VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 17, 2010

ಬೆಂಗಳೂರು ಮತ್ತು ಪುತ್ತೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರ ಬಂಧನ. ಕೂಡಲೇ ಬಿಡುಗಡೆಗೊಳಿಸುವಂತೆ ಪಿ.ಎಫ್.ಐ. ಒತ್ತಾಯ

ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಪಿ.ಎಫ್.ಐ. ನಾಯಕರ ಮನೆಗೆ ದಾಳಿ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬೆಂಗಳೂರು ನಗರ ಘಟಕದ ಪಿ.ಎಫ್.ಐ. ಅಧ್ಯಕ್ಷ ಮಹಮ್ಮದ್ ತಾಹಿರ್ ಪೊಲೀಸರು ಯಾವುದೇ ರೀತಿಯ ವಾರಂಟ್ ಇಲ್ಲದೆ ಸಂಘಟನೆಯ ನಾಯಕರ ಮನೆಗೆ ದಾಳಿ ನಡೆಸಿ ಮನೆಯನ್ನು ಶೋಧಿಸಿ ಅವರುಗಳನ್ನು ಅಕ್ರಮವಾಗಿ ಕರೆದೊಯ್ದಿದ್ದಾರೆ. ಇದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವುದು ಅಪರಾಧ. ಹೀಗಿರುವಾಗ ಬಿ.ಜೆ.ಪಿ. ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ವಿನಾಕಾರಣ ಪಿ.ಎಫ್.ಐ. ನಾಯಕರನ್ನು ಬಂಧಿಸಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ. ಬಂಧಿತರನ್ನು ಗೌರವಯುತವಾಗಿ ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಸಂಘಟನೆ ಈ ಬಗ್ಗೆ ಜನಾಂದೋಲನ ಹಮ್ಮಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಗಲಭೆ ನಡೆಸಲು ಲಂಚ ಪಡೆದು ಸಿಕ್ಕಿಬಿದ್ದ ಮುತಾಲಿಕನನ್ನು ಬಂಧಿಸುವಂತೆ ಒತ್ತಾಯಿಸಿ ಪಿ.ಎಫ್.ಐ. ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ. ಇದನ್ನು ಸಹಿಸದ ಫ್ಯಾಸಿಸ್ಟ್ ಸರಕಾರ ಈ ರೀತಿ ಅಕ್ರಮ ಬಂಧನ ನಡೆಸುವ ಮೂಲಕ ಸೇಡು ತೀರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

No comments: