೊಹಮದ್ ಅಬಾನ್ರುಕ್ನುದ್ದೀನ್
20. ರೀಡಾ ಇಬ್ರಾಹಿಂ
21. ನಲಂದಶಾನ್ ಸಂತೋಷ್ ರೈ
22. ಅಷ್ಟೋನ್ ಸಲ್ದಾನಾ
23. ಜೈನಾಬ್ ಮೊಹಮದ್ ಜಿಯಾದ್
24. ಮೊಹಮದ್ ಜುಬೇರ್ ಜೈದ್


ಸಾವನ್ನಪ್ಪಿದ ಪುರುಷರು, ಮಹಿಳೆಯರು
1. ಹರ್ಷಿಣಿ ಪೂಂಜ
2. ನಿಹಾ ಇಮ್ತಿಯಾಜ್
3. ಭಾಸ್ಕರನ್ ಟಿ.ವಿ.
4. ಕೋಮಲವಲ್ಲಿ ಅಲಿಂಕೀಲ್
5. ನಾರಾಯಣ ಕಾಂತ ವಿ. ರಾವ್
6. ವಾಣಿ ನಾರಾಯಣ ರಾವ್
7. ಮೊಹಮದ್ ಇಶಾಕ್ ರಫೀಕ್ ಅಹ್ಮದ್
8. ಮುಮ್ತಾಜ್ ಹಸನಬ್ಬ ಅಬೂಬಕರ್
9. ಜೋಯನ್ ರಿಚರ್ಡ್ ಸಲ್ದಾನಾ
10. ಶಹೀದಾ ನುಶ್ರತಾರ್
11. ಕಣ್ಣೂರ್ ಜುಲೇಕಾ ಬಾನು
12. ನಜೀಮಾ ಮಹಮದ್ ಅಶ್ರಫ್
13. ಸತ್ಯನಾರಾಯಣ ಬಳ್ಳಕ್ಕುರಾಯ
14. ಸುಜಾತಾ ರಾವ್
15. ಫಾತಿಮಾ ಮೆಹಜಾನ್ ಶಫ್‌ಕತ್
16. ಖಾದರ್ ಅಮ್ಮಂಗೋಡ್ ಮೊಹಮದ್ ಶಫಿ
17. ಮೊಹಮದ್ ಅಶ್ರಫ್
18. ಮೈಮುನಾ ಅಶ್ರಫ್
19. ಪ್ಲೇವಿಯಾ ಶಕುಂತಲಾ ಲೋಬೋ
20. ವೇನಿಸ್‌ಹನಿಕೋಲಾ ಲೋಬೋ
21. ಅಬ್ದುಲ್ಲಾ
22. ರೋಸ್ಲಿ ಶಿಬು
23. ಭಗಲಿ ಪ್ರಭಾಕರ್
24. ಕಮ್ಮಡಂ ಕುಞ್ಞಬ್ದುಲ್ಲಾ
25. ಶಶಿಕಾಂತ ಪೂಂಜ
26. ಮಣಿರೇಖಾ ಪೂಂಜ
27. ಮಹೇಶ್ ಶೆಟ್ಟಿ
28. ಮೊಹಮದ್ ನಾಸಿರ್
29. ಅನ್ವರ್ ಸಾದಿಕ್
30. ಹಸನ್ ಕುಟ್ಟಿ
31. ಅರುಣಕುಮಾರ್ ಶೆಟ್ಟಿ
32. ಅಬ್ದುಲ್ ಸಮದ್
33. ಪ್ರಸಾದಾನಂದ ಮಂಜ್ರೇಕರ್
34. ಮುಲ್ಲಚ್ಚೇರಿ ಬಾಲಕೃಷ್ಣನ್
35. ಶಾಂತಿ ಒಲಿವೆರಾ
36. ಚೇತನಾ ಮುಕೇಶ್ ಕುಮಾರ್
37. ಅಹ್ಮದ್‌ನೌಶಾದ್ ಅಬ್ಬು
38. ರಾಜನ್ ಪುಲಿಕೋಡನ್
39. ಜಯಪ್ರಕಾಶ ದೇವಾಡಿಗ
40. ಜಯರಾಮ ಕೋಟ್ಯಾನ್
41. ಚಿತ್ರಾ ಜಯರಾಮ್
42. ಪ್ರಭಾವತಿ ಕರ್ಕೇರ
43. ಅಶಿತಾ ಬೋಳಾರ
44. ಅಕ್ಷಯ್ ಬೋಳಾರ
45. ಸುರೇಶ್ ಕುಂದರ್
46. ಸೋಮನ್ ನಾರಾಯಣಿ
47. ಪ್ರದೀಪ್ ಜಿ.ಕೆ.
48. ಮೊಹಮದ್ ಅಸ್ಲಾಂ ಕಲಿಂಗಲ್ ಅಬ್ದುಲ್ಲಾ
49. ತಳಂಗರ ಇಬ್ರಾಹಿಂ ಖಲೀಲ್
50. ನಜಿಯಾ ಅಫಾರಿನ್
51. ಮಹಮದ್ ರಫಿ ಬೆಳಿಯಪುರ
52. ಅಬ್ದುಲ್ಲಾ ಮೊಹಮದ್
53. ಇಬ್ರಾಹಿಂ ಸಾಹೇಬ್
54. ಸಮೀನಾ ಸಾಹೇಬ್
55. ಇಸ್ಸಾಂ ಇಬ್ರಾಹಿಂ
56. ಅಬ್ದುಲ್ ಹಕೀಂ ಪೆರುಂಬಳ ಮಹಮದ್
57. ಶಿವಕುಮಾರ್ ನಾಗರಾಜ್
58. ಮೀನು ಗುಪ್ತಾ
59. ಶೆಟ್ಟಿ ಕೆ.ಕೆ.
60. ಗಂಗಾಧರನ್ ನಾಯರ್
61. ಪ್ರಭಾತ್ ಕುಮಾರ್ ಅತ್ತಾವರ
62. ಸತೀಶ ಶೆಟ್ಟಿ
63. ಇರ್ಷಾದ್ ಅಹ್ಮದ್
64. ನೇಹಾ ಪ್ರವೀಣ್
65. ಸಮೀರ್ ಬೀರನ್ ಮೊಯ್ದೀನ್
66. ಅಬ್ದುನ್ನಾಸಿರ್ ಅವಿಂಜಾ
67. ರಿಜು ಜೋನ್
68. ಮಹಮೂದ್ ಅಬ್ದುಲ್ಲಾ ಕನ್ಯಾನ
69. ಅಲ್ತಾಫ್ ಅಹಮದ್ ಮೂಲಾನಾ
70. ಲೋಕೇಶ ಸದಾನಂದ ಬೆಳ್ಚಡ
71. ಹಮೀದ್ ಪೂಕಾಯಂ
72. ವಿಪಿನ್ ಕಟ್ಟೂರ್
73. ಕಿಶೋರ್ ಕುಮಾರ್ ಕುಡ್ಪಪೂಜಾರಿ
74. ಚಂದುಕುಟ್ಟಿ ನಾಯರ್ ಕೆ
75. ಎನ್.ಎಂ.ಭರತಮ್
76. ಅಬ್ದುಲಜೀಜ್ ಅಂಚಿಕಟ್ಟ
77. ಉಮೇಶನ್ ವಿಜಯನ್
78. ಕೆವಿನ್ ಸಿಕ್ವೇರಾ
79. ರೇಷ್ಮಾ ಸಂತೋಷ್ ರೈ
80. ವಾಮನ ಪ್ರಭು
81. ಗಣೇಶ್ ಪ್ರಭು
82. ಖಾಜಿ ಅಬ್ದುಲ್ ಸಲಾಂ
83. ಖಾಜಿ ಜುಲೇಕಾ ಖುದ್ದೂಸ್
84. ಜಾಕ್ಸನ್ ಪಿರೇರಾ
85. ಮೊಹಮದ್ ಇಸ್ಮಾಯಿಲ್
86. ನವೀನ್ ಕುಮಾರ್
87. ಸಂಜಯ್ ಕುಮಾರ್ ಮಹಾಬಲ
88. ಮಹೇಂದ್ರ ಕೋಡ್ಕಣಿ
89. ಇಂದುಮತಿ ನಾಯಕ್
90. ವಿಜೇಶ್ ಕೊವ್ವಲ್
91. ರಾಮಕೃಷ್ಣ ನಾಯಕ್
92. ಅಜೇಶ್ ಮೊಟ್ಟತ್ತಿಲ್
93. ನವೀದ್ ಇಬ್ರಾಹಿಂ
94. ಇಗ್ನೇಷಿಯಸ್ ಡಿಸೋಜ
95. ಸುಕುಮಾರ ಕುಳಿಯಂಕೊಟ್ಟುಚಾಲ್
96. ಅಬ್ದುಲ್ ಬಶೀರ್ ಕೆ.ಎಂ.
97. ಮೊಹಿದ್ದೀನ್ ಫರಸ್ ಉಸ್ಮಾನ್
98. ಮಾಹಿಂ ಮೊಹಮದ್ ಪಳ್ಳಿ
99. ಮೊಹಮದ್ ಅಶ್ರಫ್ ಕೆ.ಎ.
100. ಮೊಹಮದ್ ಉಸ್ಮಾನ್
101. ನವೀನ್ ವಾಲ್ಟರ್ ಫರ್ನಾಂಡಿಸ್
102. ಸರಿತಾ ಫಿಲೋಮಿನಾ ಡಿಸೋಜ
103. ಉಲ್ಲಾಸ ಡಿಸಿಲ್ವಾ
104. ಮನ್ನಪಡುಪು ಅಶ್ರಫ್ ಅಬ್ದುಲ್
105. ಸಫ್ದರ್ ಅಲಿ ಶೇಖ್
106. ಮಹೇಶ್ ಶೆಟ್ಟಿ
107. ಅಬ್ದುಲ್ ಹ್ಯಾರಿಸ್ ಕೊಪ್ಪಲಂ ಹೌಸ್
108. ಅಬ್ದುಲ್ ಜೆಬ್ರಾನ್
109. ಪರಂಬತ್ ಕುಞ್ಞಿಕೃಷ್ಣನ್
110. ಪ್ರಭಾಕರನ್ ಪಚ್ಚಿಕಾರನ್
111. ನೆಕ್ಕರೆ ಇಬ್ರಾಹಿಂ ಇಸ್ಮಾಯಿಲ್
112. ಮೆಲ್ವಿನ್ ಕಿರಣ್ ಮಿನೇಜಸ್
113. ಸಿದ್ದೀಕ್ ಚೂರಿ ಸುಲೇಮಾನ್
114. ಸೋಮಶೇಖರ್ ಪೋತ್ಯಾಲ್ ಶ್ರೀನಿವಾಸ
115. ಲೋಕೇಶ ನಾರಾಯಣನ್
116. ಲೋಲಿಟಾ ಡಯಾಸ್
117. ಲಿಲ್ಲಿ ಡಯಾಸ್
118. ಪ್ರವೀಣ ಸುಂದರ್
119. ಹಿಲ್ಡಾ ಡಿಸೋಜ
120. ಡೆನಿಸ್ ಸಲ್ದಾನಾ
121. ಮಂತೂರ್ ಹಸೈನಾರ್
122. ರಮಾ ಸತೀಶ್
123. ಮೊಹಮದ್ ಬಶೀರ್
124. ಅಬೂಬಕರ್ ಸಿದ್ದಿಕ್
125. ಮೊಹಮದ್ ಉಸ್ಮಾನ್
126. ಶೈಲೇಶ್ ರಾವ್ ಬ್ರಹ್ಮಾವರ
127. ಮೊಹಮದ್ ಜಿಯಾದ್
128. ಸಮೀನಾ ಅಬ್ದುಲ್ ಕರೀಂ



ಕನಸುಗಳು ಭಗ್ನ, ತಾಯಿ ಶವ ಕಾಣದ ಮಗ: ಈ ಸಾವು ನ್ಯಾಯವೇ?
ಮದುವೆಯ ಕನಸು, ತಂದೆ-ತಾಯಿ ನೋಡುವ ತವಕ, ಪತ್ನಿ, ಮಕ್ಕಳನ್ನು ನೋಡುವ ಕಾತುರದಿಂದ ಇದ್ದ ಪ್ರಯಾಣಿಕರು, ಇನ್ನೇನು ವಿಮಾದಿಂದ ಇಳಿದು ಮನೆಯತ್ತ ಹೆಜ್ಜೆ ಹಾಕಬೇಕು ಎಂದು ಕಣ್ಣು ಬಿಡುವಷ್ಟರಲ್ಲಿಯೇ, ವಿಧಿಯ ಕ್ರೂರ ಅಟ್ಟಹಾಸದಿಂದ ವಿಮಾನ ಲ್ಯಾಂಡ್ ಆಗುವ ಮುನ್ನವೇ ಟೈರ್ ಸ್ಫೋಟಿಸಿ ಸುಟ್ಟು ಭಸ್ಮವಾಗಿತ್ತು. ಇದರೊಂದಿಗೆ ಕನಸು ಹೊತ್ತ 158 ಮಂದಿ ಬಲಿಯಾಗಿದ್ದರು.

ಈ ಸಾವು ನ್ಯಾಯವೇ: ಈ ದುರ್ಘಟನೆಯಲ್ಲಿ ಕುಂದಾಪುರ ಸಮೀಪದ ಬ್ರಹ್ಮಾವರದ ಯುವಕನೊಬ್ಬ ಸಾವಿಗೀಡಾಗಿದ್ದು, ಆತನ ವಿವಾಹ ಮುಂಬರುವ ಜೂನ್ 2ಕ್ಕೆ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಅದೇ ರೀತಿ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ನಾವುಂದದ ಒಂದೇ ಕುಟುಂಬದ ಆರು ಮಂದಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ಕು ಪುಟ್ಟ ಹಸುಳೆ ಸೇರಿದಂತೆ 24 ಮಕ್ಕಳು ಸಾವನ್ನಪ್ಪಿವೆ. ಭವಿಷ್ಯದಲ್ಲಿ ಅರಳುವ ಮುನ್ನವೇ ಈ ಮುಗ್ದ ಕಂದಮ್ಮಗಳು ಅಸುನೀಗಿವೆ. ಹೀಗೆ ಹಲವಾರು ಕನಸು ಹೊತ್ತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅರಿವಿಲ್ಲದಂತೆಯೇ ಸಾವು ಸಿಡಿಲಿನಂತೆ ಬಂದೆರಗಿತ್ತು.

ಅಮ್ಮನ ಶವ ನೋಡಲು ಬಂದ ಮಗ ಮತ್ತು ಕುಟುಂಬವೇ ಶವವಾಯಿತು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಒಂದೊಂದೇ ಹೃದಯವಿದ್ರಾವಕ ಘಟನೆ ಹೊರಬೀಳುತ್ತಿದೆ. ಉಡುಪಿಯ ಅಲೀಮಾ ಎಂಬುವರು ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹಾಗಾಗಿ ದುಬೈನಲ್ಲಿದ್ದ ಮಗ ಮೊಹಮ್ಮದ್ ಜಿಯಾದ್, ಶಮೀನಾ ಹಾಗೂ ಇಬ್ಬರು ಮಕ್ಕಳು ಅಲ್ಲಿಂದ ಹೊರಟು ಈ ನತದೃಷ್ಟ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಒಟ್ಟು ಹತ್ತು ಮಂದಿ ಊರಿಗೆ ಬರುವುದಾಗಿ ತಿಳಿಸಿದ್ದರು. ಆದರೆ ಆರು ಮಂದಿಗೆ ಟಿಕೆಟ್ ಸಿಗದಿದ್ದಾಗ, ನಾಲ್ಕು ಮಂದಿ ಊರಿಗೆ ಹೊರಟಿದ್ದರು. ಅಲ್ಲದೇ ನಿನ್ನೆ ರಾತ್ರಿ ಮಾತನಾಡಿ, ತಾನು ಶನಿವಾರ ಬೆಳಿಗ್ಗೆ ಮನೆಗೆ ಬಂದು ಅಮ್ಮನ ಶವ ಸಂಸ್ಕಾರ ನೆರವೇರಿಸುವುದಾಗಿಯೂ ಸಂಬಂಧಿಗಳಲ್ಲಿ ದೂರವಾಣಿ ಮೂಲಕ ಮಾತನಾಡಿದ್ದರು. ಆದರೆ ವಿಪರ್ಯಾಸ ಎಂಬಂತೆ ವಿಮಾನ ದುರಂತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಮ್ಮನ ಶವ ಸಂಸ್ಕಾರಕ್ಕೆ ಬಂದ ಮಗ ಹಾಗೂ ಕುಟುಂಬವೇ ಈಗ ಶವವಾಗಿ ಹೋಗಿದ್ದಾರೆ.

ಮಂಗಳೂರಿನ 3 ಕುಟುಂಬದ 27 ಮಂದಿ ಬಲಿ: ಬಜಪೆ ಸಮೀಪದ ಪೆರ್ಮುದೆ ಗ್ರಾಮದ ಒಂದೇ ಕುಟುಂಬದ 18 ಮಂದಿ ಹಾಗೂ ಎಡಪದವು ಗ್ರಾಮದ ಒಂದೇ ಕುಟುಂಬದ 6 ಮಂದಿ ವಿಮಾನ ದುರಂತದಲ್ಲಿ ಬಲಿಯಾಗಿದ್ದಾರೆ. ಮಂಗಳೂರು ನಗರ ಕೊಟ್ಟಾರ ಕ್ರಾಸ್‌ನ ಪೂಂಜಾ ಟೈಲರ್ಸ್‌ನ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಮಡಿಕೇರಿಯ ಮೂವರ ದುರ್ಮರಣ: ಘಟನೆಯಲ್ಲಿ ಮಡಿಕೇರಿಯ ನಿವಾಸಿಗಳಾದ ಜಯರಾಮ್ ಕೋಟ್ಯಾನ್, ಪತ್ನಿ ಚಿತ್ರಾ ಜಯರಾಮ್ ಹಾಗೂ ಪುತ್ರ ರಾಹುಲ್ ಜಯರಾಮ್ ಸಾವಿಗೀಡಾಗಿದ್ದಾರೆ ಎಂದು ಕುಟಂಬದ ಮೂಲಗಳು ತಿಳಿಸಿವೆ.

ಶವದ ಗುರುತು ಪತ್ತೆ ಹಚ್ಚಲು ಪರದಾಟ: ಟಯರ್ ಸ್ಫೋಟದಿಂದ ವಿಮಾನ ಛಿದ್ರವಾಗಿದ್ದರೆ, ವಿಮಾನಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ 158 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಮೃತದೇಹಗಳನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಆಸ್ಪತ್ರೆಯ ಶವಾಗಾರದ ಮುಂದೆ ಮೃತರ ಸಂಬಂಧಿಗಳ ಗೋಳಾಟ ಮುಗಿಲು ಮುಟ್ಟಿದೆ. ಯಾರ ಮೃತದೇಹ ಎಂಬುದನ್ನು ಗುರುತಿಸಲು ಸಾಧ್ಯವಾಗದೆ ಸಂಬಂಧಿಕರು ಪರದಾಡುತ್ತಿದ್ದಾರೆ. ಆದರೂ 35 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.




ಆಸ್ಪತ್ರೆಯ ಶವಾಗಾರದ ಮುಂದೆ ನೂಗುನುಗ್ಗಲು, ಶವಗಳ ಗುರುತು ಪತ್ತೆ ಹಚ್ಚಲು ಮನೆಯವರ ಪರದಾಟ, ತನ್ನ ಮಗನ ಶವ ಎಲ್ಲಿ, ತನ್ನ ಗಂಡನ ಶವ ಎಲ್ಲಿ...ಹೀಗೆ ಗೋಳಾಡುತ್ತ ಹುಡುಕುತ್ತಿರುವ ದೃಶ್ಯ ಮನಕಲಕುವಂತಿತ್ತು.

ವಿಮಾನವೇರದ ಒಂಬತ್ತು ಮಂದಿ ಅದೃಷ್ಟವಂತರು: ಆಯುಸ್ಸು ಗಟ್ಟಿ ಇದ್ದರೆ ಮನುಷ್ಯ ಬದುಕುಳಿಯುತ್ತಾನೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಒಂಬತ್ತು ಮಂದಿಯೇ ಸಾಕ್ಷಿ. ಮೆರ್ವಿನ್ ಡಿಸೋಜ, ವಸಂತ ಶೆಟ್ಟಿ, ತ್ರೇಸಿಯಮ್ಮ ಫಿಲಿಪ್ , ಮೊಹಮದ್ ಅಶ್ಫಾಕ್ ಹುಸ್ನಾ ಫರ್ಹೀನ್ ,ಸಂಜೀವ ಬಾಬಣ್ಣ ಹೆಗ್ಡೆ, ಲೂಯಿಸ್ ಕಾರ್ಲೋ ವಿನ್ಸೆಂಡ್ ಗೆರಾರ್ಲೋ, ಸ್ಟೀವನ್ ರೇಗೋ ಕುಞ್ಞಿಕಣ್ಣನ್ ಚಂದು ಇವರು ಟಿಕೆಟ್ ಮಾಡಿದ್ದರೂ ಕೂಡ ವಿಮಾನದಲ್ಲಿ ಪ್ರಯಾಣಿಸದೆ ಸಾವಿನ ಕುಣಿಕೆಯಿಂದ ಪಾರಾಗಿದ್ದಾರೆ.

ನಾನು ನಿಜಕ್ಕೂ ಅದೃಷ್ಟವಂತ-ವಸಂತ ಶೆಟ್ಟಿ: ನನಗೆ ಕೆಲಸದ ಒತ್ತಡ ತುಂಬಾ ಇದ್ದಿದ್ದರಿಂದ ನಾನು ಟಿಕೆಟ್ ಗಮನಿಸಲು ಹೋಗಿಲ್ಲವಾಗಿತ್ತು. ನಿಜಕ್ಕೂ ಟಿಕೆಟ್ ನನಗೆ ಶನಿವಾರ ಎಂದೇ ಲೆಕ್ಕಚಾರ ಹಾಕಿದ್ದೆ. ಹಾಗಾಗಿ ನಾನು ಶುಕ್ರವಾರ ಏರ್ ಇಂಡಿಯಾ ವಿಮಾನ ಹತ್ತಿಲ್ಲವಾಗಿತ್ತು. ಅಬ್ಬಾ ದೇವರು ದೊಡ್ಡವನು, ನಾನು ದುರಂತದಿಂದ ಪಾರಾಗಿದ್ದೇನೆ ಎಂದು ದುಬೈ ನಿವಾಸಿ ವಸಂತ ಶೆಟ್ಟಿ ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಆದರೂ ಘಟನೆಯಲ್ಲಿ ಮೃತಪಟ್ಟವರಿಗೆ ಸಾಂತ್ವಾನ ವ್ಯಕ್ತಪಡಿಸಿದ್ದಾರೆ.

1 comment:

MOHD. ARIF said...

DEAR READERS,
THIS IS VERY VERY SHOCKING NEWS. MAKE PRAYER WITH ALMIGHTY GOD FOR THOSE PEOPLE WHO DIED IN THIS PLAIN ACCIDENT. ALMIGHTY GOD ALWAYS KEEP THEM IN HIS LOVING CARE.