VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 26, 2010

ಮಗಳ ರಕ್ಷಣೆಗೆ ತಂದೆಯ ಮೊರೆ:ಕಡೆಕಾರ್ ಪ್ರಕರಣದ ಹಿಂದೆ ವೇಶ್ಯಾವಾಟಿಕೆ ಜಾಲದ ಶಂಕೆ

ಉಡುಪಿ: ಮಗಳ ಮೇಲೆ ತಂದೆ ಅತ್ಯಾಚಾರವೆಸಗಿದ ಎಂಬ ಆರೋಪ ಮತ್ತು ನಂತರ ನಡೆದ ಹಲ್ಲೆ ಇತ್ಯಾದಿ ಪ್ರಕರಣದ ಹಿಂದೆ ಹೆಣ್ಣು ಮಾರಾಟ ಹಾಗೂ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿರುವ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿದೆ.

ಕಟಪಾಡಿ, ಕಲ್ಯಾಣಪುರ ಕಡೆಕಾರು ಕಿದಿಯೂರು ಮತ್ತು ಅಂಬಲಪಾಡಿ ಗ್ರಾಮಗಳಿಗೆ ಸೇರಿದ ಹಾಗೂ ಈ ವ್ಯಾಪ್ತಿಗಳಲ್ಲಿ ಗುಪ್ತವಾಗಿ ಕಾರ್ಯಾಚರಿ ಸುತ್ತಿರುವ ಕೆಲವು ಮಂದಿ ಸಂಶಯಾಸ್ಪದ ವ್ಯಕ್ತಿಗಳು ಈ ಇಡೀ ಪ್ರಕರಣದ ಹಿಂದೆ ಕೈಯಾಡಿಸಿರುವುದು ಇದೀಗ ಸ್ಪಷ್ಟವಾಗಿದೆ.

ಗಂಡ ಸೇಸಪ್ಪ ಸಾಲ್ಯಾನ್ (41) ಹಾಗೂ ಹೆಂಡತಿ ಅನಿತಾ ಇವರ ನಡುವಿನ ಜಗಳವನ್ನು ಈ ವ್ಯಕ್ತಿಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ದುರುಪಯೋಗಪಡಿಸಿರುವುದು ಪ್ರಸ್ತುತ ಖಚಿತವಾಗಿದೆ. ಗಂಡನ ಮೇಲೆ ಹೆಂಡತಿಗಿದ್ದ ಅಸಮಾಧಾನ ಮತ್ತು ಅಪನಂಬಿಕೆಯನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಂಡು ಈ ವ್ಯಕ್ತಿಗಳು ಹೆಂಡತಿಯ ಮೂಲಕವೇ ಗಂಡನನ್ನು ರಹಸ್ಯವಾಗಿ ಕೊಲೆ ಮಾಡಿಸುವ ಸಂಚು ರೂಪಿಸಿ ಅಂತಿಮ ಹಂತದಲ್ಲಿ ಈ ಪ್ರಯತ್ನದಲ್ಲಿ ವಿಫಲರಾದರು ಎಂದು ಶಂಕಿಸಲಾಗಿದೆ.

ವಿವಿಧ ಆಸೆ ಆಮಿಷಗಳನ್ನು ಒಡ್ಡಿ ಮಗಳನ್ನು ಸಹ ತಂದೆಯ ವಿರುದ್ಧ ಎತ್ತಿ ಕಟ್ಟಲು ಯಶಸ್ವಿಯಾದ ಈ ವ್ಯಕ್ತಿಗಳು ತಾವು ರೂಪಿಸಿದ ಸೇಸಪ್ಪ ಸಾಲ್ಯಾನ್ ಹತ್ಯೆ ಸಂಚನ್ನು ಅವರ ಪತ್ನಿ ಹಾಗೂ ಮಗಳ ಮೂಲಕವೇ ಕಾರ್ಯರೂಪಕ್ಕಿಳಿಸಲು ಯತ್ನಿಸಿ ವಿಫಲ ರಾದರು.

ರಾತ್ರಿಯ ಊಟದ ಜೊತೆಗೆ ಸೇಸಪ್ಪರ ಅರಿವಿಗೆ ಬಾರದಂತೆ ಸಯನೈಡ್ ಬೆರೆಸಿ ಕೊಡುವ ಮೂಲಕ ಅವರನ್ನು ಕೊಲೆ ಮಾಡುವುದು ಹಾಗೂ ಕೊನೆಗೆ ಸೇಸಪ್ಪ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡರೆಂದು ಕತೆ ಕಟ್ಟಿ, ಪ್ರಕರಣಕ್ಕೆ ಮಂಗಳ ಹಾಡುವುದು ಈ ಸಂಚಿನ ಉದ್ದೇಶವಾಗಿರಬಹುದೆಂದು ಸಂಶಯಿಸಲಾಗಿದೆ.

ತಾಯಿ ಹಾಗೂ ಮಗಳು ಸೇಸಪ್ಪರನ್ನು ಕೊಲ್ಲುವ ಉದ್ದೇಶದಿಂದ ಸಯನೈಡ್ ಸಂಗ್ರ ಹಿಸಲು ಗುಟ್ಟಾಗಿ ಪ್ರಯತ್ನಿಸಿದ ರಾದರೂ, ಈ ಗುಟ್ಟು ಗುಟ್ಟಾಗಿಯೇ ಉಳಿಯದೆ ಬಯಲಾದ ಹಿನ್ನಲೆಯಲ್ಲಿ ಹತ್ಯೆ ಸಂಚು ವಿಫಲಗೊಂಡಿತೆಂದು ಹೇಳಲಾಗಿದೆ. ಸೇಸಪ್ಪರ ಪ್ರಕಾರ ಪತ್ನಿ ಅನಿತಾ ಕಳೆದ ಕೆಲವು ವರ್ಷಗಳಿಂದ ಪರ ಪುರುಷರೊಂದಿಗೆ ಅಕ್ರಮ ಸಂಬಂಧದಲ್ಲಿದ್ದಾಳೆ. ಐದು ವರ್ಷಗಳ ಹಿಂದೆ ಈ ಬಗ್ಗೆ ಬಂಧುಗಳನ್ನು ಸೇರಿಸಿ ಮನೆಯಲ್ಲಿ ಮಾತುಕತೆ ನಡೆಸಲಾಗಿದೆ. ಮಾತ್ರವಲ್ಲ, ಮಾತುಕತೆ ಬಳಿಕ ಸಂಬಂಧಿಗಳ ಸಮ್ಮುಖವೇ ಪತ್ನಿ ಅನಿತಾ ವರ್ತೆ ಪಂಜುರ್ಲಿ ದೈವದ ಎದುರು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣವನ್ನೂ ಮಾಡಿದ್ದಳಂತೆ.

ಅನಿತಾ, ಸೇಸಪ್ಪ ಸಾಲ್ಯಾನ್ರವರ ಮಾವನ ಮಗಳು. ಸೇಸಪ್ಪರನ್ನು ಮದುವೆ ಆಗುವ ಮೊದಲಿನಿಂದಲೂ ಈಕೆಯ ಗುಣ ನಡತೆ ಅಷ್ಟೇನೂ ಚೆನ್ನಾಗಿರಲಿಲ್ಲ ಎಂಬುದು ಇವರ ಸಂಬಂಧಿಕರ ಅಭಿಪ್ರಾಯ.

ಮದುವೆಯಾಗಿ ಪತ್ನಿಯಿಂದಲೇ ತಿರಸ್ಕರಿಸಲ್ಪಟ್ಟ ನಮ್ಮ ನೆಂಟನೇ ಕಳೆದ ವರ್ಷದಿಂದ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದಾನೆ. ನಾನಿಲ್ಲದ ವೇಳೆ ಮನೆಗೆ ಬರುವ ಈತನ ಹಿಡಿತಕ್ಕೆ ಸಿಲುಕಿರುವ ಪತ್ನಿ ಇದೀಗ ಆತನ ಆಣತಿಯಂತೆ ತನ್ನ ವಿರುದ್ದ ತಿರುಗಿ ಬಿದ್ದಿದ್ದಾಳೆ ಎಂದು ಸೇಸಪ್ಪ ದೂರಿದ್ದಾರೆ. ಪತ್ನಿಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಈ ವ್ಯಕ್ತಿ ಪ್ರಸ್ತುತ ಮಗಳನ್ನೂ ಒಳಗೆ ಹಾಕಿದ್ದಾನೆಂದು ಆರೋಪಿಸಿರುವ ಸೇಸಪ್ಪ ಇದೀಗ ಈತನೇ ತನ್ನ ಪತ್ನಿ ಹಾಗೂ ಮಕ್ಕಳನ್ನು ಹಿಡಿತದಲ್ಲಿಟ್ಟು ಕೊಂಡು ತನ್ನ ವಿರುದ್ದ ಷಡ್ಯಂತ್ರ ರೂಪಿಸುತ್ತಿದ್ದಾನೆಂದು ಅಪಾದಿಸಿದ್ದಾರೆ. ಇಬ್ಬರು ಅಪ್ರಾಪ್ತ ಪ್ರಾಯದ ಹೆಣ್ಣು ಮಕ್ಕಳು (ಒಬ್ಬಾಕೆ 10ನೇ ತರಗತಿ, ಹಾಗೂ ಇನ್ನೊಬ್ಬಾಕೆ ಎಂಟನೆ ತರಗತಿ ಹಾಗೂ ಪತ್ನಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಈತ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಇವರನ್ನು ತಮ್ಮ ದಂಧೆಗಳಿಗೆ ದುರುಪಯೋಗಪಡಿಸುವ ಸಾಧ್ಯತೆಗಳಿವೆ ಎಂದೂ ಸೇಸಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮಗಳ ರಕ್ಷಣೆಗೆ ಮೊರೆ

ಅಪ್ರಾಪ್ತ ಪ್ರಾಯದ ಮಗಳನ್ನು ಪತ್ನಿ ಹಾಗೂ ಪರ ಪುರುಷರ ಹಿಡಿತದಿಂದ ಕೂಡಲೇ ಬಿಡುಗಡೆಗೊಳಿಸುವಂತೆ ಸೇಸಪ್ಪ ಸಿಡಬ್ಲ್ಯುಸಿಗೆ ದೂರು ನೀಡಿದ್ದಾರೆ.

ದಂಧೆಕೋರರು ಮಗಳನ್ನು ಶಾಲೆಗೆ ಕಳುಹಿಸುತ್ತಿಲ್ಲ, ಎಪ್ರಿಲ್ ಒಂದರಿಂದ ಆರಂಭಗೊಳ್ಳುವ 10ನೇ ತರಗತಿ ಪರೀಕ್ಷೆಗೂ ಕಳುಹಿಸದೇ ಮಗಳ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುವ ಸಂಚು ಹೆಣೆದಿದ್ದಾರೆ. ಈ ಸಂಚು ಯಶಸ್ವಿಯಾದರೆ ಇದೇ ವ್ಯಕ್ತಿಗಳು ಮಗಳನ್ನು ತಮ್ಮ ಸ್ವಾರ್ಥ ಲಾಭಗಳಿಗೆ ದುರ್ಬಳಕೆ ಮಾಡಬಹುದು. ಆದುದರಿಂದ ಮಗಳನ್ನು ರಕ್ಷಿಸಿ ಶಾಲೆಗೆ ಕಳುಹಿಸುವಂತೆ ಮಾಡಬೇಕೆಂದು ಸೇಸಪ್ಪ ಮನವಿ ಮಾಡಿದ್ದಾರೆ.

No comments: