VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಬೆಳ್ಳಾರೆ : ವಿದ್ಯಾರ್ಥಿನಿ ಈಗ ಜನಪ್ರತಿನಿಧಿ!


ಸುಳ್ಯ, ಮೇ 28: ರಾಜಕಾರಣಿಯಾಗಿ ಜನಪ್ರತಿನಿಗಳಾಗಿ ಪರೀಕ್ಷೆ ಬರೆದು ಪದವಿ ಸಂಪಾದಿಸಿದ ಕಥೆ ಕೇಳಿದ್ದೀರಿ. ಆದರೆ ವಿದ್ಯಾರ್ಥಿ ಜೀವನದಲ್ಲೇ ಜನಪ್ರತಿನಿಧಿಗಳಾಗುವುದು ಬಲು ಅಪರೂಪ. ಅಂಥದ್ದೊಂದು ಸಾಧನೆ ಮಾಡಿದ ಕೀರ್ತಿ ಈ ಡಿಪ್ಲೊಮಾ ವಿದ್ಯಾರ್ಥಿನಿ ಸವಿತಾರಿಗೆ ಸಲ್ಲಬೇಕು.

ಗ್ರಾ.ಪಂ. ಚುನಾವಣೆಯಲ್ಲಿ ವಿಜಯ ಸಾಧಿಸಿದ ಹೆಮ್ಮೆ ಯಿಂದ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದಿಂದ ಹೊರಗೆ ಬರುತ್ತಿದ್ದಂತೆ ಸವಿತಾರ ಕಣ್ಣುಗಳಲ್ಲಿ ಭವಿಷ್ಯದ ಕನಸು, ಹೊಸ ನಿರೀಕ್ಷೆ. ದಿನಂಪ್ರತಿ ಈಕೆ ಓಡಾಡುವ ಕ್ಯಾಂಪಸ್ ತುಂಬಾ ಖುಷಿ.

ಸವಿತಾ ಕಾಲೇಜು ಕ್ಯಾಂಪಸ್‌ನಿಂದ ರಾಜಕೀಯ ಪಡಸಾಲೆಗೆ ಬಂದಿದ್ದಾರೆ. ಗ್ರಾ.ಪಂ. ಚುನಾವಣಾ ಪರೀಕ್ಷೆಯಲ್ಲಿ ಪಾಸೂ ಆಗಿದ್ದಾರೆ. ಇದೀಗ ಕಾಲೇಜು ಪರೀಕ್ಷೆ ಎದುರಿಸುತ್ತಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಬೆಳ್ಳಾರೆ ಗ್ರಾ.ಪಂ.ನ ಪೆರುವಾಜೆ ವಾರ್ಡ್ ಜನಪ್ರತಿನಿಯಾಗಿ ಆಯ್ಕೆಗೊಂಡಿ ರುವ ಸವಿತಾ, ಪೆರುವಾಜೆ ಗ್ರಾಮದ ನೀರ್ಕಜೆ ಲಿಂಗಪ್ಪ ಗೌಡ - ಸಾವಿತ್ರಿ ದಂಪತಿಯ ಮಕ್ಕಳಲ್ಲಿ ಎರಡನೆಯವರು.

ವಿಶೇಷವೆಂದರೆ ಇದು ಸವಿತಾ ಮತ ಚಲಾಯಿಸಿದ ಪ್ರಥಮ ಗ್ರಾ.ಪಂ. ಚುನಾವಣೆ. ಈಕೆಯ ಮೊದಲ ಪಂಚಾಯತ್ ಮತವೇ ಈಕೆಗೆ. ಇಂಥ ಪ್ರಕ್ರಿಯೆ ನಿಜಕ್ಕೂ ಅಪರೂಪ. ಸವಿತಾ ಪ್ರಥಮವಾಗಿ ಮತ ಚಲಾಯಿಸಿದ್ದು ಕಳೆದ ಲೋಕಸಭೆ ಚುನಾವಣೆಯಲ್ಲಿ. ಸವಿತಾಗೆ ಈಗ ಕೇವಲ 21 ವರ್ಷ.
ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾಣಿಯೂರಿ ನಲ್ಲಿ ಪ್ರೌಢ ಶಿಕ್ಷಣ, ಬೆಳ್ಳಾರೆ ಪ.ಪೂ.ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಸವಿತಾ, ಪ್ರಸ್ತುತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರೋನಿಕ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ.

ಸಮಾಜ ಸೇವೆಯ ಕನಸು ಹೊಂದಿರುವ ಸವಿತಾ ಶಿಕ್ಷಣದ ಯಾವುದೇ ಹಂತಗಳಲ್ಲೂ ನಾಯಕಿಯಾದವರಲ್ಲ. ಆದರೆ ಇದೀಗ ಜನನಾಯಕಿಯಾಗಿದ್ದಾರೆ.
ಇತ್ತೀಚಿನವರೆಗೂ ಬಿಜೆಪಿಯ ಸಕ್ರಿಯ ಬೆಂಬಲಿಗರು ಮತ್ತು ಕಾರ್ಯಕರ್ತರಾಗಿದ್ದ ಈಕೆಯ ಕುಟುಂಬ ಈ ಬಾರಿಯಿಂದ ‘ಕೈ’ಗೆ ಜೈ ಎಂದವರು. ಯಾಕೆ ಅಂತ ಕೇಳಿದರೆ ಸವಿತಾ ಹೇಳುತ್ತಾರೆ-‘ಗ್ರಾಮ ಮಟ್ಟದ ಸವಲತ್ತು ನೀಡು ವಲ್ಲಿಯೂ ಪಕ್ಷ ನೋಡಬಾರದು. ಹಾಗಾದಲ್ಲಿ ಜನಸೇವೆ ಮಾಡಲಾಗುವುದಿಲ್ಲ’.

‘ಡಿಪ್ಲೊಮಾ ಪದವಿ ಪೂರ್ಣಗೊಂಡ ಬಳಿಕ ಶಿಕ್ಷಣ ನಿಲ್ಲಿಸುತ್ತೇನೆ. ಹಾಗಾಗಿ ಜನಸೇವೆಗೆ ಸಮಯ ಸಿಗುತ್ತದೆ. ಈಗೇನಿದ್ದರೂ ಪರೀಕ್ಷೆಯೆಡೆಗೆ ಗಮನ ಎಂದರು ಸವಿತಾ.

ಅಧ್ಯಕ್ಷ ಸ್ಥಾನ ದೊರೆತರೆ?: ಇಂಥದ್ದೊಂದು ಪ್ರಶ್ನೆಯನ್ನು ಮುಂದಿರಿಸಿದಾಗ ‘ಅಧ್ಯಕ್ಷ ಸ್ಥಾನ ದೊರೆತರೆ ಖಂಡಿತ ಸ್ವೀಕರಿಸುವೆ. ಕೆಲಸ ಮಾಡುವ ಸಾಮರ್ಥ್ಯ ನನಗಿದೆ. ಮೀಸಲಾತಿ ಬಂದರೆ ನನ್ನ ಇಚ್ಚೆ ಯನ್ನು ನಾಯಕರ ಮುಂದೆಯೂ ಇಡುತ್ತೇನೆ’ ಎನ್ನುತ್ತಾರೆ ಸವಿತಾ.
ಗ್ರಾ.ಪಂ.ಚುನಾವಣೆಯಲ್ಲಿ ಸವಿತಾರ ಚಿಹ್ನೆ ‘ಕೊಡೆ’ ಯಾಗಿತ್ತು. ತನ್ನ ಪ್ರತಿಸ್ಪರ್ಗಿಂತ 50 ಅಕ ಮತ ಪಡೆದು ಸವಿತಾ ವಿಜಯಿಯಾಗಿದ್ದಾರೆ.

No comments: