ಮುಂದಿನ ಮೂರು ವರ್ಷಗಳಿಗೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಲು ಭಾರ್ತಿ ಏರ್‌ಟೆಲ್ ಹಾಗೂ ಸಹಾರಾ ಇಂಡಿಯಾ ಸಂಸ್ಥೆಗಳು ಪೈಪೋಟಿಯಲ್ಲಿವೆ.
ಬಿಸಿಸಿಐ ಮೂಲಗಳ ಪ್ರಕಾರ, ಈ ಎರಡೂ ಸಂಸ್ಥೆಗಳು ತಮ್ಮ ಅರ್ಹತಾ ಪತ್ರಗಳು ಹಾಗೂ ದಾಖಲೆಗಳನ್ನು ಈಗಾಗಲೇ ಮಂಡಳಿಗೆ ಸಲ್ಲಿಸಿವೆ.
ಸೋಮವಾರ ಈ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಟೀಂ ಇಂಡಿಯಾದ ಮುಂದಿನ ನೂತನ ಪ್ರಾಯೋಜಕನ ಆಯ್ಕೆಯನ್ನು ನಡೆಸಲಾಗುತ್ತದೆ.
ಮೂಲಗಳ ಪ್ರಕಾರ, ಸಹಾರಾ ಸಂಸ್ಥೆ ಕೇವಲ ಟೀಂ ಇಂಡಿಯಾಕ್ಕಾಗಿ ಬಿಡ್ ಮಾಡಲಿದ್ದು, ಭಾರ್ತಿ ಏರ್‌ಟೆಲ್ ಟೀಂ ಇಂಡಿಯಾ (ಪ್ರತಿ ಪಂದ್ಯಕ್ಕೆ 2.5 ಕೋಟಿ ರೂಪಾಯಿಗಳು) ಹಾಗೂ ಇಂಡಿಯಾ ಎ ತಂಡ (ಪ್ರತಿ ಪಂದ್ಯಕ್ಕೆ 25 ಲಕ್ಷ ರೂ), ಅಂಡರ್ 19 ತಂಡ ( ಪ್ರತಿ ಪಂದ್ಯಕ್ಕೆ 25 ಲಕ್ಷ ರೂ) ಹಾಗೂ ಭಾರತ ಮಹಿಳಾ ತಂಡ (ಪ್ರತಿ ಪಂದ್ಯಕ್ಕೆ 10 ಲಕ್ಷ ರೂ)ಗಳ ಪ್ರಾಯೋಜಕತ್ವಕ್ಕಾಗಿ ಬಿಡ್ ಮಾಡಲಿದೆ.
ಆದರೆ ಭಾರ್ತಿ ಏರ್‌ಟೆಲ್ ಈ ಬಿಡ್‌ನಲ್ಲಿ ವಿಜಯಿಯಾದರೂ, ಐಸಿಸಿ ಪಂದ್ಯಗಳ ಸಂದರ್ಭ ತನ್ನ ಲೋಗೋಗಳನ್ನು ಪ್ರದರ್ಶಿಸುವಂತಿಲ್ಲ. ಯಾಕೆಂದರೆ ಈಗಾಗಲೇ 2015ರವರೆಗೆ ಐಸಿಸಿ ಪಂದ್ಯಗಳ ಪ್ರಾಯೋಜಕತ್ವವನ್ನು ಮತ್ತೊಂದು ಟೆಲಿಕಾಂ ದೈತ್ಯ ರಿಲಯನ್ಸ್ ವಹಿಸಿಕೊಂಡಿದೆ.
Subscribe to:
Post Comments (Atom)
No comments:
Post a Comment