VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 23, 2010

ಪೊಲೀಸರು ನನಗೆ ಮರ್ಯಾದೆ ಕೊಡುತ್ತಿಲ್ಲ: ಆಚಾರ್ಯ ಅಳಲು


ಬೆಂಗಳೂರು: ಪೊಲೀಸ್‌ ಅಧಿಕಾರಿಗಳಿಂದ ತಮ್ಮ ಮಾತಿಗೆ ಕನಿಷ್ಠ ಮನ್ನಣೆಯೂ ದೊರೆಯದ ಗೃಹ ಇಲಾಖೆ ಯಿಂದ ತಮ್ಮನ್ನು ಮುಕ್ತರಾಗಿಸುವಂತೆ ಗೃಹ ಸಚಿವ ಡಾ. ವಿ.ಎಸ್‌. ಆಚಾರ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಮ್ಮ ನೇತೃತ್ವದ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡಬೇಕೆಂಬುದು ನನ್ನ ಬಯಕೆ. ಹಣಕಾಸು ಇಲ್ಲವೆ ಇಂಧನ ಖಾತೆ ನಿರ್ವಹಿಸಲು ಸಿದ್ಧನಿದ್ದೇನೆ. ಈ ಇಲಾಖೆಯಲ್ಲಂತೂ ತಮ್ಮನ್ನು ಮುಂದುವ ರೆಸಬೇಡಿ. ನಿಮ್ಮಿಂದ ಇದು ಸಾಧ್ಯವಾಗ ದಿದ್ದರೆ ನನ್ನನ್ನೂ ಜೂನ್‌ ವೇಳೆಗೆ ತೆರ ವಾಗಲಿರುವ ರಾಜ್ಯಸಭೆಗೆ ಕಳುಹಿಸಿಕೊ ಡುವಂತೆ ಮನವಿ ಮಾಡಿದ್ದಾರೆ.
ಗೃಹ ಸಚಿವರಾಗಿದ್ದರೂ ತಾವು ಖಾತೆಗೆ ಸಂಬಂಧಿಸಿದ ಯಾವ ವಿಷಯಗಳಲ್ಲೂ ಸ್ವತಂತ್ರರಲ್ಲ. ಪೋಲೀಸ್‌ ಮಹಾ ನಿರ್ದೇಶಕರಿಂದ ಹಿಡಿದು ಬೆಂಗ ಳೂರು ನಗರದ ಪೋಲೀಸ್‌ ಕಮೀಷನರ್‌ ಅವರಂತಹ ಅಧಿಕಾರಿಗಳು ತಮ್ಮ ಮಾತಿಗೆ ಕನಿಷ್ಟ ಮನ್ನಣೆ ನೀಡುತ್ತಿಲ್ಲ.
ಪ್ರಮುಖ ಜಾಗಗಳಲ್ಲಿರುವ ಅಧಿಕಾರಿ ಗಳು ತಾವು ಏನೇ ಸೂಚನೆ ನೀಡಲು ಹೋದರೂ, ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳೋಣ ಎಂದು ಹೇಳುತ್ತಾರೆ.
ಗೃಹ ಖಾತೆಯಂತಹ ಜಾಗದಲ್ಲಿ ಕುಳಿತು ತಾವು ಸರ್ಕಾರಕ್ಕೆ ಕಿರಿ ಕಿರಿ ಉಂಟು ಮಾಡುವ ಅಥವಾ ಮುಖ್ಯಮಂತ್ರಿಗಳಿಗೆ ಅಗೌರವ ಉಂಟು ಮಾಡುವ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕೂ ಗೃಹ ಸಚಿವರಾಗಿ ಕೆಲಸ ಮಾಡಲು ತಾವು ತಯಾರಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಗೃಹ ಖಾತೆ ಪಡೆದರೂ ಮುಕ್ತವಾಗಿ ಕಾರ್ಯ ನಿರ್ವಹಿಸಲಾಗದ ಪರಿಸ್ಥಿತಿ ಆಚಾರ್ಯ ಅವರ ನೋವಿಗೆ ಕಾರಣವಾಗಿದ್ದು ಈ ಅಂಶವನ್ನು ಅವರು ಸಂಘಪರಿವಾರದ ನಾಯಕರಿಗೂ ವಿವರಿಸಿದ್ದಾರೆ.ವಿಧಾನಸೌಧದಲ್ಲಿ ನೀಡಿರುವ ಕಛೇರಿ ಅಕ್ಷರಶಃ ಟಪಾಲು ಕೇಂದ್ರದಂತಾಗಿದೆಯೇ ಹೊರತು ಇನ್ನೇನೂ ಅಲ್ಲ ಎಂದೂ ಆಚಾರ್ಯ ಸಂಕಟ ತೋಡಿಕೊಂಡಿದ್ದಾರೆ.

No comments: