ಕಿರಿಮಂಜೇಶ್ವರ (ಬೈಂದೂರು): ನಿಗದಿಯಂತೆ ಜುಲೈನಲ್ಲಿ ಊರಿಗೆ ಬರಬೇಕಿದ್ದ ಕಿರಿಮಂಜೇಶ್ವರದ ಇಡೀ ಕುಟುಂಬ, ಮಗನನ್ನು ಕಾಲೇಜಿಗೆ ಸೇರಿಸಬೇಕೆಂಬ ಕಾರಣಕ್ಕೆ ಮುಂಚಿತವಾಗಿಯೇ ಹೊರಟು ಬಂದಿದ್ದರಿಂದ ಶನಿವಾರದ ಏರ್ ಇಂಡಿಯ ವಿಮಾನ ದುರಂತಕ್ಕೆ ಬಲಿಯಾಗಿದೆ. ಒಂದೇ ಕುಟುಂಬದ ನಾಲ್ವರು ಮತ್ತು ಸೋದರ ಸಂಬಂಧಿ ಸೇರಿ ಐವರು ಸಾವಿಗೀಡಾಗಿದ್ದಾರೆ.
ಇಲ್ಲಿನ ದಿ. ಹುಸೇನ್ ಸಾಹೇಬ್ ಪುತ್ರ ಕೆ.ಇಬ್ರಾಹಿಂ(45), ಪತ್ನಿ ಸಮೀನಾ (39), ಮಗ ಇಸಾಮ್ (16) ಮತ್ತು ಮಗಳು ರೀದಾ (10) ಮತ್ತು ಸೋದರ ಸಂಬಂಧಿ ನಿಹಾ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯ ವಿಮಾನವೇರಿದವರು ಶನಿವಾರದ ಅವಘಡದಲ್ಲಿ ಅಸುನೀಗಿದ್ದಾರೆ.
20 ವರ್ಷ ಹಿಂದೆ ಬಿ.ಕಾಂ ಪೂರೈಸಿ ದುಬೈಗೆ ತೆರಳಿ ಹಡಗು ಕಂಪೆನಿಯಲ್ಲಿ ಅಕೌಂಟೆಂಟ್ ಆಗಿದ್ದ ಇಬ್ರಾಹಿಂ, ಮಕ್ಕಳನ್ನು ಅಲ್ಲಿಯೇ ಓದಿಸಿದ್ದರು. ಮಗ ಈ ವರ್ಷ 10ನೇ ತರಗತಿ ಪೂರ್ಣಗೊಳಿಸಿದ್ದರಿಂದ ಉಡುಪಿಯಲ್ಲಿ ಕಾಲೇಜಿಗೆ ಸೇರಿಸಲು ಕುಟುಂಬದೊಂದಿಗೆ ಅವರು ಮಂಗಳೂರಿಗೆ ವಿಮಾನವೇರಿದ್ದರು. ಕಿರಿಮಂಜೇಶ್ವರ ಮನೆಯಲ್ಲೆಗ ಶೋಕ ಮಡುಗಟ್ಟಿದೆ. ಸದ್ಯ ಇಬ್ರಾಹಿಂ ಅವರ ತಾಯಿ, ಅಣ್ಣ ದಿನಸಿ ವ್ಯಾಪಾರಿ ಆಶ್ರಫ್, ಅವರ ಪತ್ನಿ, ಮಕ್ಕಳು ಇಲ್ಲಿ ವಾಸವಿದ್ದಾರೆ. ನೆರೆಮನೆಯವರು, ಸಂಬಂಧಿಗಳು ಸೇರಿ ಮನೆಯವರನ್ನು ಸಾಂತ್ವನಗೊಳಿಸುತ್ತಿದ್ದಾರೆ. ಸಮೀನಾ ಬಸ್ರೂರು ನಿವೃತ್ತ ಶಿಕ್ಷಕ ದಿ.ಮೊಯ್ದಿನ್ ಅವರ ಪುತ್ರಿ. ಇಬ್ರಾಹಿಂ ಕಿರಿಯ ಸೋದರ ಅಬ್ದುಲ್ ವಾಹಿದ್ ಗೋವಾದಲ್ಲಿ ಇಂಜಿನಿಯರ್ ಆಗಿದ್ದು, ಸುದ್ದಿ ತಿಳಿದ ತಕ್ಷಣವೇ ಊರಿನತ್ತ ಹೊರಟಿದ್ದಾರೆ.
May 23, 2010
Subscribe to:
Post Comments (Atom)
No comments:
Post a Comment