VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಮತದಾರ ಬಿಜೆಪಿಗೆ ಪಾಠ ಕಲಿಸಿದ್ದಾನೆ: ರೈ

ಮಂಗಳೂರು, ಮೇ 19: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಶಾಸಕ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರದ ಜನಪರ ವಿರೋಧಿ ಧೋರಣೆಯಿಂದ ಜನರು ಬೇಸತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಜನರನ್ನು ಕತ್ತಲಲ್ಲಿಟ್ಟಿರುವುದರ ಆಕ್ರೋಶವನ್ನು ಮತದಾನದ ಮೂಲಕ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಮೊದಲು ಬಿಜೆಪಿ ನಾಯಕರು ಶೇ.70ರಷ್ಟು ಸ್ಥಾನ ಗಳಿಸುತ್ತೇವೆ ಎಂದಿದ್ದರು. ಆದರೆ, ಚುನಾವಣೆಯ ಲಿತಾಂಶ ಅದನ್ನು ಹುಸಿಗೊಳಿಸಿದೆ ಎಂದು ನುಡಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭ ಕ್ಕಿಂತಲೂ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಲಭಿಸಿದೆ. ಇದನ್ನು ಮುಂದಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಯಲ್ಲೂ ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ರಮಾನಾಥ ರೈ ಹೇಳಿದರು.
‘ಪೂಜಾರಿ ಹೇಳಿಕೆ ಗೊತ್ತಿಲ್ಲ: ತನ್ನ ಸೋಲಿಗೆ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಕಾರಣ ಎಂದು ಜನಾದರ್ನ ಪೂಜಾರಿ ಪರೋಕ್ಷವಾಗಿ ಹೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಲು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ರಮಾನಾಥ ರೈ ನಿರಾಕರಿಸಿದ್ದಾರೆ.
ಬುಧವಾರ ಪತ್ರಕರ್ತರ ಪ್ರಶ್ನೆಗೆ ‘ನನಗೆ ಆ ವಿಷಯ ಗೊತ್ತಿಲ್ಲ’ ಎಂದರು. ‘ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿದೆಯಲ್ಲಾ’ ಎಂದು ಕೇಳಿದಾಗಲೂ ತುಟಿಪಿಟಿಕೆನ್ನದೆ, ವೌನವಹಿಸಿದರು.


ದಿಕ್ಕು ತಪ್ಪಿಸಿದ ಬಿಜೆಪಿ: ಖಾದರ್

ಮಂಗಳೂರು ವಿಧಾನಸಭಾ ಕ್ಷೇತ್ರದ 20 ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ 15 ಕಡೆ ಸ್ಪಷ್ಟ ಬಹುಮತ ಪಡೆದಿದೆ. 3 ಕಡೆ ಸಮಬಲವಿದೆ. ಸೋಮೇಶ್ವರದಲ್ಲಿ ಮಾತ್ರ ಬಿಜೆಪಿ ಬಹುಮತ ಪಡೆದಿದೆ. ಅಲ್ಲಿ ಬಿಜೆಪಿಯವರು ಮತದಾರರನ್ನು ದಿಕ್ಕುತಪ್ಪಿಸಿದ ಕಾರಣ ಹೀಗಾಗಿದೆ. 3ನೆ ಬಾರಿಯೂ ಮತದಾನ ಬಹಿಷ್ಕಾರ ಎಂದು ಹೇಳಿ ಕೊಳ್ಳುತ್ತಿದ್ದ ಬಿಜೆಪಿಗರು ನಾಮಪತ್ರ ಸಲ್ಲಿಕೆಗೆ ಎರಡು ದಿನವಿರುವಾಗ ಬಹಿಷ್ಕಾರ ದಿಂದ ಹಿಂದೆ ಸರಿದದ್ದರಿಂದ ನಮಗೆ ಸ್ವಲ್ಪ ಕಷ್ಟವಾಯಿತು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.


ಹೇಳಿದಂತೆ ನಡೆದಿಲ್ಲ: ಅಭಯಚಂದ್ರ ಜೈನ್
ಬಿಜೆಪಿ ಸರಕಾರ ಹೇಳಿದಂತೆ ನಡೆದಿಲ್ಲ. ಅದರ ಲಾಭವನ್ನು ಕಾಂಗ್ರೆಸ್ ಪಡೆದಿದೆ. ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ 28 ಗ್ರಾ.ಪಂ. 18 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ-ಜೆಡಿಎಸ್, 4 ಬಿಜೆಪಿ ಬಹುಮತಗಳಿಸಿದೆ. 3 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಯ್ದಿನ್ ಬಾವಾ, ಐವನ್ ಡಿಸೋಜಾ, ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುವೆಲ್ಲೊ, ಟಿ.ಕೆ.ಸುದೀರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.


‘ಪಂಚಾಯತ್’ನಲ್ಲಿ ರಾಜಕೀಯ: ಕಾಂಗ್ರೆಸ್ ಶಾಸಕರ ‘ಭಿನ್ನಾ’ಭಿಪ್ರಾಯ
ಮಂಗಳೂರು, ಮೇ 19: ಗ್ರಾ.ಪಂ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನೇರವಾಗಿ ಭಾಗಿಯಾಗುವ ಬಗ್ಗೆ ಮೂವರು ಕಾಂಗ್ರೆಸ್ ಶಾಸಕರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ‘ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಂದುರಾಜಕೀಯ ಪಕ್ಷಗಳು ಹೇಳಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಶಾಸಕ ಅಭಯಚಂದ್ರ ಜೈನ್, ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭಾಗಿಯಾಗುವಿಕೆ ಇದ್ದರೆ ಚೆನ್ನ. ಅದಕ್ಕೆ ನನ್ನ ಬೆಂಬಲವಿದೆ ಎಂದರು.


‘ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು ಗ್ರಾಮ ಪಂಚಾಯತ್‌ಗಳು ರಾಜಕೀಯದಿಂದ ಮುಕ್ತವಾಗಿರಬೇಕು ಎಂದು ಆಶಿಸಿದ್ದರು. ಅಲ್ಲಿ ರಾಜಕೀಯವಿದ್ದರೆ ಅಭಿವೃದ್ಧಿ ಅಸಾಧ್ಯ ಎಂದಿದ್ದರು. ಹಾಗಾಗಿ ನಾನು ಗ್ರಾಮ ಪಂಚಾಯತ್‌ನಲ್ಲಿ ರಾಜಕೀಯ ಪಕ್ಷಗಳ ನೇರ ಪಾಲ್ಗೊಳ್ಳುವಿಕೆಗೆ ವಿರೋಧ ವ್ಯಕ್ತಪಡಿಸುತ್ತೇನೆ’ ಎಂದು ಶಾಸಕ ಖಾದರ್ ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷನಾಗಿ ತಮ್ಮ ಅಭಿಪ್ರಾಯವೇನು ಎಂದು ಶಾಸಕ ರಮಾನಾಥ ರೈ ಯವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಅವರು ನಿರುತ್ತರರಾದರು.

No comments: