VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಮೋದಿ ಹಾಜರ್-ದುರದೃಷ್ಟಕರ ಸಂಗತಿ: ವೀರಪ್ಪ ಮೊಯ್ಲಿ


2002ರಲ್ಲಿ ನಡೆದ ಗೋಧ್ರೋತ್ತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಮುಂದೆ ನರೇಂದ್ರ ಮೋದಿ ಹಾಜರಾಗುತ್ತಿರುವುದಕ್ಕೆ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ, ಇದೊಂದು ದುರದೃಷ್ಟಕರ ಸಂಗತಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ತನಿಖಾ ತಂಡದ ಎದುರು ಹಾಜರಾಗುತ್ತಿರುವುದು ಇದೇ ಮೊದಲ ಬಾರಿಗೆ ಎಂದು ದೂರಿದೆ.

ವಿಶೇಷ ತನಿಖಾ ತಂಡದ ಎದುರು ಮುಖ್ಯಮಂತ್ರಿಯೊಬ್ಬರು ಹಾಜರಾಗುತ್ತಿರುವುದು ದುರದೃಷ್ಟಕರ. ಆದರೆ ಅಂತಹ ಸಂದರ್ಭವನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ತಂದುಕೊಂಡರು ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮೋದಿ ವಿಶೇಷ ತಂಡದ ಮುಂದೆ ಹಾಜರಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನೇಮಕಗೊಂಡ ವಿಶೇಷ ತನಿಖಾ ತಂಡವೇ ನರೇಂದ್ರ ಮೋದಿ ಅವರನ್ನು ತನಿಖೆಗೆ ಒಳಪಡಿಸುತ್ತಿದೆ. ಹಾಗಾಗಿಯೇ ಎಸ್‌ಐಟಿ ಅವರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು ಎಂದು ವಿವರಿಸಿದರು.

ಗೋದ್ರಾದಲ್ಲಿ ಏನು ನಡೆಸಿದ್ದಾರೆ ಎಂಬುದು ಮೋದಿಗೆ ತಿಳಿದಿದೆ ಎಂದ ಮೊಯ್ಲಿ, ಯಾರೊಬ್ಬರು ಕೂಡ ಈ ದೇಶದ ಕಾನೂನಿಗಿಂತ ಮಿಗಿಲಲ್ಲ. ಪ್ರತಿಯೊಬ್ಬರು ಇಲ್ಲಿ ಕಾನೂನಿಗೆ ಸಮಾನರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

No comments: