VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 22, 2010

ಪ್ರಯಾಣಿಕರನ್ನು ಸತಾಯಿಸಿದ ‘ಕಿಂಗ್‌ಫಿಶರ್’!

ಮಂಗಳೂರು,ಮೇ 21: ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಣಿಯಾಗಿದ್ದ 40 ಪ್ರಯಾಣಿಕರನ್ನು ‘ಕಿಂಗ್‌ಫಿಶರ್’ ವಿಮಾನದ ಅಧಿಕಾರಿಗಳು ಸತಾಯಿಸಿದ ಘಟನೆ ಇಂದು ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಬೆಳಗ್ಗೆ 9 ಗಂಟೆಗೆ ಹೊರಡಬೇಕಾಗಿದ್ದ ವಿಮಾನ ನಿಗದಿತ ಸಮಯ ದಾಟಿದರೂ ಹೊರಡಲಿಲ್ಲ. ಕಾದು ಬಸವಳಿದ ಪ್ರಯಾಣಿಕರು ವಿವರಣೆ ಕೇಳಿದಾಗ ತಾಂತ್ರಿಕ ತೊಂದರೆಯಿಂದ ವಿಮಾನ ಹಾರಾಡುತ್ತಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಸಿಕ್ಕಿತು. ಇದನ್ನು ಆರಂಭದಲ್ಲೇ ತಿಳಿಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಪಟ್ಟು ಹಿಡಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು ಪ್ರಯಾಣಿಕರನ್ನು ಕಿಂಗ್‌ಫಿಶರ್ ವಿಮಾನದಲ್ಲಿ ಹತ್ತಿಸಿ ಬಾಗಿಲು ಜಡಿದಿದ್ದರು. ಆದರೆ ಮಧ್ಯಾಹ್ನವಾದರೂ ವಿಮಾನ ಮಾತ್ರ ಹೊರಡಲಿಲ್ಲ. ಪ್ರಯಾಣಿಕರು ಬಾಗಿಲು ತೆಗೆಯುವಂತೆ ಮನವಿ ಮಾಡಿದರೂ ಅದಕ್ಕೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಪ್ರಯಾಣಿಕರ ಆಕ್ರೋಶ ಹೆಚ್ಚಾದಾಗ ಅನಿವಾರ್ಯವಾಗಿ ಬಾಗಿಲು ತೆರೆಯಬೇಕಾಯಿತು.

ವಿಮಾನದಿಂದಿಳಿದ ಪ್ರಯಾಣಿಕರು ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಪ್ರಯಾಣ ವಿಳಂಬದಿಂದ ಹತಾಶರಾಗಿದ್ದ ಪ್ರಯಾಣಿಕರಿಗೆ ಸಮಾಧಾನದ ಮಾತುಗಳನ್ನು ಆಡಬೇಕಾಗಿದ್ದ ಅಧಿಕಾರಿಗಳು ಪ್ರಯಾಣಿಕರೊಬ್ಬರ ದಾಖಲೆ ಪತ್ರಗಳನ್ನು ಕಿತ್ತುಕೊಂಡರೆನ್ನಲಾಗಿದ್ದು. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು.

ಕೊನೆಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಮಾತುಕತೆ ನಡೆಸಲವಾಯಿತಲ್ಲದೆ, ಸಂಜೆಯ ವೇಳೆಗೆ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.

No comments: